ಅಮೆರಿಕದ ಬೌದ್ಧಿಕ ಆಸ್ತಿ ಉಲ್ಲಂಘಿಸಿದ ಪಟ್ಟಿಯಲ್ಲಿ ಭಾರತ
Update: 2016-04-27 23:58 IST
ವಾಶಿಂಗ್ಟನ್, ಎ. 27: ಅಮೆರಿಕದ ಒಬಾಮ ಆಡಳಿತವು ಬೌದ್ಧಿಕ ಆಸ್ತಿಯ ಕಳವನ್ನು ತಡೆಯುವ ನಿಟ್ಟಿನಲ್ಲಿಕನಿಷ್ಠ ಪ್ರಯತ್ನಗಳನ್ನು ನಡೆಸಿದ ದೇಶಗಳ ಪಟ್ಟಿಯಲ್ಲಿ ಚೀನಾ, ರಶ್ಯ ಮತ್ತು ಭಾರತಗಳನ್ನು ಇರಿಸಿದೆ. ಅದೇ ವೇಳೆ, ಆನ್‌ಲೈನ್ ಕಾಪಿರೈಟ್ ಉಲ್ಲಂಘನೆಯನ್ನು ತಡೆಯುವಲ್ಲಿ ಸ್ವಿಝರ್‌ಲ್ಯಾಂಡ್ ವಿಫಲವಾಗಿದೆ ಎಂದು ಹೇಳಿದೆ.
ಅಮೆರಿಕದ ವ್ಯಾಪಾರ ಪ್ರತಿನಿಧಿಯ ಕಚೇರಿ ಬಿಡುಗಡೆಗೊಳಿಸಿದ ವಾರ್ಷಿಕ ಪಟ್ಟಿಯು ದಿಗ್ಬಂಧನದ ಬೆದರಿಕೆಯನ್ನೇನೂ ಒಡ್ಡಿಲ್ಲ, ಆದರೆ ಅಂಥ ದೇಶಗಳನ್ನು ಅವಮಾನಕ್ಕೆ ಗುರಿಪಡಿಸಲು ಉದ್ದೇಶಿಸಿದೆ.
2010ರಲ್ಲಿ ಅಮೆರಿಕದ ಬೌದ್ಧಿಕ ಆಸ್ತಿಯ ವೌಲ್ಯ 5 ಲಕ್ಷ ಕೋಟಿ ಡಾಲರ್ ಆಗಿತ್ತು.