ಒಂದೇ ಒಂದು ನಿಮಿಷದ ವರ್ಕ್ ಔಟ್‌ನಲ್ಲಿ ಫಿಟ್ ಅಂಡ್ ಫೈನ್ ಆಗಿ

Update: 2016-04-30 06:02 GMT

ನೀವು ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿದ್ದು, ಜಿಮ್ ಹಾಗೂ ಕಠಿಣ ವರ್ಕ್ ಔಟ್ ಸೆಷನ್‌ನ ಒತ್ತಡದಿಂದ ಹತಾಶರಾಗಿದ್ದೀರಾ? ಇನ್ನು ಚಿಂತಿಸುವ ಅಗತ್ಯವಿಲ್ಲ. ಸಂಶೋಧಕರ ಪ್ರಕಾರ ಕೇವಲ ಒಂದೇ ನಿಮಿಷದ ತೀವ್ರ ವರ್ಕ್ ಔಟ್‌ನಿಂದ ಇದನ್ನು ಸಾಧಿಸಬಹುದು.

ಒಂದೇ ನಿಮಿಷದ ಕಠಿಣ ಹಾಗೂ ತೀವ್ರ ವ್ಯಾಯಾಮ, ಸುಧೀರ್ಘ ಅವಧಿಯ, ಸಾಂಪ್ರದಾಯಿಕ ತರಬೇತಿ ನೀಡಿದಷ್ಟೇ ಆರೋಗ್ಯ ಪ್ರಯೋಜನ ನೀಡಬಲ್ಲದು ಎಂದು ಮೆಕ್ ಮಾಸ್ಟರ್ ವಿಶ್ವವಿದ್ಯಾನಿಲಯದ ಸಂಶೋಧಕರು ಹೇಳುತ್ತಾರೆ.

ಇದು ಅತ್ಯಂತ ಕಡಿಮೆ ಸಮಯ ಬಳಸಿಕೊಳ್ಳುವ ವರ್ಕ್ ಔಟ್ ತಂತ್ರ ಎಂದು ತಂಡದ ಮುಖ್ತಸ್ಥ ಮಾರ್ಟಿನ್ ಸಿಬಾಲಾ ಹೇಳುತ್ತಾರೆ. ಅಲ್ಪ ಅವಧಿಯ ತೀವ್ರ ಕಠಿಣ ವ್ಯಾಯಾಮ ಪರಿಣಾಮಕಾರಿ ಎನ್ನುವುದು ಅವರ ಅಭಿಮತ.

ಸ್ಪ್ರಿಂಟ್ ಇಂಟರ್ವಲ್ ಟ್ರೈನಿಂಗ್ ಹೇಗೆ ಪ್ರಯೋಜನಕಾರಿ ಎನ್ನುವುದನ್ನು ವಿಜ್ಞಾನಿಗಳು ಅಧ್ಯಯನ ನಡೆಸಿದ್ದಾರೆ. ಹೃದಯ ಹಾಗೂ ಉಸಿರಾಟದ ಫಿಟ್ನೆಸ್ ಹಾಗೂ ಇನ್‌ಸುಲಿನ್ ಸೂಕ್ಷ್ಮತೆಯನ್ನೂ ಅಧ್ಯಯನ ಮಾಡಿದ್ದಾರೆ.

ಹೆಚ್ಚಿನ ಮಂದಿ ವ್ಯಾಯಾಮಕ್ಕೆ ಸಮಯ ಇಲ್ಲ ಎಂದು ಹೇಳುತ್ತಾರೆ. ಆದರೆ ಈ ವಿಧಾನ ಹೆಚ್ಚು ಪರಿಣಾಮಕಾರಿ ಎಂದು ಅಧ್ಯಯನದಿಂದ ಖಚಿತವಾಗಿದೆ ಎಂದು ವಿವರಿಸುತ್ತಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News