×
Ad

ಅಪರಿಚಿತ ಸ್ಥಳದಲ್ಲಿ ಓದಲು ಹೋಗುವಿರಾ? ನೀವು ಕಲಿತುಕೊಳ್ಳುವ ಪಾಠ ಇಲ್ಲಿದೆ...

Update: 2016-05-09 16:12 IST

ವಿದೇಶದಲ್ಲಿ ಅಥವಾ ಅಪರಿಚಿತ ಸ್ಥಳಗಳಿಗೆ ಓದಲು ಹೋಗುವ ವಿದ್ಯಾರ್ಥಿಗಳ ಬಗ್ಗೆ ಯೋಚಿಸುವಾಗ ಅವರು ಫೇಸ್ಬುಕ್ ಪುಟಕ್ಕೆ ಹಾಕುವ ಸುಂದರ ಫೋಟೋಗಳು, ಜತೆಯಾಗಿ ಪಾರ್ಟಿ ಮಾಡಿರುವುದು, ಭಾರತೀಯ ಅಡುಗೆ ಮಾಡಿರುವುದನ್ನೇ ಕಾಣುತ್ತೇವೆ. ಆದರೆ ಈ ಎಲ್ಲಾ ವಿದ್ಯಾರ್ಥಿಗಳಿಗೂ ಅಪರಿಚಿತ ಸ್ಥಳಗಳಿಗೆ ಓದಲು ವಿಮಾನ ಅಥವಾ ರೈಲು ಏರುವ ಮುನ್ನ ನಿಲ್ದಾಣದಲ್ಲಿ ಹೆತ್ತವರನ್ನು ಬೀಳ್ಕೊಡುವಾಗ ಹೊಟ್ಟೆಯಲ್ಲಿ ನಡುಕವಾಗಿದ್ದೂ ಅಷ್ಟೇ ನಿಜ.

ತಮ್ಮ ಪರಿಚಿತ ಪರಿಸರ, ಮನೆಯನ್ನು ಬಿಟ್ಟು ದೂರ ಹೋಗುವ ಏಕಾಂಗಿ ಭಾವನೆ ಎಲ್ಲರಲ್ಲೂ ಇರುತ್ತದೆ. ಮೊದಲ ದಿನವೇ ಅವರು ತರಗತಿಯ ಫೋಟೋ ತೆಗೆಯುವುದಿಲ್ಲ. ಮೊದಲ ದಿನ ಅಪರಿಚಿತ ವಿದ್ಯಾರ್ಥಿಗಳ ನಡುವೆ ತಮ್ಮ ಅಸ್ತಿತ್ವ ಹುಡುಕುತ್ತಿರುತ್ತಾರೆ. ವಿದೇಶದ ರೀತಿ ನೀತಿ ಮತ್ತು ನಡವಳಿಕೆಗಳನ್ನು ಕಲಿತಾಗ ಆದ ತಪ್ಪುಗಳೂ ಅವರ ಫೇಸ್ಬುಕ್ ಪುಟದಲ್ಲಿರುವುದಿಲ್ಲ. ಆ ಮುಜುಗರ, ನಾಚಿಕೆ ಮತ್ತು ಭಯದ ಕ್ಷಣಗಳು ಕೇವಲ ಅವರ ಮನಸ್ಸಿನಲ್ಲಿ ಅವಿತಿರುತ್ತದೆ.

ಕಲಿಯುವುದೇನು?

►ಏಕಾಂಗಿಯಾಗಿ ರೆಸ್ಟೊರೆಂಟುಗಳಲ್ಲಿ ಊಟ ಮಾಡುವುದು. ಸಿನೆಮಾಗಳನ್ನು ಏಕಾಂಗಿಯಾಗಿ ನೋಡುವುದು. ಇತರರ ಮೇಲೆ ಅವಲಂಭಿಸದೆ ಜೀವನ ಮಾಡುವುದನ್ನು ಕಲಿಯುವುದು.

