ಡಬಲ್ ಧಮಾಕ! ಇವು ಆಹಾರವೂ ಹೌದು, ಔಷಧವೂ ಹೌದು

Update: 2016-05-04 05:39 GMT

ಆಹಾರವೇ ಚಿಕಿತ್ಸೆ ಎಂದು ಗ್ರೀಕ್ ವಿಜ್ಞಾನಿ ಹಿಪ್ಪೊಕ್ರೇಟ್ಸ್ ಹೇಳಿದ್ದಾರೆ. ಆಯುರ್ವೇದ ಮತ್ತು ಹೋಮಿಯೋಪತಿ ವೈದ್ಯಪದ್ಧತಿಯಲ್ಲಿ ಆಹಾರವನ್ನೇ ವೈದ್ಯಕೀಯ ಚಿಕಿತ್ಸೆಯಲ್ಲಿ ಬಲಸಾಗುತ್ತಿದೆ. ಹಲವು ಆಯುರ್ವೇದದ ಚಿಕಿತ್ಸೆಗಳಲ್ಲಿ ಜೇನುತುಪ್ಪ, ದನದ ತುಪ್ಪ ಬಳಸುವುದು ಕಡ್ಡಾಯವಾಗಿರುತ್ತದೆ. ಹಾಗೆಯೇ ಕಾಫಿ ಮತ್ತು ಮಾಂಸಾಹಾರವನ್ನು ಹೋಮಿಯೋಪತಿ ಚಿಕಿತ್ಸೆಯ ಸಂರ್ದರ್ಭ ಸೇವಿಸಬಾರದು.

ನಾವು ತಿನ್ನುವ ಆಹಾರ ನಮ್ಮನ್ನು ರೂಪಿಸುತ್ತದೆ. ಆಹಾರದಲ್ಲಿ ತಪ್ಪೆಸಗಿದರೆ ಪರಿಣಾಮ ದೇಹದ ಮೇಲೆ ಬೀಳುತ್ತದೆ. ಅಲ್ಲದೆ ಆಹಾರವನ್ನು ಅದರ ತಾಜಾತನ ಹಾಳಾಗದಂತೆ ಸರಿಯಾದ ಪ್ರಮಾಣದಲ್ಲಿ ಸ್ವೀಕರಿಸಿದರೆ ಹಲವು ಬ್ಯಾಕ್ಟೀರಿಯ ಸಂಬಂಧಿತ ರೋಗಗಳನ್ನು ನಿವಾರಿಸುತ್ತದೆ. ಇಲ್ಲಿ ಅಂತಹ ಕೆಲವು ವಿವರಣೆ ನೀಡಲಾಗಿದೆ.

ಮಾವಿನಹಣ್ಣು: ಮಾವಿನಹಣ್ಣುಗಳು ಸಕ್ಕರೆ ತುಂಬಿದ ಕೊಬ್ಬು ತರುವ ಆಹಾರ ಎಂದು ತಿಳಿದುಕೊಂಡಿದ್ದರೆ ಬದಲಾಗಿ. ಹಸಿ ಮಾವಿನಕಾಯಿ ಹೃದಯರೋಗ ನಿವಾರಿಸಿದರೆ, ಮಾವಿನಹಣ್ಣು ಹಲವಾರು ಸೋಂಕುಗಳನ್ನು ನಿವಾರಿಸುತ್ತದೆ. ಶೀತ, ರೈನಿಟಿಸ್ ಮತ್ತು ಸೈನಸೈಟಸ್ ಸೋಂಕುಗಳಿಗೆ ಇದು ಆಹಾರ. ವಿಟಮಿನ್ ಎ ತುಂಬಿರುವ ಮಾವಿನಹಣ್ಣುಗಳು ಡಿಪ್ತೀರಿಯ ಮತ್ತು ಗಂಟಲಿನ ಸೋಂಕಿಗೂ ಪರಿಹಾರ.

ಕ್ಯಾಬೇಜ್: ಸಾಮಾನ್ಯವಾಗಿ ಅಲಕ್ಷಿಸಲಾಗುವ ಈ ತರಕಾರಿ ಹುಳಗಳಿರುತ್ತವೆ ಎಂದು ತಿಳಿಯುವವರೇ ಹೆಚ್ಚು. ಆದರೆ ಕ್ಯಾಬೇಜ್ ವಿಟಮಿನ್ ಹೆಚ್ಚಾಗಿರುವ ತರಕಾರಿ. ಲವಣಗಳು ಮತ್ತು ಆಲ್ಕಲೈನ್ ಉಪ್ಪುಗಳು ಶ್ರೀಮಂತವಾಗಿರುತ್ತವೆ. ಹೊಟ್ಟೆಯ ಅಲ್ಸರಿಗೆ ಕಾರಣವಾಗುವ ಎಚ್ ಪೈಲರಿಯಂತಹ ಬ್ಯಾಕ್ಟೀರಿಯ ವಿರುದ್ಧ ಹೋರಾಡುವ ಗುಣ ಹೊಂದಿದೆ. ಜಾಂಡೀಸ್ ಮತ್ತು ಮೂತ್ರಕೋಶದ ರೋಗಗಳಲ್ಲೂ ಇದು ಉತ್ತಮ. 150 ಮಿಲಿಲೀಟರ್ ರಸವನ್ನು ಒಂದು ಚಮಚ ಜೇನುತುಪ್ಪದೊಡನೆ ಖಾಲಿ ಹೊಟ್ಟೆಗೆ ಸೇವಿಸಿದರೆ ಅತಿಯಾಗಿ ಉಪಯುಕ್ತ. ಆದರೆ ರಾಸಾಯನಿಕ ಬೆರೆಸಿದ ಕ್ಯಾಬೇಜ್ ಬೇಡ. ಸಾವಯವ ಕ್ಯಾಬೇಜ್ ಸೇವಿಸಿ.

