×
Ad

ಸಂಗಾತಿ ಜೊತೆಗೆ ಶಾಂತ ಪರಿಸರದಲ್ಲಿ ಕಾಲ ಕಳೆಯಬೇಕೆ? ಇಲ್ಲಿಗೆ ಭೇಟಿ ಕೊಡಿ

Update: 2016-05-09 15:48 IST

ಸಾಮಾನ್ಯವಾಗಿ ಪದೇ ಪದೇ ನೋಡುವ ಕಡಲತೀರಗಳು ಮತ್ತು ಕ್ಯಾಂಡಲ್ ಲೈಟ್ ಡಿನ್ನರ್ ಮಾಡಿ ಸಾಕಾಗಿದೆಯೆ? ತಾಜಾತನ ಸಿಗುವ ಈವರೆಗೆ ನೋಡದ ಸ್ಥಳಗಳಿಗೆ ಭೇಟಿ ಕೊಡಬೇಕೆ? ಹಾಗಿದ್ದರೆ ಭಾರತದೊಳಗೇ ಅಂತಹ ಜಾಗಗಳಿವೆ.

ಮಶೊಬ್ರಾ

ಶಿಮ್ಲಾದಿಂದ ಅರ್ಧಗಂಟೆ ದೂರ ಹೋದರೆ ಸಿಗುವ ಸ್ವರ್ಗವೇ ಮಶೋಬ್ರಾ. ಓಕ್ ಮತ್ತು ಪೈನ್ ಮರಗಳ ನಡುವೆ ಇರುವ ಈ ಸ್ಥಳ ಸಂಗಾತಿಗಳು ಏಕಾಂತವಾಗಿ ಸುತ್ತಾಡಲು ಹೇಳಿ ಮಾಡಿಸಿದ ಜಾಗ. ಸೇಬು ಹಣ್ಣುಗಳ ತೋಟಕ್ಕೆ ಭೇಟಿಕೊಡಬಹುದು, ಮಧ್ಯಾಹ್ನ ಸ್ಟ್ರಾಬೆರಿಗಳನ್ನು ಹೆಕ್ಕುತ್ತಾ ಕಾಲ ಕಳೆಯಬಹುದು. ಹಿಮಾಲಯದ ತಪ್ಪಲಿನ ಈ ಜಾಗದಲ್ಲಿ ಸ್ಥಳೀಯ ಅಡುಗೆಯೂ ರುಚಿಕರ. ಪರಿಸರದಲ್ಲಿ ಕಳೆದು ಹೋಗಬಹುದು.

ಟ್ರಿಯುಂಡ್

ಧರ್ಮಶಾಲಾದ ಕಿರೀಟ ಈ ಟ್ರಿಯುಂಡ್. ಇದು ಚಾರಣ ಪ್ರಿಯರ ಸ್ವರ್ಗ. ಸ್ವತಃ ನೀವೇ ಪ್ರಕೃತಿಯ ನಡುವೆ ನಡೆದು ಹೋಗಬಹುದು. ಅದ್ಭುತ ದೃಶ್ಯಗಳನ್ನು ಸವಿಯಬಹುದಾದ ಸಾಹಸಿಗ ದಂಪತಿಗಳ ಸ್ವರ್ಗವಿದು. ಮೋಡಗಳ ನಡುವೆ ನಡೆದಾಡಬೇಕೆಂದು ಆಸೆ ಇದ್ದಲ್ಲಿ ಟ್ರಿಯುಂಡಿಗೆ ಇಂದೇ ಬ್ಯಾಗ್ ಕಟ್ಟಿಕೊಳ್ಳಿ.

ಹೇವ್ಲಾಕ್ ದ್ವೀಪ

ಪೋರ್ಟ್ ಬ್ಲೇರ್ ನಿಂದ 57 ಕಿ.ಮೀ. ದೂರದಲ್ಲಿದೆ ಈ ಹೇವ್ಲಾಕ್ ದ್ವೀಪ. ಹಿಮದಂತೆ ಬಿಳಿಯಾಗಿರುವ ಮರಳು ಮತ್ತು ಕಡಲ ತೀರ ಇದು. ಸಣ್ಣಪುಟ್ಟ ಗುಡಿಸಲುಗಳು ನೀಲಿ ಸಾಗರದ ಸುತ್ತ ಇವೆ. ರೋಮ್ಯಾಂಟಿಕ್ ರಜಾ ಮಜಾ ಬೇಕಿದ್ದರೆ ಇಲ್ಲಿಗೆ ಹೋಗಬಹುದು. ಕಡಲಿನ ನೀರಿನಲ್ಲಿ ಈಜಾಡುವ ಆಸೆ ಇದ್ದರೆ ಸ್ಕೂಬಾ ಡೈವಿಂಗ್ ಸ್ಥಳಗಳೂ ಈ ದ್ವೀಪದಲ್ಲಿವೆ.

