ಅಗ್ನಿ ದುರಂತದ ಸವಾಲಿಗೆ ನೀವು ಸಜ್ಜಾಗಿದ್ದೀರಾ?
ಕಟ್ಟಡಗಳಲ್ಲಿ ಅಗ್ನಿದುರಂತಗಳು ಸಾಮಾನ್ಯ. ಇದರಿಂದ ಕಟ್ಟಡದ ನಿವಾಸಿಗಳ ಜೊತೆಗೆ ನೆರೆಹೊರೆಯ ಮಂದಿಗೂ ಸಮಸ್ಯೆಯಾಗುತ್ತದೆ. ಇಂದು ಪ್ರತೀ ನಗರ ಕೆಲವು ವಸತಿ ಯೋಜನೆಗಳನ್ನು ಹೊಂದಿದೆ. ಖರೀದಿದಾರರು ಆಸ್ತಿಯಲ್ಲಿ ಹೂಡಿಕೆ ಮಾಡುವ ಮೊದಲು ಕಟ್ಟಡ ಸುರಕ್ಷೆಯ ಬಗ್ಗೆ ಗಮನಹರಿಸಲೇಬೇಕು.
ಸುರಕ್ಷೆ ಸಂಹಿತೆ ಪರೀಕ್ಷೆ
ಪ್ರತೀ ಅಗ್ನಿ ವಲಯ, ವಸತಿ ದರ, ಕಟ್ಟಡ ನಿರ್ಮಾಣ ವಿಧ ಮೊದಲಾಗಿ ರಾಷ್ಟ್ರೀಯ ಬಿಲ್ಡಿಂಗ್ ಕೋಡ್ (NBC) ಕಟ್ಟಡ ನಿರ್ಮಾಣದ ಮೇಲೆ ನಿಯಂತ್ರಣಗಳನ್ನು ಹೇರಿದೆ. ರಚನಾತ್ಮಕ ಮತ್ತು ರಚನಾತ್ಮಕವಲ್ಲದ ಅಗ್ನಿ ನಿರೋಧಕ ಮತ್ತು ಇತರ ನಿಯಂತ್ರಣಗಳೂ ಇವೆ. ಅಗ್ನಿ, ಹೊಗೆ, ಅನಿಲ ಮೊದಲಾದ ಅಪಾಯಗಳಲ್ಲಿ ಕಟ್ಟಡಗಳಿಂದ ಜನರನ್ನು ರಕ್ಷಿಸುವ ಉದ್ದೇಶದಿಂದ ಇದನ್ನು ರಚಿಸಲಾಗಿದೆ. ಹೊಸ ಆಸ್ಟಿ ಖರೀದಿಸುವ ಯೋಜನೆ ಹಾಕುತ್ತಿದ್ದಲ್ಲಿ ಈ ಕೆಳಗಿನ ಸೌಲಭ್ಯಗಳನ್ನು ಗಮನಿಸಲೇಬೇಕು.
ಸ್ವಯಂಚಾಲಿತ ಸ್ಪ್ರಿಂಕ್ಲರ್ ವ್ಯವಸ್ಥೆ
ಹೊಸ ಯೋಜನೆಗಳಲ್ಲಿ ಈ ವ್ಯವಸ್ಥೆಯ ಸ್ಪ್ರಿಂಕ್ಲರ್ ಹೆಡ್ಸ್ ಇರುವ ನೀರಿನ ಕೊಳವೆಗಳು ಸೂಕ್ತ ಎತ್ತರದಲ್ಲಿ, ಸೂಕ್ತ ಅಂತರದಲ್ಲಿ ಸ್ವಯಂಚಾಲಿತಗೊಳ್ಳುವಂತೆ ಇವೆಯೇ ಎಂದು ಗಮನಿಸಿ. ನೀರನ್ನು ಹೊರ ಬಿಡುವ ಮೂಲಕ ಅಗ್ನಿಯನ್ನು ನಿಯಂತ್ರಿಸಿ ಇಲ್ಲವೇ ದಮನಿಸಿ.
ಸ್ವಯಂಚಾಲಿತ ಅಗ್ನಿ ಪತ್ತೆ ವ್ಯವಸ್ಥೆ
ಅಗ್ನಿ ಅಲಾರಂ ವ್ಯವಸ್ಥೆಯಲ್ಲಿ ಬೆಂಕಿಯನ್ನು ಸ್ವಯಂಚಾಲಿತವಾಗಿ ಪತ್ತೆ ಮಾಡುವುದು ಮತ್ತು ಅಲಾರಾಂ ಹೊಡೆಯುವುದು ಸೇರಿದೆ.
