×
Ad

2 ದಿನ ಮಾತ್ರ ಕೆಲಸ

Update: 2016-04-27 23:57 IST

ಕ್ಯಾರಕಸ್, ಎ. 27: ವೆನೆಝುವೆಲ ಎದುರಿಸುತ್ತಿರುವ ತೀವ್ರ ವಿದ್ಯುತ್ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಅಲ್ಲಿನ ಸರಕಾರಿ ನೌಕರರು ಸೋಮವಾರ ಮತ್ತು ಮಂಗಳವಾರಗಳಂದು ಮಾತ್ರ ಕೆಲಸ ಮಾಡಲಿದ್ದಾರೆ.
ವಿದ್ಯುತ್ತನ್ನು ಉಳಿಸುವ ಪ್ರಯತ್ನವಾಗಿ ಕನಿಷ್ಠ ಎರಡು ವಾರಗಳವರೆಗೆ ಕೆಲಸದ ಅವಧಿಯನ್ನು ಸರಕಾರ ಕಡಿತಗೊಳಿಸುತ್ತಿದೆ ಎಂದು ಅಧ್ಯಕ್ಷ ನಿಕೊಲಸ್ ಮಡುರೊ ಮಂಗಳವಾರ ಘೋಷಿಸಿದರು.
ಭೀಕರ ಬರಗಾಲದ ಹಿನ್ನೆಲೆಯಲ್ಲಿ ದೇಶದ ಅತ್ಯಂತ ದೊಡ್ಡ ಜಲಾಶಯದ ನೀರಿನ ಮಟ್ಟ ಕನಿಷ್ಠ ಉಪಯೋಗ ಮಟ್ಟಕ್ಕೆ ಕುಸಿದಿದೆ ಎಂದು ಅಧಿಕಾರಿಗಳು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News