ಖಾಜಿಯರ್

ಹಿಮಾಲಯದ ಚಂಬಾ ಕಣಿವೆಯ ಗುಡ್ಡಗಾಡು ಪ್ರದೇಶ ಖಾಜಿಯರ್. ಹೊಲಗಳು ಮತ್ತು ಅರಣ್ಯಗಳು ಸುತ್ತುವರಿದಿರುವ ಸಣ್ಣ ಪ್ರದೇಶವಿದು. ಸರೋವರದ ಸುತ್ತ ನಡೆದಾಡಬಹುದು. ಮೈದಾನಗಳಲ್ಲಿ ಸಮಯ ಕಳೆಯಬಹುದು. ಪರ್ವತಗಳನ್ನು ವೀಕ್ಷಿಸಬಹುದು. ಭಾರತದ ಮಿನಿ ಸ್ವಿಜರ್ಲ್ಯಾಂಡ್ ಇದು.

ಚಿರಾಪುಂಜಿ

ಭಾರತದಲ್ಲಿ ಅತ್ಯಧಿಕ ಮಳೆಬೀಳುವ ಚಿರಾಪುಂಜಿಯ ಹವೆಯನ್ನೊಮ್ಮೆ ಆನಂದಿಸಲೇಬೇಕು. ಹಸಿರು ಕಾಡುಗಳಲ್ಲಿ ನಡೆದಾಡಬೇಕು. ಮಳೆಗಾಲದಲ್ಲೇ ಇಲ್ಲಿಗೆ ಬರುವುದು ಉತ್ತಮ. ಬಿಸಿ ಚಹಾದ ಸವಿಯೂ ಅನುಭವಿಸಬಹುದು. ಸ್ವಲ್ಪ ಮಳೆ ನಿಂತ ಸಮಯದಲ್ಲಿ ಇಲ್ಲಿನ ಪ್ರಕೃತಿ ಸೌಂದರ್ಯ ಹೃದಯಂಗಮ.

ಮರಾರಿಕುಲಂ

ಕೇರಳದ ಕಡಲಗ್ರಾಮ ಮರಾರಿಕುಲಂ. ಭಾರತದ ಅತೀ ಸ್ವಚ್ಛ ಕಡಲತೀರವಿದು. ಇದು ಬಹಳ ಅಪರೂಪದ ಜಾಗವಾಗಿರುವ ಕಾರಣ ಹೆಚ್ಚು ಜನಸಂದಣಿ ಇರುವುದಿಲ್ಲ. ಸುಂದರ ಸೂರ್ಯಾಸ್ತ ಮತ್ತು ಎಳನೀರು ಹಾಗೂ ಕಡಲತೀರದ ಆನಂದ ಪಡೆಯಬಹುದು.

ಜಲೋರಿ ಪಾಸ್

ಮಾತಿಗಿಂತ ಹೆಚ್ಚು ಏಕಾಂಗಿಯಾಗಿ ಕೈ ಹಿಡಿದು ನಡೆದಾಡಬೇಕಿದ್ದಲ್ಲಿ ಜಲೋರಿ ಪಾಸ್ ಉತ್ತಮ ಸ್ಥಳ. ಹಿಮಾಚಲದ ಕುಲು ಜಿಲ್ಲೆಯಲ್ಲಿರುವ ಈ ಸ್ಥಳದ ಸೌಂದರ್ಯ ನಿಮ್ಮ ಹೃದಯ ಗೆಲ್ಲದೆ ಇರದು. ಮೋಟಾರ್ ಬೈಕ್ ನಲ್ಲೂ ಇಲ್ಲಿ ಸುತ್ತಾಡಬಹುದು. ಸಾಹಸಿಗರಿಗೆ ಹೇಳಿ ಮಾಡಿಸಿದ ಸ್ಥಳ

ಕೃಪೆ: http://goodtimes.ndtv.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News