×
Ad

ನಾವು ಅಗತ್ಯಕ್ಕಿಂತ ಅಧಿಕ ಆಹಾರ ತಿನ್ನಲು ಆರು ಕಾರಣಗಳು

Update: 2016-05-09 16:29 IST

ನಾವು ಕೆಲವೊಮ್ಮೆ ನಿಮಗೆ ಎಷ್ಟು ಬೇಕೋ ಅದಕ್ಕಿಂತ ಹೆಚ್ಚು ಆಹಾರವನ್ನು ಸೇವಿಸುತ್ತೇವೆ. ಪ್ರತೀ ಬಾರಿ ನಮ್ಮ ಪ್ರಿಯ ಆಹಾರವನ್ನು ನೋಡಿದಾಗ ಖುಷಿಯಾಗಿ ಹಾರಿ ಬಿದ್ದು ತಿನ್ನಲು ಶುರು ಮಾಡುತ್ತೇವೆ. ಕೆಲವೊಮ್ಮೆ ಟಿವಿ ನೋಡುವಾಗ ಅಥವಾ ಸಿನೆಮಾ ನೋಡುವಾಗ ಕೈಯಲ್ಲಿ ತಿನ್ನಲು ಏನಾದರೂ ಬೇಕೇ ಬೇಕು. ಹೀಗೆ ಅಗತ್ಯವಿಲ್ಲದೆಯೇ ಹೊಟ್ಟೆಗೆ ತ್ಯಾಜ್ಯ ತುಂಬಿಸುತ್ತಾ ಹೋಗಲು ಕಾರಣಗಳೇನು?

ಇಲ್ಲಿದೆ ಕೆಲವು ಕಾರಣಗಳು ಮತ್ತು ಅವುಗಳನ್ನು ಎದುರಿಸುವ ಬಗೆ.

ಸ್ನೇಹಿತರ ವಲಯ

ಕೆಲವೊಮ್ಮೆ ನೀವು ಆರೋಗ್ಯಕರ ಶಿಸ್ತಿನ ಆಹಾರ ಸೇವಿಸಲು ನಿರ್ಧರಿಸಿದ ಬಳಿಕವೂ ಸ್ನೇಹಿತರ ಜತೆಗೆ ರೆಸ್ಟೊರೆಂಟುಗಳಿಗೆ ಹೋಗಿ ತಿನ್ನುವ ಆಸೆ ಬರಬಹುದು. ತೂಕ ಇಳಿಸಬೇಕು ಮತ್ತು ಫಿಟ್ ಆಗಿರಬೇಕು ಎನ್ನುವ ನಿಮ್ಮದೇ ನಿರ್ಧಾರವನ್ನು ನೀವು ಸ್ವತಃ ನೆನಪು ಮಾಡಿಕೊಳ್ಳಿ. ಅದು ನಿಮ್ಮ ಬಗ್ಗೆ ಸಮಾಧಾನ ನೀಡಬಹುದು ವಿನಾ ಸ್ನೇಹಿತರಿಗಲ್ಲ. ಆದರೆ ನಿಮ್ಮ ನಿರ್ಧಾರಗಳಿಗೆ ಬದ್ಧವಾಗಿ ಇರುವುದನ್ನು ಕಲಿಯಿರಿ. ನಿಧಾನವಾಗಿ ನಿಮ್ಮ ಸ್ನೇಹಿತರೂ ನಿಮ್ಮ ಆಯ್ಕೆಗಳನ್ನು ಒಪ್ಪಿಕೊಳ್ಳಲು ಆರಂಭಿಸುತ್ತಾರೆ. ಅವರೂ ನಿಮ್ಮನ್ನೇ ಅನುಸರಿಸಲು ಆರಂಭಿಸಲೂಬಹುದು.

ನಿಮ್ಮ ತಟ್ಟೆ

ನಿಮ್ಮ ಆಹಾರದ ತಟ್ಟೆಯೂ ನೀವು ಹೆಚ್ಚು ತಿನ್ನುವಂತೆ ಮಾಡಲು ಕಾರಣವಾಗಬಹುದು. ದೊಡ್ಡದಾದ ಫ್ಯಾನ್ಸಿ ಪ್ಲೇಟುಗಳು ರೆಸ್ಟೊರಂಟುಗಳಲ್ಲಿ ತಿನ್ನಲು ಚೆನ್ನಾಗಿರುತ್ತವೆ. ಆದರೆ ಪ್ರತೀದಿನ ಊಟದ ಪ್ಲೇಟು ಸಾಮಾನ್ಯವಾಗಿ ಮಧ್ಯಮ ಗಾತ್ರ ಅಥವಾ ಸಣ್ಣದಾಗಿರಲಿ. ಬದಲಾವಣೆ ಮಾಡಿ ಮತ್ತು ಅದು ನಿಮ್ಮ ಆಹಾರ ಸೇವನೆ ಹೇಗೆ ನಿಯಂತ್ರಿಸುತ್ತದೆ ಎಂದು ತಿಳಿದುಕೊಳ್ಳಿ.

