ಇನ್ನು ಧೂಮಪಾನ, ಮದ್ಯಪಾನ ಮಾಡುವ ಸಿಖ್ಖರಿಗೆ ತಮ್ಮ ಧಾರ್ಮಿಕ ಸಂಸ್ಥೆಗಳ ಚುನಾವಣೆಯಲ್ಲಿ ಮತದಾನ ಹಾಕ್ಕಿಲ್ಲ

Update: 2016-05-09 06:13 GMT

ಹೊಸದಿಲ್ಲಿ, ಮೇ 9: ರಾಷ್ಟ್ರಪತಿಯವರ ಮೂಲಕ ಇತ್ತೀಚೆಗೆ ಸಂಸತ್‌ನಲ್ಲಿ ಪಾಸು ಮಾಡಿದ ಒಂದು ವಿಧೇಯಕಕ್ಕೆ ಮಂಜೂರಾತಿ ದೊರೆತಿದ್ದು ಅದರ ಪ್ರಕಾರ ಇನ್ನು ಮುಂದೆ ಗಡ್ಡ ಮೀಸೆ ಮತ್ತು ತಲೆಕೂದಲು ಕತ್ತರಿಸಿದ ಮತ್ತು ಧೂಮ ಪಾನ ಅಥವಾ ಮದ್ಯಪಾನ ಮಾಡುವ ವ್ಯಕ್ತಿಗಳಿಗೆ ಸಿಖ್ಖರ ಧಾರ್ಮಿಕ ಸಂಸ್ಥೆಗಳ ಚುನಾವಣೆಯಲ್ಲಿ ವೋಟು ಹಾಕಲು ಸಾಧ್ಯವಿಲ್ಲ ಎಂದು ವರದಿಯಾಗಿದೆ. ಒಂದು ಅಧಿಕೃತ ಮಾಹಿತಿಯ ಪ್ರಕಾರ ಸಿಖ್ ಗುರುದ್ವಾರ(ತಿದ್ದುಪಡಿ) ಅಧಿನಿಯಮ, 2016 ಪ್ರಕಾರ ಚಂಡಿಗಡ, ಹರಿಯಾಣ,ಪಂಜಾಬ್ ಮತ್ತು ಹಿಮಾಚಲ ಪ್ರದೇಶದ ಗುರುದ್ವಾರ ಆಡಳಿತ ನಿಯಂತ್ರಣದ ಕುರಿತಿದ್ದ  91ವರ್ಷ ಹಳೆಯ ನಿಬಂಧನೆಗಳನ್ನು ಈ ಆದ್ಯಾದೇಶದ ಮೂಲಕ ಬದಲಿಸಲಾಗಿದೆ. ಈ ಹೊಸ ಕಾನೂನಿಗೆ ಗುರುವಾರ ರಾಷ್ಟ್ರಪತಿ ಅಂಕಿತ ನೀಡಿರುವುದಾಗಿ ವರದಿಗಳು ತಿಳಿಸಿವೆ. ಸಿಖ್ ಗುರುದ್ವಾರ ಅಧಿನಿಯಮ 1925 ಪ್ರಕಾರ 21ವರ್ಷ ಮೇಲ್ಪಟ್ಟವರು ಸಿಖ್ ಪಂಥದ ಸರ್ವೋಚ್ಚ ಸಂಸ್ಥೆ ಸಿಖ್‌ಗುರುದ್ವಾರ ಪ್ರಬಂಧಕ ಸಮಿತಿ(ಎಸ್‌ಜಿಪಿಸಿ)ಚುನಾವಣೆಯಲ್ಲಿ ಮತದಾನ ಮಾಡಬಹುದಾಗಿತ್ತು. ಹೊಸ ಕಾನೂನು ಗಡ್ಡ ಮತ್ತು ಕೂದಲು ಕತ್ತರಿಸಿದವರು, ಧೂಮಪಾನ ಮತ್ತು ಮದ್ಯಪಾನ ಮಾಡುವ ಯಾವುದೇ ವ್ಯಕ್ತಿ ಮತದಾನದಲ್ಲಿ ಭಾಗವಹಿಸುವಂತಿಲ್ಲ ಎಂದು ಸೂಚಿಸುತ್ತಿದೆ. ಕಳೆದ ಮಾರ್ಚ್ 15ರಂದು ಗೃಹ ಸಚಿವ ರಾಜನಾಥ್ ಸಿಂಗ್ ರಾಜ್ಯಸಭೆಯಲ್ಲಿ ಹೊಸ ಸಿಖ್ ಗುರುದ್ವಾರ(ತಿದ್ದುಪಡಿ)ವಿಧೇಯಕ, 2016ರನ್ನು ಮಂಡಿಸಿದ್ದರು. ಇದರ ಮರುದಿವಸ ಮಸೂದೆ ಜಾರಿಯಾಗಿತ್ತು. ಲೋಕಸಭೆಯಲ್ಲಿ ಈ ಮಸೂದೆಯನ್ನು ಎಪ್ರಿಲ್ 25ಕ್ಕೆ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News