ಪ್ರಸವದ ಸಂದರ್ಭದ ಮಾನಸಿಕ ಆರೋಗ್ಯ ಮಗುವಿನ ಕೊಲೆಗೂ ಕಾರಣವಾದೀತು
ಕಳೆದ ವಾರ ವಿಶ್ವ ಅಂತಾರಾಷ್ಟ್ರೀಯ ತಾಯಂದಿರ ಮಾನಸಿಕ ಆರೋಗ್ಯ ಜಾಗೃತಿ ವಾರವನ್ನು ಆಚರಿಸಲಾಯಿತು. ಕ್ಯಾನ್ಸರ್ ಅಥವಾ ಏಡ್ಸ್ ದಿನದಷ್ಟು ಮಹತ್ವ ಪಡೆದುಕೊಳ್ಳದ ಈ ದಿನದ ನಿಜವಾದ ಸಂದೇಶ ಹೆಚ್ಚು ಜನರನ್ನು ತಲುಪಿಲ್ಲ. ತಾಯಂದಿರ ಮಾನಸಿಕ ಆರೋಗ್ಯ ಎಂದರೆ ಮಗುವನ್ನು ಹೆಚ್ಚು ಅದಕ್ಕೆ 24 ತಿಂಗಳು ಆಗುವವರೆಗೆ ಅಮ್ಮ ಎದುರಿಸುವ ಖಿನ್ನತೆ. ಸಾಮಾನ್ಯವಾಗಿ ಮಗುವಾದಾಗ ಉಂಟಾಗುವ ಭಾವನೆಗಳನ್ನು ಮೀರಿದ ಗಂಭೀರತೆ ಈ ರೋಗಕ್ಕಿದೆ. ಹಾರ್ಮೋನುಗಳ ಬದಲಾವಣೆಯು ಈ ಗರ್ಭಪೂರ್ವ ಅಥವಾ ಗರ್ಭ ನಂತರದ ಖಿನ್ನತೆಗೆ ಕಾರಣವಾಗಲಿದೆ. ಸೈಕೊಸಿಸ್ ಮಹಿಳೆಯರು ಸ್ವತಃ ಅಥವಾ ಮಗುವಿಗೆ ಹಾನಿ ಮಾಡಲು ಕಾರಣವಾಗಬಹುದು. ಇವೆಲ್ಲವನ್ನೂ ಪೆರಿನಾಟಲ್ ಡಿಪ್ರೆಶನ್ (ಗರ್ಭಸಂಬಂಧ ಖಿನ್ನತೆ) ಎನ್ನಲಾಗುತ್ತದೆ.
ಚಿಹ್ನೆಗಳೇನು?
ಕಾತುರತೆ
ಮನೋಸ್ಥಿತಿ ಬದಲಿ
ನಿದ್ರಾರಾಹಿತ್ಯ
ಮಗುವಿನ ಜೊತೆ ಸಂಬಂಧ ಕಷ್ಟವಾಗುವುದು
ನಕಾರಾತ್ಮಕ ಚಿಂತನೆ
ಭ್ರಮೆಗಳು
ಕಾರಣಗಳೇನು?
ಏಕಾಂಗಿ ಭಾವ ತರುವ ಜೈವಿಕ ಬದಲಾವಣೆ
ಕೌಟುಂಬಿಕ ಹಿಂಸೆ
ಬಡತನ
ಮಗುವಿನ ಲಿಂಗ ಆದ್ಯತೆ
ಭಾರತದಲ್ಲಿ ಸಮಸ್ಯೆ ಹೇಗಿದೆ?
ದೇಶದಲ್ಲಿ ಶೇ 20ರಷ್ಟು ಮಹಿಳೆಯರು ಪೆರಿನಾಟಲ್ ಖಿನ್ನತೆಗೆ ಒಳಗಾಗುತ್ತಾರೆ. ಆದರೆ ಈ ರೋಗದ ಬಗ್ಗೆ ಅತೀ ಕಡಿಮೆ ಜಾಗೃತಿ ಇದೆ. ನಾಚಿಕೆ, ಮೌಢ್ಯ ಮತ್ತು ಜಾಗೃತಿಯ ಕೊರತೆಯಿಂದ ಮಹಿಳೆಯರು ಇಂತಹ ಸಂದರ್ಭದಲ್ಲಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳುವುದಿಲ್ಲ. ಆದರೆ ಆಗಾಗ್ಗೆ ನಾವು ಇದರ ಪರಿಣಾಮಗಳನ್ನು ಸುದ್ದಿಗಳ ರೂಪದಲ್ಲಿ ನೋಡುತ್ತಿರುತ್ತೇವೆ.
ಕಳೆದ ವರ್ಷ ಅಕ್ಟೋಬರ್ ತಿಂಗಳಲ್ಲಿ ಬೆಂಗಳೂರು ಪೊಲೀಸರು 7 ತಿಂಗಳ ಹೆಣ್ಣು ಮಗು ನೀರಿನ ತೊಟ್ಟಿಯಲ್ಲಿ ತೇಲುವುದನ್ನು ಕಂಡರು. ತಾಯಿಯೇ ಮಗಳನ್ನು ಕೊಂದಿರುವುದು ಒಪ್ಪಿಕೊಂಡರು. ಆಕೆ ಇದೇ ಮಾನಸಿಕ ಖಾಯಿಲೆ ಹೊಂದಿದ್ದರು. 2012 ಏಪ್ರಿಲ್ ಮಾಸದಲ್ಲಿ ಗಾಜಿಯಾಬಾದ್ ಮಹಿಳೆ ತನ್ನ 11 ತಿಂಗಳ ಗಂಡು ಮಗುವನ್ನು ಎರಡನೇ ಮಹಡಿಯ ಬಾಲ್ಕನಿಯಿಂದ ಕೆಳಗೆ ಎಸೆದಳು. ಆಕೆಯೂ ಖಿನ್ನತೆಯಿಂದ ಬಳಲುತ್ತಿದ್ದರು.
2010 ಸೆಪ್ಟೆಂಬರ್ ತಿಂಗಳಲ್ಲಿ ಕೇರಳದ ಅಳಪುಳದಲ್ಲಿ ತಾಯಿ ತನ್ನ 8 ತಿಂಗಳ ಗಂಡು ಮಗುವನ್ನು ಮನೆಯ ವಾಷಿಂಗ್ ಮಿಷಿನಿಗೆ ಹಾಕಿದಳು.
ಹೀಗಾಗಿ ಭಾರತದಲ್ಲಿ ಪೆರಿನಾಟಲ್ ಖಿನ್ನತೆಯ ಬಗ್ಗೆ ಹೆಚ್ಚು ಜಾಗೃತಿ ತರುವ ಮತ್ತು ಸಮಸ್ಯೆಗೆ ಸೂಕ್ತ ಚಿಕಿತ್ಸೆ ನೀಡುವ ಅಗತ್ಯವಿದೆ. ಮಧ್ಯಪ್ರದೇಶ ಈಗಾಗಲೇ ಪೆರಿನಾಟಲ್ ಖಿನ್ನತೆಯ ಪರೀಕ್ಷೆಯನ್ನು ಸಾರ್ವಜನಿಕ ಗರ್ಭಿಣಿ ಕಾರ್ಯಕ್ರಮದ ಜೊತೆಗೆ ಸೇರಿಸಿದ ದೇಶದ ಮೊದಲ ರಾಜ್ಯವಾಗಿದೆ.
ಕೃಪೆ: http://everylifecounts.ndtv.com/