ಹಸಿವೆಯ ಅನುಭವ

ಹಲವು ಬಾರಿ ನಾವು ಸುಸ್ತಾಗುವ ಚಿಹ್ನೆಗಳನ್ನು ಹಸಿವೆಯೆಂದು ತಪ್ಪು ತಿಳಿದುಕೊಳ್ಳುತ್ತೇವೆ. ಪ್ರತೀ ರಾತ್ರಿ ಸಾಕಷ್ಟು ನಿದ್ರೆ ನಿಮಗೆ ಸಿಗುವ ಖಾತರಿ ಇರಲಿ. ಆರರಿಂದ ಎಂಟು ಗಂಟೆಗಳ ನಿದ್ದೆ ಅಗತ್ಯ. ಅತೀ ಸುಸ್ತಾಗುವ ಸಮಯ ಯಾವುದೆಂದು ಗುರುತಿಸಿ ಇಟ್ಟುಕೊಳ್ಳಿ. ನೀವು ಒಮ್ಮೆ ಪ್ಯಾಟರ್ನ್ ಗುರುತಿಸಿದಲ್ಲಿ, ಸಂಸ್ಕರಿತ ಆಹಾರದ ಭರಾಟೆಯಿಂದ ಬಿಡಿಸಿಕೊಂಡು ಆರೋಗ್ಯಕರ ಸ್ನಾಕ್ಸ್ ತಿನ್ನುವ ಅಭ್ಯಾಸ ಬೆಳೆಸಿಕೊಳ್ಳುವಿರಿ.

ವೇಗವಾಗಿ ತಿನ್ನುವುದು

ನೀವು ನಿಮ್ಮ ಆಹಾರದ ಮೇಲೆ ಮುಗಿಬಿದ್ದು 10 ನಿಮಿಷದೊಳಗೇ ಅದನ್ನು ಮುಗಿಸಿ ಬಿಡುತ್ತೀರಾ? 20 ನಿಮಿಷದೊಳಗೆ ನೀವು ನಿಮ್ಮ ಪ್ಲೇಟನ್ನು ಸ್ವಚ್ಛಗೊಳಿಸಿಬಿಡುತ್ತೀರಿ ಎಂದರೆ ಅತಿಯಾಗಿ ತಿನ್ನುವ ಅಭ್ಯಾಸವಿದೆ ಎಂದರ್ಥ. ನಿಧಾನವಾಗಿ ತಿನ್ನಿ ಮತ್ತು ಪ್ರತೀ ತುತ್ತನ್ನೂ ಖುಷಿಪಡಿ. ಆಹಾರವನ್ನು ಸರಿಯಾಗಿ ಕಚ್ಚಿ ತಿನ್ನಿ ಮತ್ತು ಪ್ರತೀ ಬಾರಿ ಕಚ್ಚಿದ ಮೇಲೆ ಚಮಚವನ್ನು ಒಮ್ಮೆ ಕೆಳಗೆ ಬಿಟ್ಟು ಮತ್ತೆ ತೆಗೆದುಕೊಳ್ಳಿ.

ಉದಾಸೀನತೆ

ನೀವು ಟಿವಿ ಮುಂದೆ ಕೂತ ಕೂಡಲೇ ಏನಾದರೂ ಕುರುಕಲು ತಿಂಡಿಗಾಗಿ ಕೈ ಒಡ್ಡುವುದು ನೆನಪಿದೆಯೆ? ಕೆಲಸ ಮಾಡುವಾಗಲೂ ಕೆಲವೊಮ್ಮೆ ಬೇಸರವಾದಾಗ ಹೀಗೇ ಕುರುಕಲು ತಿಂಡಿ ತಿನ್ನುತ್ತೀರಿ. ತಜ್ಞರ ಪ್ರಕಾರ ಹೀಗೆ ಉದಾಸೀನತೆ ಅಥವಾ ಮಾಡುವ ಕೆಲಸದ ಮೇಲಿನ ಅನಾಸಕ್ತಿಗಾಗಿ ತಿನ್ನುವ ಮೂಲಕವೇ ಹಲವರು ತೂಕ ಏರಿಸಿಕೊಳ್ಳುತ್ತಾರೆ. ಸಮಸ್ಯೆಯ ಆಳವನ್ನು ಅರ್ಥ ಮಾಡಿಕೊಳ್ಳುವ ಸಮಯ ಬಂದಿದೆ. ಸ್ವತಃ ಬ್ಯುಸಿಯಾಗಿರಿ ಮತ್ತು ಹೆಚ್ಚು ತಿನ್ನುವುದು ಬಿಟ್ಟುಬಿಡಿ.

ತೇವಾಂಶ ಕಡಿಮೆ

ಸಾಕಷ್ಟು ದ್ರವಾಹಾರವನ್ನು ಸೇವಿಸದೆ ಇದ್ದಾಗ ಹೆಚ್ಚು ಆಹಾರ ಸೇವಿಸುತ್ತೀರಿ. ಹೀಗಾಗಿ ದಿನವಿಡೀ ನೀರು ಕುಡಿಯುವ ಅಭ್ಯಾಸವಿರಲಿ. ಪ್ರತೀ ಊಟದ ಸಮಯದಲ್ಲೂ ಒಂದು ಗ್ಲಾಸ್ ನೀರು ಕುಡಿಯುವ ಅಭ್ಯಾಸವಿರಲಿ. ನೀವು ಎದ್ದ ಕೂಡಲೇ ನೀರು ಕುಡಿಯಲು ಮರೆಯಬೇಡಿ.

ಕೃಪೆ: http://timesofindia.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News