×
Ad

ಕೆಲಸದಿಂದ ವಜಾ ಮಾಡಲೇಬೇಕಾದರೆ ಹೀಗೆ ಮಾಡಿ!

Update: 2016-05-02 12:13 IST

ಉದ್ಯೋಗಿ ಕಳ್ಳತನ ಮಾಡಿ ಸಿಕ್ಕಿಬಿದ್ದಲ್ಲಿ ಆತನನ್ನು ಕೆಲಸದಿಂದ ತೆಗೆದು ಹಾಕುವ ಸಮಯ ಬಂದಿದೆ ಎಂದು ಅರ್ಥ. ಆದರೆ ದೊಡ್ಡ ತಪ್ಪು ಮಾಡದ ಉದ್ಯೋಗಿಯ ಬಗ್ಗೆ ಏನು ಮಾಡುವುದು?

►ವ್ಯಕ್ತಿಯೊಬ್ಬ ನಂಬಿಕಾರ್ಹನಾಗಿದ್ದು, ಹೆಚ್ಚು ವಂಚಕನಲ್ಲದೆ ಇರುತ್ತಾನೆ. ಆದರೆ ಕೆಲಸಕ್ಕೆ ಬೇಕಾದ ಸೂಕ್ತ ಕೌಶಲ್ಯ ಮತ್ತು ಸಾಮರ್ಥ್ಯವಿರುವುದಿಲ್ಲ. ಒಟ್ಟಾರೆ ಕೆಲಸಕ್ಕೆ ಬಾರದವನಾಗಿರುತ್ತಾನೆ. ಹಾಗಿದ್ದರೆ ಆತನನ್ನು ತೆಗೆದು ಹಾಕುವುದು ಹೇಗೆ? ಮೃದುವಾಗಿ ಪಿಂಕ್ ಸ್ಲಿಪ್ ಕೊಡಲು ಸಾಧ್ಯವಿದೆಯೆ?

► ಯಾರನ್ನಾದರೂ ಕೆಲಸದಿಂದ ತೆಗೆದು ಹಾಕುವುದು ಸರಳವಲ್ಲ. ಅದು ವ್ಯಕ್ತಿ, ಕುಟುಂಬ, ಕಾರ್ಯಸ್ಥಳ ಮತ್ತು ಸಮುದಾಯಗಳ ಮೇಲೆ ಪರಿಣಾಮ ಬೀರುತ್ತದೆ. ಆದರೆ ತೆಗೆದು ಹಾಕುವುದು ಅನಿವಾರ್ಯವೂ ಹೌದು.

► ಮ್ಯಾನೇಜರ್ ಆಗಿದ್ದು, ಒಬ್ಬರನ್ನು ಹೊರಗೆ ಹಾಕುವ ಮೊದಲು ಸಾಧ್ಯವಾದ ಎಲ್ಲವನ್ನು ಮಾಡಲಾಗಿರುವುದನ್ನು ಖಚಿತಪಡಿಸಿ. ನೀವು ಸರಿಯಾದ ದಾರಿಯಲ್ಲಿ ನಡೆಯುತ್ತಿದ್ದೀರಿ ಎನ್ನುವುದನ್ನು ತಿಳಿದುಕೊಳ್ಳಲು ಮಾನವ ಸಂಪನ್ಮೂಲ ಇಲಾಖೆಯ ನೆರವು ಪಡೆಯಿರಿ.

► ಕೌಶಲ್ಯ ಬಾರದೆ ಇದ್ದರೆ ಕಲಿಸಿ. ಹಂತ ಹಂತವಾಗಿ ಬದಲಾವಣೆಗೆ ಪ್ರಯತ್ನಿಸಿ. ಹಾಗಿದ್ದರೂ ಅವರು ಕೆಲಸ ಕಲಿಯದಿದ್ದರೆ ತೆಗೆದು ಹಾಕುವ ಸಮಯ ಬಂದಿರುತ್ತದೆ. ಆ ಮೂಲಕ ಸರಿಯಾದ ನಿರ್ಧಾರ ತೆಗೆದುಕೊಂಡ ಖುಷಿ ನಿಮ್ಮಲ್ಲಿರುತ್ತದೆ.

►ಬಹುತೇಕ ಮ್ಯಾನೇಜರುಗಳಿಗೆ ಉದ್ಯೋಗಿಗಳನ್ನು ಕೆಲಸದಿಂದ ತೆಗೆಯುವುದು ಬಹಳ ಒತ್ತಡದ ಕೆಲಸ. ಆದರೆ ಅನಿವಾರ್ಯವಾದಾಗ ಹೇಗೆ ಮಾಡುವುದು ಎನ್ನುವುದು ತಿಳಿದಿರಬೇಕು. ಕೆಲಸದಿಂದ ತೆಗೆಯುವುದು ಏಕೆ ಅನಿವಾರ್ಯ ಎನ್ನುವುದನ್ನು ಜನರಿಗೆ ತಿಳಿವಳಿಕೆ ಮಾಡಿಕೊಡಬೇಕು. ಅದು ಸಮರ್ಥನೀಯ ಮತ್ತು ಹುಚ್ಚುತನವಲ್ಲ ಎಂದು ಅರಿವು ಮೂಡಿಸಬೇಕು. ಕೆಲವೊಮ್ಮೆ ನಿಯಂತ್ರಣ ಕಳೆದುಕೊಳ್ಳಬಹುದು. ಕೆಲಸಗಾರನಿಗೆ ಉದ್ಯೋಗ ಕಳೆದುಕೊಳ್ಳುವ ನಿರೀಕ್ಷೆ ಇರುವಂತೆ ಹಲವು ಹಂತಗಳಲ್ಲಿ ಅವರನ್ನು ಒಳಗೊಂಡು ನಿರ್ಧಾರ ಕೈಗೊಳ್ಳುವುದೂ ಮಾಡಬಹುದು.