ನಿರ್ಮಾಣದಲ್ಲಿ ಸುಡದ ವಸ್ತುಗಳ ಬಳಕೆ
ಸುಲಭವಾಗಿ ಉರಿಯುವ ವಸ್ತುಗಳ ಜೊತೆಗೆ ಸುಡದೆ ಇರುವ ವಸ್ತುಗಳನ್ನು ಮಿಶ್ರ ಮಾಡುವ ಮೂಲಕ ಅಗ್ನಿ ಅಥವಾ ಬಿಸಿಯ ಸಂದರ್ಭದಲ್ಲಿ ರಕ್ಷಣೆ ಒದಗಿಸುವ ಉಪಾಯಗಳನ್ನು ಅನುಸರಿಸಲಾಗಿದೆಯೆ? ಪೋರ್ಟಲ್ಯಾಂಡ್ ಸಿಮೆಂಟ್ ಕಾಂಕ್ರೀಟ್, ಜಿಪ್ಸಂ ಕಾಂಕ್ರೀಟ್ ಅಥವಾ ಮ್ಯಾಗ್ನೆಸೈಟ್ ಕಾಂಕ್ರೀಟ್ ಗಳಲ್ಲಿ ಮರಳು, ಗ್ರಾವೆಲ್, ವಿಸ್ತರಿತ ವರ್ಮಿಕ್ಯುಲೈಟ್, ವಿಸ್ತರಿತ ಅಥವಾ ವೆಸಿಕ್ಯುಲರ್ ಸ್ಲಾಗ್ಸ್, ಡಯಟೊಮ್ಯಾಸಿಯಸ್ ಸಿಲಿಕಾ, ಪರ್ಟಲೈಟ್ ಅಥವಾ ಪ್ಯುಮೈಸ್ ಇತ್ಯಾದಿ ಸೇರಿದೆ. ಖರೀದಿ ಮಾಡುವ ಮೊದಲು ಅಭಿವೃದ್ಧಿ ಮಾಡುವವರನ್ನು ಕೇಳಿ.
ಮುಕ್ತ ಜಾಗ
ಸೂಕ್ತ ಮುಕ್ತ ಜಾಗವನ್ನು ವಸತಿ ಕಟ್ಟಡಗಳ ಸುತ್ತಲೂ ಇರುವಂತೆ ಗಮನಿಸಿ. ಆ ಮೂಲಕ ಅಗ್ನಿ ದುರಂತದ ಸಂದರ್ಭ ರಕ್ಷಣಾ ವಾಹನಗಳಿಗೆ ಓಡಾಡಲು ಸ್ಥಳವಿರಬೇಕು. ಉದಾಹರಣೆಗೆ 9.5ರಿಂದ 12 ಮೀಟರ್ ಎತ್ತರವಿರುವ ಕಟ್ಟಡಗಳಲ್ಲಿ ಕನಿಷ್ಠ 4.5 ಮೀಟರ್ ಮುಕ್ತ ಪ್ರದೇಶವಿರಬೇಕು.
ಕಾರು ಪಾರ್ಕಿಂಗ್
ಮುಕ್ತ ಜಾಗ 12 ಮೀಟರುಗಳಿಗಿಂತ ಹೆಚ್ಚಾಗಿದ್ದಲ್ಲಿ ಕಾರ್ ಪಾರ್ಕಿಂಗ್ ಅನ್ನು ಮುಕ್ತ ಪ್ರದೇಶದಲ್ಲಿ ಮಾಡಬಹುದು. ಸ್ಟೇರ್ ಕೇಸ್
ಪ್ರತೀ ಗಗನಚುಂಬಿ ಕಟ್ಟಡಗಳು ಕನಿಷ್ಠ ಎರಡು ಸ್ಟೇರ್ ಕೇಸ್ ಅನ್ನು 1 ಮೀಟರ್ ಅಗಲದಲ್ಲಿ ಹೊಂದಿರಬೇಕು. ಫೈರ್ ಎಸ್ಕೇಪ್ ಅಗಲವು ಕನಿಷ್ಠ 0.75 ಇರಬೇಕು. ಸ್ಟೇರ್ ಕೇಸ್ ಅನ್ನು ಹೊಗೆ, ಬಿಸಿ ಮತ್ತು ಅನಿಲಗಳಿಂದ ರಕ್ಷಿಸಲು ವಿಸ್ತರಿಸಿರಬೇಕು. ನೆಲದಿಂದ ಬೇಸ್ಮೆಂಟಿಗೆ ಪ್ರತ್ಯೇಕ ಸ್ಟೇರ್ ಕೇಸ್ ಬೇಕು. ಅದು ಮುಖ್ಯ ಸ್ಟೇರ್ ಕೇಸಿಗೆ ಹೊಂದಿರಬಾರದು.
ಸರ್ವಿಸ್ ಡಕ್ಟ್ ಗಳು
ಎಲ್ಲಾ ಸರ್ವಿಸ್ ಡಕ್ಟ್ ಗಳು 2 ಗಂಟೆಗಳ ಕಾಲ ಬೆಂಕಿಯಿಂದ ತಡೆಯುವಷ್ಟು ಗಟ್ಟಿ ಗೋಡೆಗಳನ್ನು ಹೊಂದಿರಬೇಕು. ಪ್ರತೀ ಮಹಡಿಗೂ ಸೀಲ್ ಆಗಿರಬೇಕು. 2 ಗಂಟೆ ಬೆಂಕಿ ತಡೆಯುವ ಸುಡದ ಮೆಟೀರಿಯಲುಗಳನ್ನು ಬಳಸಿರಬೇಕು. ನೆಲದ ಸೀಲಿಂಗ್ ಹೊಗೆ ಮತ್ತು ಬೆಂಕಿಯನ್ನು ಮೇಲಿನ ಮಹಡಿಗೆ ಹರಿಯದಂತೆ ತಡೆಯಬೇಕು.
http://content.magicbricks.com