ಭೂಮಿಯ ಮೇಲಿರುವ ಅತ್ಯಂತ ದುಬಾರಿ ವಸ್ತು ಯಾವುದು?
ನಿಜವೇ ಅಥವಾ ಸುಳ್ಳೇ? ನೈರುತ್ಯ ಬ್ರಿಟನ್‌ನಲ್ಲಿ ಸ್ಥಾಪನೆಯಾಗುತ್ತಿರುವ ಅಣುವಿದ್ಯುತ್ ಸ್ಥಾವರ ಭೂಮಿ ಮೇಲಿನ ಅತ್ಯಂತ ದುಬಾರಿ ವಸ್ತು. ಸಮರ್‌ಸೆಟ್‌ನ ಹಿಂಕ್ಲೆಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಘಟಕ ಅತ್ಯಧಿಕ ವೆಚ್ಚದ ಘಟಕ ಎಂದು ಹೇಳಿಕೊಳ್ಳಲಾಗುತ್ತಿದೆ. ಅಷ್ಟು ದುಬಾರಿಯಾಗುವಂಥದ್ದು ಅಲ್ಲೇನಿದೆ?
ಈ ಘಟಕದ ವಿರುದ್ಧ ನ್ಯಾಯಾಲಯಕ್ಕೆ ಮೊರೆ ಹೋಗಿರುವ ಗ್ರೀನ್‌ಪೀಸ್ ಸ್ವಯಂಸೇವಾ ಸಂಸ್ಥೆಯ ವಾದದ ಪ್ರಕಾರ, ಇದರ ಅಂದಾಜು ಮೌಲ್ಯ 24 ಶತಕೋಟಿ ಪೌಂಡ್. ಇದರಲ್ಲಿ ಸಾಲವಾಗಿ ಪಡೆದ ಹಣಕ್ಕೆ ಪಾವತಿಸುವ ಬಡ್ಡಿಯೂ ಇದರಲ್ಲಿ ಸೇರುತ್ತದೆ. ಯೋಜನೆಗೆ ಒದಗಿಸಿದ ಹಣದ ಪ್ರಮಾಣವನ್ನು ನಿಖರವಾಗಿ ಲೆಕ್ಕಹಾಕಲೂ ಸಾಧ್ಯವಿಲ್ಲ. ಇದರ ನಿರ್ಮಾಣ ವೆಚ್ಚವೇ ಸುಮಾರು 18 ಶತಕೋಟಿ ರೂಪಾಯಿ.
ಈ ಹಣದಲ್ಲಿ ವಿಶ್ವದ ಅತಿ ಎತ್ತರದ ಕಟ್ಟಡ ಎನಿಸಿದ ಬುರ್ಜ್ ಖಾಲಿಫ್ಸ್‌ನಂಥ ಹಲವು ಕಟ್ಟಡಗಳನ್ನು ನಿರ್ಮಿಸಬಹುದು. ದುಬೈನಲ್ಲಿರುವ ಈ ಕಟ್ಟಡದ ವೆಚ್ಚ ಸುಮಾರು 100 ಕೋಟಿ ಪೌಂಡ್. ಬ್ರಹ್ಮಾಂಡದ ರಹಸ್ಯ ಬೇಧಿಸುವ ಪ್ರಯೋಗಕ್ಕೆ ಫ್ರಾನ್ಸ್ ಹಾಗೂ ಸ್ವಿಡ್ಜರ್‌ಲೆಂಡ್‌ನ ಗಡಿ ನಡುವೆ ನಿರ್ಮಿಸಿದ 17 ಮೈಲು ಉದ್ದದ ಲಾರ್ಜ್ ಹ್ಯಾಡ್ರೊನ್ ಕೊಲೈಡರ್‌ಗೆ ತಗುಲಿದ ವೆಚ್ಚ 400 ಕೋಟಿ ಪೌಂಡ್. ಸ್ಯಾನ್‌ಫ್ರಾನ್ಸಿಸ್ಕೊದ ಓಕ್‌ಲ್ಯಾಂಡ್ ಸೇತುವೆ ಅತಿ ಉದ್ದದ ಸೇತುವೆ ಎನಿಸಿಕೊಂಡಿದ್ದು, ಇದು ಭೂಕಂಪ ನಿರೋಧಕ ಸಾಮರ್ಥ್ಯವನ್ನೂ ಹೊಂದಿದೆ. ಇದರ ವೆಚ್ಚ 450 ಕೋಟಿ ಪೌಂಡ್.
ಆದರೆ ಅಣುವಿದ್ಯುತ್ ಸ್ಥಾವರ ಅತ್ಯಂತ ಸಂಕೀರ್ಣ ವ್ಯವಸ್ಥೆ ಹೊಂದಿರುವುದರಿಂದ ಅಷ್ಟು ದುಬಾರಿ ಎನ್ನುವುದು ಗ್ರೀನ್‌ವಿಚ್ ವಿವಿಯ ವಿದ್ಯುತ್ ನೀತಿ ವಿಭಾಗದ ಪ್ರೊಫೆಸರ್ ಸ್ಟೀವ್ ಥಾಮಸ್ ಹೇಳುತ್ತಾರೆ. ಯಾವುದೇ ಅಪಾಯ ಸಾಧ್ಯತೆ ಇಲ್ಲದಂತೆ ಇದನ್ನು ನಿರ್ಮಿಸಿರುವುದು ಕೂಡಾ ವೆಚ್ಚ ಹೆಚ್ಚಳಕ್ಕೆ ಕಾರಣವಾಗಿದೆ.
ಬ್ರಿಟನ್‌ನಲ್ಲಿ 1995ರಲ್ಲಿ ನಿರ್ಮಾಣವಾದ ಸೈಸ್‌ವೆಲ್ ಬಿ ಘಟಕದ ವೆಚ್ಚ 2.3 ಶತಕೋಟಿ ಪೌಂಡ್. ಆದ್ದರಿಂದ ಅಷ್ಟೊಂದು ವೆಚ್ಚವಾಗುತ್ತದೆ ಎಂದರೆ ನಂಬುವುದು ಕಷ್ಟ ಎಂದು ಅವರು ವಿಶ್ಲೇಷಿಸುತ್ತಾರೆ. ಚೀನಾ ನೆರವಿನಲ್ಲಿ ಈ ಘಟಕ ನಿರ್ಮಿಸಲಾಗುತ್ತಿದೆ.