ಕ್ಯಾರೆಟ್: ಬೀಟಾ ಕ್ಯಾರಟಿನ್ ಇರುವ ಕ್ಯಾರೆಟ್ ಶಕ್ತಿಯುತ ಆಂಟಿ ಆಕ್ಸಿಡಂಟ್ ಮತ್ತು ಕ್ಲೀನ್ಸರ್. ವಿಟಮಿನ್ ಎ ಕಾರಣ ಕಣ್ಣಿಗೆ ಉತ್ತಮ. ದೇಹದಲ್ಲಿ ಆಸಿಡ್ ಆಲ್ಕಲೈನ್ ಸಮತೋಲನ ಕಾಪಾಡುವ ಕಾರಣ ಕ್ಯಾನ್ಸರ್ ನಿರೋಧಕವೂ ಹೌದು. ಕ್ಯಾರೆಟ್ ರಸ ಸೋಂಕು ರೋಗಗಳಿಗೆ ಪರಿಹಾರ. ಗಂಟಲು, ಕಣ್ಣು ಮತ್ತು ಸೈನಸ್ ಸಮಸ್ಯೆಗಳಿಂದ ಪರಿಹಾರ. ಜಠರದ ಹುಳುಗಳನ್ನು ನಿವಾರಿಸಲು ಹಸಿ ಕ್ಯಾರೆಟ್ ತಿನ್ನಿ.

ನುಗ್ಗೆಕಾಯಿ: ಸೀಸನಿನಲ್ಲಿ ಮಾತ್ರ ಸಿಗುವ ತರಕಾರಿ ಸೀಸನ್ ಸೋಂಕುಗಳಿಗೆ ಪರಿಹಾರ. ಬೇಸಗೆಯಲ್ಲಿ ಬರುವ ಸಿಡುಬು ರೋಗಕ್ಕೆ ನುಗ್ಗೆ ಚಿಕಿತ್ಸೆ ಪಡೆಯಬಹುದು. ನುಗ್ಗೆ ಕೋಡುಗಳು ಮತ್ತು ಹೂವು ವಿವಿಧ ಬೇಸಗೆಯ ರೋಗಗಳಿಗೆ ಪರಿಹಾರ.

ಬೇವಿನ ಎಲೆಗಳು:ಚೈತ್ರ ಕಾಲದಲ್ಲಿ ಹಸಿ ಬೇವಿನ ಎಲೆಗಳನ್ನು ತಿನ್ನುವುದು ಹೊಟ್ಟೆ ಸಮಸ್ಯೆ ಮತ್ತು ಸಿಡುಬು ರೋಗ ಹಾಗೂ ಮೊಡವೆಗಳಿಮದ ರಕ್ಷಿಸುತ್ತದೆ. ಏಪ್ರಿಲ್ ತಿಂಗಳಲ್ಲಿ ಪ್ರತೀ ಬೆಳಗ್ಗೆ ಬೇವಿನ ಎಲೆ ತಿನ್ನಬೇಕು. ಹುಳು ನಿರೋಧಕ, ಫಂಗಲ್ ವಿರೋಧಿ, ಬ್ಯಾಕ್ಟೀರಿಯ ವಿರೋಧಿ ಗುಣ ಹೊಂದಿದೆ. ನೀಮ್ ಫೇಸ್ ವಾಷ್, ಪೌಡರ್ ಮತ್ತು ನೀಮ್ ಪೀಠೋಪಕರಣ ಖರೀದಿಸುವ ನಾವು ಬೇವಿನ ಎಲೆ ತಿನ್ನಲು ಸಿದ್ಧರಿರುವುದಿಲ್ಲ! ಬೇಳೆಕಾಳುಗಳು ಮತ್ತು ಸಾಂಬಾರು ಪದಾರ್ಥಗಳಲ್ಲಿ ಬೇವು ಬೆರೆಸುವುದು ನಮ್ಮ ಪರಂಪರೆ. ಇದು ಆಹಾರಕ್ಕೆ ಕಹಿ ರುಚಿ ಕೊಡುತ್ತದೆ. ಇದು ರಕ್ತಶುದ್ಧಿಗೆ ಉತ್ತಮ. ಚರ್ಮದ ರೋಗಗಳನ್ನು ತಡೆಯುತ್ತದೆ.

