ಜಿಶಾರ ಅಮ್ಮ ರಾಜೇಶ್ವರಿಯನ್ನು ಸಂದರ್ಶಿಸಿದ ಕೇಂದ್ರ ಸಚಿವ ತಾವರ್ ಚಂದ್ ಗೆಹ್ಲೋಟ್

Update: 2016-05-05 10:49 GMT

ಪೆರುಂಬಾವೂರ್,ಮೇ 5: ಕೇಂದ್ರ ಸಾಮಾಜಿಕ ನ್ಯಾಯ ಸಚಿವ ತಾವರ್‌ಚಂದ್ ಗೆಹ್ಲೋಟ್, ರಾಷ್ಟ್ರೀಯ ಮಹಿಳಾ ಅಯೋಗ ಅಧ್ಯಕ್ಷೆ ಲಲಿತಾ ಕುಮಾರ ಮಂಗಲಂ, ಪರಿಶಿಷ್ಟ ಜಾತಿ ಆಯೋಗ ಅಧ್ಯಕ್ಷ ಪಿಎಲ್ ಪುನಿಯ ಮುಂತಾದವರು ಪೆರಂಬಾವೂರ್‌ನಲ್ಲಿ ಕೊಲ್ಲಲಾದ ಜಿಶಾರ ತಾಯಿಯನ್ನು ಭೇಟಿಯಾಗಿದ್ದಾರೆ ಎಂದು ವರದಿಯಾಗಿದೆ. ವಿಷಯವನ್ನು ನಾಳೆ ರಾಜ್ಯ ಸಭೆಯಲ್ಲಿ ಚರ್ಚಿಸುತ್ತೇನೆ ಎಂದು ಸಚಿವರು ತಿಳಿಸಿದ್ದಾರೆ. ಕೇಸ್‌ನಲ್ಲಿ ಪೊಲೀಸರು ನಡೆಸುತ್ತಿರುವ ತನಿಖೆ ತೃಪ್ತಿದಾಯಕವಾಗಿಲ್ಲ ಎಂದು ಲಲಿತಾಕುಮಾರ ಮಂಗಲಂ ಹೇಳಿದ್ದಾರೆ. ದೇಶವನ್ನೇ ಕಂಪಿಸುವಂತೆ ಮಾಡಿದ ಘಟನೆ ಇದು. ಇದರಲ್ಲಿ ರಾಜಕೀಯ ಮಿಶ್ರಣ ಮಾಡಬಾರದು. ಪೊಲೀಸ್ ನಿರ್ಲಕ್ಷ್ಯವನ್ನು ಡಿಜಿಪಿಗೆ ತಿಳಿಸುತ್ತೇನೆ ಎಂದು ಅವರು ಹೇಳಿದರು.

ಬೆಳಗ್ಗೆ 8:15ಕ್ಕೆ ಪೆರಂಬಾವೂರ್ ತಾಲೂಕು ಆಸ್ಪತ್ರೆಗೆ ತಲುಪಿ ಪಿಎನ್ ಪುನಿಯ ರಾಜೇಶ್ವರಿಯವರನ್ನು ಸಂದರ್ಶಿಸಿದ್ದರು. ದುಬಾಷಿಯ ನೆರವಿನಿಂದ ಪರಿಶಿಷ್ಟಜಾತಿ ಆಯೋಗದ ಅಧ್ಯಕ್ಷರು ರಾಜೇಶ್ವರಿಯವರೊಡನೆ ವಿವರ ಕೇಳಿ ತಿಳಿದುಕೊಂಡರು. ಜೀಷಾರ ತಾಯಿಗೆ ಅಗತ್ಯ ಸಂರಕ್ಷಣೆ ನೀಡಲು ಮುಖ್ಯಮಂತ್ರಿಯನ್ನು ಆಗ್ರಹಿಸಿರುವುದಾಗಿ ನಂತರ ಮಾಧ್ಯಮಗಳಿಗೆ ತಿಳಿಸಿದರು. ಇದಕ್ಕೆ ಸೂಕ್ತ ಕ್ರಮಗಳನ್ನು ಸರಕಾರ ಸ್ವೀಕರಿಸಬೇಕು. ಅಪರಾಧಿಗಳನ್ನು ಕಾನೂನಿನ ಮುಂದೆ ತರಲು ಕಠಿಣ ಕ್ರಮ ಕೈಗೊಳ್ಳಬೇಕೆಂದು ಪುನಿಯ ಹೇಳಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News