►ಕೆಲವೊಮ್ಮೆ ಉದ್ಯೋಗಿಗಳನ್ನು ಅವರ ನಡವಳಿಕೆ ಕಾರಣದಿಂದ ತೆಗೆದು ಹಾಕುವಾಗ ಅವರ ಮೇಲಿನ ಆರೋಪವನ್ನು ಹೇರಲು ಅವಕಾಶವನ್ನು ಬಳಸಿಕೊಳ್ಳುವುದು ಸರಿಯಲ್ಲ. ಹಾಗೆ ಮಾಡಲು ರೊಚ್ಚಿಗೆದ್ದ ಮ್ಯಾನೇಜರ್ ಇಚ್ಛಿಸಿರಬಹುದು. ಆದರೆ ಅದು ಸರಿಯಾದ ಕ್ರಮವಲ್ಲ. ಸಮರ್ಥನೀಯವಲ್ಲ. ವ್ಯಕ್ತಿಯನ್ನು ನಡವಳಿಕೆ ಕಾರಣದಿಂದ ತೆಗೆದು ಹಾಕುವಾಗ ಆತನ ವಿರುದ್ಧ ಸರಿಯಾಗಿ ತನಿಖೆ ಮಾಡಿರುವ ವಿವರಗಳಿರಬೇಕು. ಎಲ್ಲಿ ತಪ್ಪಾಗಿದೆ ಎನ್ನುವುದನ್ನು ಲಿಖಿತ ದಾಖಲೆಗಳಲ್ಲೂ ಇಟ್ಟುಕೊಂಡಿರಬೇಕು. ಕೆಲವೊಮ್ಮೆ ಕೆಲಸಕ್ಕೆ ತಡವಾಗಿ ಬಂದ ಕಾರಣಕ್ಕೆ ಕಳುಹಿಸಿದ ಇಮೇಲ್‌ಗಳನ್ನು ದಾಖಲೆಯಾಗಿ ಇಟ್ಟುಕೊಳ್ಳಬಹುದು. ಹೀಗೆ ಮೊದಲೇ ಹಲವು ಬಾರಿ ಎಚ್ಚರಿಕೆ ಕೊಟ್ಟ ಉದಾಹರಣೆಗಳಿದ್ದರೆ, ಉದ್ಯೋಗಿ ನನಗೆ ಗೊತ್ತೇ ಇರಲಿಲ್ಲ ಎಂದು ನೆಪ ಹೇಳುವ ಅವಕಾಶವಿರುವುದಿಲ್ಲ.

►ಕೆಲಸದಿಂದ ತೆಗೆದು ಹಾಕುವುದು ಚೊಕ್ಕವಾಗಿ ಮತ್ತು ನೀಟಾಗಿ ಮಾಡಬೇಕಾದ ಕೆಲಸ. ಸಹಾಯಕ್ಕೆ ಮಾನವ ಸಂಪನ್ಮೂಲವನ್ನು ಬಳಸಿಕೊಳ್ಳಬಹುದು. ಜಗಳದ ಧ್ವನಿಯಲ್ಲಿ ಮಾತುಕತೆ ಆಗದಂತೆ ಗಮನಹರಿಸಿ. ಅಭಿಪ್ರಾಯ ಕೇಳಲು ಬಹಳ ತಡವಾಗಿರುತ್ತದೆ. ಉದ್ದನೆಯ ಭಾಷಣ ಬಿಗಿಯುವ ಬದಲಾಗಿ ಕೆಲಸದಿಂದ ತೆಗೆಯುತ್ತಿರುವ ಬಗ್ಗೆ ಕ್ಷಮೆಯಾಚಿಸಿ ಒಂದೇ ವಾಕ್ಯದಲ್ಲಿ ವಿಷಯ ತಿಳಿಸಿಬಿಡಿ.

►ತೆಗೆದು ಹಾಕುವ ಕೆಲಸವನ್ನು ಏಕಾಂಗಿಯಾಗಿ ಮಾಡಬೇಡಿ. ಉದ್ಯೋಗಿಗಳು ಅದನ್ನು ತೆಗೆದುಕೊಳ್ಳುವ ರೀತಿ ಬೇರೆಯೇ ಇರಬಹುದು. ಸಭೆಯನ್ನು ನಡೆಸಿ ಅದರಲ್ಲಿ ವಿಷಯ ತಿಳಿಸುವುದು ಉತ್ತಮ. ಮತ್ತೊಬ್ಬ ಮ್ಯಾನೇಜರ್ ಅಥವಾ ಮಾನವ ಸಂಪನ್ಮೂಲ ಅಧಿಕಾರಿ ಮುಂದೆ ಈ ಬಗ್ಗೆ ವಿವರಿಸಿ. ಭಾವನಾತ್ಮಕ ಸನ್ನಿವೇಶವಾಗಿರುವ ಕಾರಣ ಹೇಗೆ ಪ್ರತಿಕ್ರಿಯೆ ನೀಡುವುದು ಎನ್ನುವ ಗೊಂದಲವಿರುತ್ತದೆ.

ಕೃಪೆ:www.bbc.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News