ಸಾಮೂಹಿಕ ಪ್ರಾರ್ಥನೆ

Update: 2016-04-29 18:42 GMT

ಅದೊಂದು ಊರು. ಅಲ್ಲ್ಲಿ ಎರಡು ಧರ್ಮಗಳಿಗೂ ತೀವ್ರ ತಿಕ್ಕಾಟ. ಪರಸ್ಪರ ಸ್ಪರ್ಧೆ. ಸಂಘರ್ಷ.
ಒಮ್ಮೆ ಆ ಊರಿಗೆ ಭಯಾನಕ ಬರಗಾಲ ಬಂತು. ಊರವರೆಲ್ಲ ನೀರು ನೀರು ಎಂದು ಚಡಪಡಿಸತೊಡಗಿದರು.
ಹೀಗಿರುವಾಗ ಆ ಧರ್ಮದವರು ಒಂದು ದಿನ ಮಳೆಗಾಗಿ ಊರ ಬಯಲಲ್ಲಿ ಸಾಮೂಹಿಕ ಪ್ರಾರ್ಥನೆಯನ್ನು ಹಮ್ಮಿಕೊಂಡರು.
ಅದಕ್ಕಾಗಿ ಪ್ರಚಾರವನ್ನೂ ಸಾಕಷ್ಟು ಮಾಡಿದರು.
ಇದು ಈ ಧರ್ಮದವರ ತಲೆಯನ್ನು ಕೆಡಿಸಿತು. ಅವರ ಪ್ರಾರ್ಥನೆಗೆ ಆಕಸ್ಮಾತ್ ಮಳೆ ಬಂದು ಬಿಟ್ಟರೆ!? ತಮ್ಮ ಧರ್ಮದ ವರ್ಚಸ್ಸು ಏನಾಗಬೇಕು?
ಆದುದರಿಂದ ಆ ಧರ್ಮದವರ ಸಾಮೂಹಿಕ ಪ್ರಾರ್ಥನೆಯ ದಿನದಂತೆ ಈ ಧರ್ಮದವರೂ ಸಾಮೂಹಿಕ ಪ್ರಾರ್ಥನೆಯನ್ನು ಹಮ್ಮಿಕೊಂಡರು.
ಅವರು ‘ಮಳೆ ಬರಲಿ’ ಎಂದು ಪ್ರಾರ್ಥಿಸುವಾಗ ಇವರು ‘‘ದೇವರೇ ಇವತ್ತೊಂದು ದಿನ ಮಳೆ ಬಾರದಿರಲಿ’’ ಎಂದು ಸಾಮೂಹಿಕವಾಗಿ ಪ್ರಾರ್ಥಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News

ದಾಂಪತ್ಯ
ಶಾಂತಿ
ಬೆಳಕು
ಮಾನ್ಯತೆ!
ವ್ಯಾಪಾರ
ಆಕ್ಸಿಜನ್
ಝಲಕ್
ಸ್ವರ್ಗ
ಗೊಂದಲ!
ಪ್ರಾರ್ಥನೆ
ಆ ಚಿಂತಕ!
ಹರಾಜು !