×
Ad

ಮೊದಲ ಕಾರು ಕೊಳ್ಳುವವರಿಗೆ 5 ಅತ್ಯುತ್ತಮ ಆಯ್ಕೆಗಳು

Update: 2016-05-01 12:19 IST

ನಿಮ್ಮ ಬಜೆಟಲ್ಲಿ ಹೊಂದಿಕೊಳ್ಳುವ ಮೊದಲ ಕಾರು ಖರೀದಿಸಲು ಬಯಸಿದ್ದೀರಾ? ಇಲ್ಲಿ ನಿಮಗೆ ನೆರವಾಗುವ ಪಟ್ಟಿಯಿದೆ.

ಮಾರುತಿ ಸುಜುಕಿ ಆಲ್ಟೋ

ಮಾರುತಿ 8 ಸರಣಿಯಲ್ಲಿ ಬರುವ ಆಲ್ಟೋ ಈಗಲೂ ಭಾರತದ ಅತೀ ಕಡಿಮೆ ವೆಚ್ಚದ ವಿಶ್ವಾಸಾರ್ಹ ಕಾರಾಗಿದೆ. ಆಲ್ಟೋನ ಬೇಸ್ ಮಾಡೆಲ್ ಅತೀ ಅಗ್ಗದ ಬೆಲೆ ರು. 2.57 ಲಕ್ಷದಲ್ಲಿ ಲಭ್ಯವಿದೆ. ಎಂಟ್ರಿ ಲೆವೆಲ್ ಕಾರು ಪ್ರಾಯೋಗಿಕವಾಗಿಯೂ ಉತ್ತಮ ಮತ್ತು ಭಾರತೀಯ ರಸ್ತೆಯಲ್ಲಿ ಅತೀ ವಿಶ್ವಾಸಾರ್ಹ.

ರೆನಾಲ್ಟ್ ಕ್ವಿಡ್

ರೆನಾಲ್ಟ್ ಕ್ವಿಡ್ ಕಾರನ್ನು ಮಾರುತಿಯ ಆಲ್ಟೋಗೆ ಮತ್ತು ಹ್ಯೂಂಡೈನ್ ಇಯಾನ್ ಕಾರಿಗೆ ಸ್ಪರ್ಧೆ ನೀಡಲು ಬಿಡಲಾಗಿದೆ. ಕ್ವಿಡ್ ಸ್ಟೈಲಿಶ್ ಇಂಟೀರಿಯರ್ ಹೊಂದಿದೆ. ಅದು ಪ್ರಾಥಮಿಕವಾಗಿ ವಿರೋಧಿಗಳಿಗಿಂತ ಉತ್ತಮವಾಗಲು ಇದೇ ಕಾರಣ. ಸಣ್ಣ ಕಾರಾಗಿ ಹೊರಗಿನಿಂದ ಕಂಡರೂ ಒಳಗೆ ಸಾಕಷ್ಟು ಜಾಗವಿದೆ.

799cc 3- ಸಿಲಿಂಡರ್ ಇಂಜಿನ್ ಅತ್ಯುತ್ತಮವಾದ 25 kmpl ಮೈಲೇಜನ್ನು ಕೊಡುತ್ತದೆ. ಬೇಸ್ ಮಾಡೆಲ್ ಬೆಲೆ ರು. 2.62 ಲಕ್ಷವಿದೆ.

ಹ್ಯೂಂಡೈ ಇಯಾನ್

ರು. 3.25 ಲಕ್ಷದ ಕಾರು ಇಯಾನ್ ತನ್ನ ಪ್ರತಿಸ್ಪರ್ಧಿಗಳಾದ ಆಲ್ಟೋ ಮತ್ತು ಕ್ವಿಡ್ ಗಿಂತ ಅಧಿಕ ಬೆಲೆ ಹೊಂದಿದೆ. ಆದರೆ ಆಲ್ಟೋಗೆ ಸ್ಪರ್ಧೆಗಾಗಿ ನಿರ್ಮಾಣಗೊಂಡಿದೆ. ಹ್ಯೂಂಡೈನ ಎಂಟ್ರಿ ಲೆವೆಲ್ ಕಾರು ಸ್ಟೈಲಿಶ್ ಲುಕ್ ಮತ್ತು ಉತ್ತಮ ಲಕ್ಷಣಗಳನ್ನು ಕೊಡುತ್ತದೆ. 56 PS ಇಂಜಿನ್ ಮೂಲಕ ಕಾರಿನ ಮೈಲೇಜು 20kmpl ಇದೆ.

ಟಾಟಾ ಟಿಯಾಗೋ

ಧೀರ್ಘ ಕಾಯುವಿಕೆ, ವಿವಾದ ಮತ್ತು ಜಾಗತಿಕ ಅಂಬಾಸಡರ್ ಆಗಿರುವ ಟಾಟಾ ಟಿಯಾಗೋ ಅಧಿಕೃತವಾಗಿ ಬಿಡುಗಡೆ ಮಾಡುವ ಮೊದಲೇ ಬಾಯಿ ಮಾತಾಗಿದೆ. ಮೊದಲ ನೋಟಕ್ಕೆ ಕಾರು ಉತ್ತಮವಾಗಿರುವಂತಿದೆ. ಟಿಯಾಗೋ ಪೆಟ್ರೋಲ್ ಮತ್ತು ಡೀಸಲ್ ಎರಡರಲ್ಲೂ ಲಭ್ಯವಿದೆ. ಟಿಯಾಗೋ ಉತ್ತಮ ಹ್ಯಾಂಡಲಿಂಗ್ ಮತ್ತು ಉತ್ತಮ ಸಸ್ಪೆನ್ಷನ್ ಹೊಂದಿದೆ. ಉತ್ತಮ ಇಂಧನ ಸಾಮರ್ಥ್ಯವನ್ನೂ ಕೊಡುವ ನಿರೀಕ್ಷೆ ಇದೆ.

ಹ್ಯೂಂಡೈ ಐ10

ಕಳೆದ ದಶಕದಲ್ಲಿ ಹ್ಯೂಂಡೈನ ಅತೀ ಯಶಸ್ವೀ ಬಿಡುಗಡೆಯಲ್ಲಿ ಒಂದಾಗಿದೆ. ಐ10 ಸಣ್ಣ ಕಾರುಗಳ ವಿಭಾಗದಲ್ಲಿ ತನ್ನ ಗುರುತು ಸೃಷ್ಟಿಸಿದೆ. ಕಾರಿನ ಅತೀ ದೊಡ್ಡ ಸಕಾರಾತ್ಮಕ ಅಂಶವೆಂದರೆ ಅದು ಹಿತಕರ ಮತ್ತು ಪ್ರಾಯೋಗಿಕವಾಗಿ ನಿರ್ಮಾಣವಾಗಿದೆ. ಐ10 ನಿಧಾನವಾಗಿ ಚಾರ್ಮ್ ಕಳೆದುಕೊಳ್ಳುತ್ತಿದೆ ಎಂದು ಹಲವರು ಅಂದುಕೊಳ್ಳಬಹುದಾದರೂ ಭಾರತೀಯ ರಸ್ತೆಗಳಲ್ಲಿ ಸಮಸ್ಯೆಯಿಲ್ಲದ ಕಾರಾಗಿ ಉಳಿದಿದೆ. ಬೇಸ್ ಮಾಡೆಲ್ ಬೆಲೆ ರು. 4.35 ಲಕ್ಷ.

ಕೃಪೆ : timesofindia

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News