ಪ್ರೊಫೆಸರ್ ಡಾ. ಸಾಯಿಬಾಬಾ ವಿರುದ್ಧ ಮತ್ತೆ ಹಲ್ಲೆ ನಡೆಸಿದ ಎಬಿವಿಪಿ!

Update: 2016-04-26 05:53 GMT

ಹೊಸದಿಲ್ಲಿ, ಎಪ್ರಿಲ್ 26: ದಿಲ್ಲಿ ವಿಶ್ವವಿದ್ಯಾನಿಲಯದ ಪ್ರೊಫೆಸರ್ ಡಾ. ಜಿ. ಎನ್ ಸಾಯಿಬಾಬರ ಮೇಲೆ ಕ್ಯಾಂಪಸ್‌ನಲ್ಲಿ ಪುನಃ ಹಲ್ಲೆ ನಡೆಸಲಾದ ಘಟನೆ ವರದಿಯಾಗಿದೆ. ಎಬಿವಿಪಿ ಕಾರ್ಯಕರ್ತರು ದೇಶದ್ರೋಹಿ ಎಂದು ಘೋಷಣೆಕೂಗಿ ಹಲ್ಲೆ ನಡೆಸಿದ್ದಾರೆ. ಸಾಯಿಬಾಬಾ ಕೆಲಸಮಾಡುತ್ತಿದ್ದ ರಾಂಲಾಲ್ ಆನಂದ್ ಕಾಲೇಜ್‌ನ ಸ್ಟಾಫ್‌ರೂಂನಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ನಕ್ಸಲ್‌ರೊಂದಿಗೆ ಸಂಬಂಧ ಹೊಂದಿದ್ದಾರೆ ಎಂಬ ಆರೋಪದಲ್ಲಿ ಬಂಧಿಸಲಾಗಿದ್ದ ಅವರನ್ನು ಸಸ್ಪೆಂಡ್ ಮಾಡಲಾಗಿತ್ತು. ಕಾಲೇಜ್‌ಗೆ ಪತ್ರ ನೀಡಲಿಕ್ಕಾಗಿ ಅವರು ಬಂದಿದ್ದರು. ಹಲ್ಲೆಕೋರರನ್ನು ತಡೆಯಲು ಮಾನವಸರಪಳಿ ಮಾಡಿದ ವಿದ್ಯಾರ್ಥಿಗಳಲ್ಲಿ ಒಬ್ಬನನ್ನು ದಿಲ್ಲಿ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಸಂಘದ ಪದಾಧಿಕಾರಿಯೊಬ್ಬ ಥಳಿಸಿದ್ದಾನೆಂದು ದೂರಲಾಗಿದೆ. ಘರ್ಷಣೆ ಸ್ಥಿತಿ ಇದ್ದೂ ಪೊಲೀಸರೋ ಕಾಲೇಜ್ ಅಧಿಕಾರಿಗಳೋ ಮಧ್ಯೆಪ್ರವೇಶಸದಿರುವುದು ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ. ಶೇ. 80ರಷ್ಟು ಅಂಗವೈಕಲ್ಯ ಹೊಂದಿರುವ ಸಾಯಿಬಾಬಾ ವ್ಹೀಲ್ ಚೇರ್‌ನ್ನುಆಶ್ರಯಿಸಿ ಬದುಕುತ್ತಿದ್ದಾರೆ. ಅವರಿಗೆ ಥಳಿಸಿದವರು ಅದನ್ನು ತಡೆಯಲು ಶ್ರಮಿಸದ ಅಧಿಕಾರಿಗಳು ತಪ್ಪೆಸಗಿದ್ದಾರೆ ಎಂದು ಅಧ್ಯಾಪಕ ಯೂನಿಯನ್ ಅಸೋಶಿಯನ್ ಪದಾಧಿಕಾರಿಗಳು ತಿಳಿಸಿದ್ದಾರೆ. ಸೌತ್ ಕ್ಯಾಂಪಸ್‌ನ ಪೊಲೀಸ್ ಚೌಕಿಯ ಎದುರು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಶುಕ್ರವಾರ ಕಾಲೇಜು ದಿನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾಗ ಆಡಿಟೋರಿಯಂನಲ್ಲಿ ಎಬಿವಿಪಿ ಕಾರ್ಯಕರ್ತರು ಸಾಯಿಬಾಬರ ಮೈಗೆ ಕೈಹಾಕಿದ್ದರು.

ಕೆಲಸಕ್ಕೆ ತನ್ನನ್ನು ಮತ್ತೆಸೇರಿಸಿಕೊಳ್ಳಬೇಕೆಂಬ ಸಾಯಿಬಾಬಾರ ಅರ್ಜಿಯನ್ನು ಕಾಲೇಜು ನಿರ್ವಾಹ ಕೌನ್ಸಿಲ್ ನಿಯೋಜನೆ ಸಮಿತಿಯ ಪರಾಮರ್ಶೆಯಲ್ಲಿದೆ.

ಸಾಯಿಬಾಬಾರ ಅರ್ಜಿಗೆ ದಿಲ್ಲಿ ವಿಶ್ವವಿದ್ಯಾನಿಲಯ ಅಧ್ಯಾಪಕ ಅಸೋಶಿಯೇಶನ್‌ನ ಬೆಂಬಲವಿದೆ.ಆದರೆ ಸಾಯಿಬಾಬಾ ದೇಶವಿರೋಧಿಯೆಂದೂ ಮರಳಿ ಕೆಲಸಕ್ಕೆ ತೆಗೆಯಬಾರದೆಂದು ತಡೆಯಲು ಎಬಿವಿಇ ಪ್ರಯತ್ನಿಸುತ್ತಿದೆ ಎಂದು ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News