►ಭಾರತೀಯ ಅಡುಗೆ ಮಾಡಿ ಚಿತ್ರವನ್ನು ಪೋಸ್ಟ್ ಮಾಡಿರುತ್ತಾರೆ. ಆದರೆ ಅದಕ್ಕೆ ಮೊದಲು ಎಷ್ಟು ಬಾರಿ ಅಡುಗೆಯ ಪ್ರಯತ್ನದಲ್ಲಿ ವಿಫಲರಾಗಿರುತ್ತಾರೆ ಎನ್ನುವ ಲೆಕ್ಕ ಅವರ ಬಳಿಯೇ ಇರುವುದಿಲ್ಲ.

►ತರಗತಿಯಿಂದ ಮನೆಗೆ ಬಂದು ಬ್ಯಾಗ್ ಎಸೆದು ತಮ್ಮ ಅಂದಿನ ರೋಮಾಂಚಕ ಅನುಭವ ಹೇಳಲೆಂದು ತಡಕಾಡಿದರೆ ಅಮ್ಮಂದಿರು ಪಕ್ಕದಲ್ಲಿರುವುದಿಲ್ಲ. ಹೀಗಾಗಿ ಅಂತಹ ಭಾವನೆಗಳನ್ನು ಮನದಲ್ಲೇ ಹತ್ತಿಕ್ಕಲು ಕಲಿಯುತ್ತಾರೆ.

►ತಮ್ಮ ಸುತ್ತಲಿರುವವರೆಲ್ಲರೂ ಮನದ ಮಾತು ಹೇಳಲು ಸ್ನೇಹಿತರು, ಸಹೋದರರ ಬಳಿಗೆ ಹೋದರೆ ತಾವು ಮಾತ್ರ ಕಂಪ್ಯೂಟರ್ ಮುಂದೆ ಕೂರಬೇಕಾಗುತ್ತದೆ. ಇದು ಹೊಸ ಲೋಕ ತೆರೆದಿಡುತ್ತದೆ.

► ಹೇರ್ ಬ್ರಷ್ ಇಡುವ ಸ್ಥಳದಲ್ಲಿ ಪೆಪ್ಪರ್ ಸ್ಪ್ರೇ ಇಟ್ಟುಕೊಂಡು ರಸ್ತೆಗಳಲ್ಲಿ ನಡೆದಾಡುವುದನ್ನು ಅಭ್ಯಾಸ ಮಾಡುತ್ತಾರೆ.

► ಜನಾಂಗೀಯ ಧ್ವೇಷದ ಮಾತುಗಳು, ವಿಚಿತ್ರ ದೃಷ್ಟಿ ಎಲ್ಲವನ್ನೂ ಸಹಿಸಿಕೊಂಡು ಅವರೊಳಗೆ ಒಂದಾಗಲು ಪ್ರಯತ್ನಿಸಿರುತ್ತಾರೆ. ಇದು ಹೊಸ ವ್ಯಕ್ತಿಗಳನ್ನು ಮತ್ತು ಪರಿಸರವನ್ನು ತಮ್ಮದಾಗಿ ಒಪ್ಪಿಕೊಳ್ಳುವುದನ್ನು ಕಲಿಸುತ್ತದೆ.

► ಏಕಾಂಗಿ ಬಾಡಿಗೆ ಮನೆಯಲ್ಲಿ ಒಬ್ಬರೇ ಇರುವುದು ಅಭ್ಯಾಸವಿಲ್ಲದೆ ಬಾಗಿಲಿಗೆ ಎರಡೆರಡು ಬೀಗ ಜಡಿಯಬೇಕಾಗುತ್ತದೆ.

► ಸ್ವತಃ ನಿರ್ಧಾರಗಳನ್ನು ತೆಗೆದುಕೊಳ್ಳುವುದು, ಹಣ ಉಳಿಸುವುದು ಅಭ್ಯಾಸವಾಗುತ್ತದೆ.

► ನಿಧಾನವಾಗಿ ಜವಾಬ್ದಾರಿಗಳನ್ನು ತಿಳಿದುಕೊಂಡು, ಜಗತ್ತನ್ನು ಅರ್ಥ ಮಾಡಿಕೊಂಡು ಮುನ್ನಡೆಯುವುದನ್ನು ಕಲಿಯುತ್ತಾರೆ.

ಕೃಪೆ: www.storypick.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News