ಅರಿಶಿಣ: ಕ್ಯಾಲ್ಸಿಯಂ ಕಾರ್ಬೋನೇಟ್ ಜತೆಗೆ ಅರಿಶಿಣ ಮಿಶ್ರ ಮಾಡಿ ಮೂಳೆ ಗಾಯಗಳಿಗೆ ಹಚ್ಚುತ್ತಾರೆ. ಬಿಸಿ ಮಾಡಿದ ಹಾಲಿಗೆ ಬೆರೆಸಿ ಕುಡಿಯುವುದು ಗಂಟಲು ನೋವಿಗೆ ಪರಿಃಆರ. ಅರಿಶಿಣದಲ್ಲಿ ಸೋಂಕು ರೋಗಾಣುಗಳ ವಿರುದ್ಧ ಹೋರಾಡುವ ಗುಣವಿದೆ. ರೈನಿಟಿಸ್, ಶೀತ, ಸ್ಕೇಬೀಸ್, ರಿಂಗ್ ವರ್ಮ್ ಮತ್ತು ಅಲ್ಸರ್ ರೋಗ ನಿರೋಧಕ.

ಶುಂಠಿ: ಇದು ದಿವ್ಯೌಷಧ. ಶುಂಠಿ ಕಫ, ಅತಿಸಾರ ಮತ್ತು ಹೃದಯ ಸಮಸ್ಯೆಗಳಿಗೆ ಪರಿಹಾರ. ತಾಜಾ ಶುಂಠಿ ರಸವನ್ನು ಮೆಂತ್ಯದ ಜೊತೆಗೆ ಹನಿ ಬೆರೆಸಿ ಸೇವಿಸಿದರೆ ಕಫಹಾರಿಯಾಗಿ ಕೆಲಸ ಮಾಡುತ್ತದೆ.

ಜೇನುತುಪ್ಪ: ಆಯುರ್ವೇದದಲ್ಲಿ ಜೇನುತುಪ್ಪಕ್ಕೆ ಅತೀ ಮುಖ್ಯ ಸ್ಥಾನ. ಶಕ್ತಿಯುತ ರೋಗನಿರೋಧಕವಿದು. ಗಂಟಲು ಸಮಸ್ಯೆಗೆ ಪರಿಹಾರ. ಜೇನು ತುಪ್ಪವನ್ನು ಬೋರಾಕ್ಸ್ ಮತ್ತು ಗ್ಲಿಸರಿನ್ ಜೊತೆಗೆ ಮಿಶ್ರಮಾಡಿ ಸೇವಿಸಿದರೆ ಬಾಯಿಯ ಅಲ್ಸರಿಗೆ ಪರಿಹಾರ. ಗಾಯಗಳಿಗೆ ಮತ್ತು ಸುಟ್ಟ ಗಾಯಗಳಿಗೆ ಹಾಗೂ ಕಿವಿ ಸೋಂಕಿಗೂ ಜೇನುತುಪ್ಪ ಮದ್ದು.

ಲಿಂಬೆ: ಲಿಂಬೆ ಪಾರಂಪರಿಕವಾಗಿ ಕಾಲರಾಗೆ ಚಿಕಿತ್ಸೆ ನೀಡುತ್ತದೆ. ಲಿಂಬೆಗೆ ಸಕ್ಕರೆ ಮತ್ತು ಉಪ್ಪು ಬೆರೆಸಿ ಅತಿಸಾರ ಮತ್ತು ಹೊಟ್ಟೆ ಸಮಸ್ಯೆಗೆ ಸೇವಿಸಬೇಕು. ಗಂಟಲು ಸೋಂಕಿಗೆ ಲಿಂಬೆಗೆ ಜೇನು ಬೆರೆಸಿ ಸೇವಿಸಬಹುದು. ಸೋಂಕು ರೋಗಕ್ಕೆ ಪಾರಂಪರಿಕ ಔಷಧಿ. ಖಾಲಿ ಹೊಟ್ಟೆಯಲ್ಲಿ ಲಿಂಬೆ ಪಾನೀಯ ಸೇವಿಸುವುದು ಉತ್ತಮ ಎನ್ನುತ್ತಾರೆ ವೈದ್ಯರು.

ಮೊಸರು: ಪ್ರೊಬಯಾಟಿಕ್ಸ್ ಶ್ರೀಮಂತವಾಗಿರುತ್ತದೆ. ಕರುಳು ಆರೋಗ್ಯ ನಿಭಾಯಿಸುತ್ತದೆ. ಹೊಟ್ಟೆಗೆ ತಂಪು ನೀಡಿ ಸೋಂಕಿನ ವಿರುದ್ಧ ಹೋರಾಡುತ್ತದೆ. ಮೊಸರು ಮತ್ತು ಮಜ್ಜಿಗೆಯಲ್ಲಿರುವ ಲ್ಯಾಕ್ಟಿಕ್ ಆಸಿಡ್ ಅಪೆಂಡಿಸೈಟಿಸ್, ಅತಿಸಾರ ಮತ್ತು ಭೇಧಿ ವಿರುದ್ಧ ಹೋರಾಡುತ್ತದೆ.

ಕೃಪೆ : timesofindia

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News