ಚಿಕ್ಕಂದಿನಲ್ಲಿ ಆಡಿದ ಈ ಆಟಗಳು ನೆನಪಿವೆಯೆ?

Update: 2016-05-11 09:54 GMT

ಲಗೋರಿ, ಗಿಲ್ಲಿ ದಾಂಡು, ಖೋ ಖೋ ಮೊದಲಾದ ಹೆಸರುಗಳು ನಮ್ಮ ಬಾಲ್ಯದ ನೆನಪು ಮತ್ತು ಸ್ನೇಹಿತರ ಜೊತೆಗಿನ ಸುಮಧುರ ಕ್ಷಣಗಳಿಗೆ ಪ್ರತೀಕವಾಗಿದೆ. ಆದರೆ ಇತ್ತೀಚೆಗೆ ವಿಡಿಯೋ ಗೇಮ್ಸ್ ಮತ್ತು ಕಂಪ್ಯೂಟರ್ ಗೇಮ್ಸ್ ನಡುವೆ ಕೊಚ್ಚಿ ಹೋಗುತ್ತಿರುವ ಇವುಗಳ ಬಗ್ಗೆ ನೆನಪಿಸಿಕೊಳ್ಳುವುದು ಮುಖ್ಯ.

ಲಗೋರಿ

ಇದು ಭಾರತದ ಮಕ್ಕಳಲ್ಲಿ ಒಂದು ಕಾಲದಲ್ಲಿ ಅತೀ ಜನಪ್ರಿಯ ಆಟವಾಗಿತ್ತು. ಕಲ್ಲುಗಳ ಪಟ್ಟಿ ಇಟ್ಟು ಒಂದು ಬಾಲನ್ನು ಎಸೆದು ಅದನ್ನು ಬೀಳಿಸಬೇಕು. ಒಂದು ತಂಡ ಅದನ್ನು ಕಟ್ಟಿದರೆ, ಮತ್ತೊಂದು ತಂಡ ಕಟ್ಟುತ್ತಿರುವ ತಂಡದ ಸದಸ್ಯರನ್ನು ಔಟ್ ಮಾಡಬೇಕು. ಬಾಲು ಸದಸ್ಯನನ್ನು ಸ್ಪರ್ಶಿಸಿದರೆ ಆತ ಔಟ್. ನಂತರ ಆತ ತಂಡದಿಂದ ಹೊರಗಿರಬೇಕು.

ಎರಡು ತಂಡಗಳು ಆಡುವುದು. ಎಷ್ಟು ಮಂದಿ ಬೇಕಾದರೂ ಸೇರಿಕೊಳ್ಳಬಹುದು.

ಗೋಲಿಯಾಟ

ಇದನ್ನು ಈಗಲೂ ಗ್ರಾಮೀಣ ಪರಿಸರದಲ್ಲಿ ಮಕ್ಕಳು ಆಡುತ್ತಾರೆ. ಗಾಜಿನ ಗೋಲಿಗಳನ್ನು ಒಂದರಿಂದ ಮತ್ತೊಂದಕ್ಕೆ ಶೂಟ್ ಮಾಡಬೇಕು. ಹೀಗೆ ಮತ್ತೊಂದು ಗೋಲಿಯನ್ನು ಒಂದು ಗೋಲಿಯಿಂದ ಸ್ಪರ್ಶಿಸುವುದೇ ಆಟ.

ಎಷ್ಟು ಮಂದಿ ಬೇಕಾದರೂ ಆಡಬಹುದು.

ಗಿಲ್ಲಿ ದಾಂಡು

ಈ ಆಟ ಕ್ರಿಕೆಟ್ ಅಥವಾ ಬೇಸ್ ಬಾಲಿನಷ್ಟೇ ಪ್ರಸಿದ್ಧ. ಭಾರತದಲ್ಲಿ ಒಂದು ಕಾಲದಲ್ಲಿ ಕ್ರಿಕೆಟಿನಷ್ಟೇ ಜನಪ್ರಿಯತೆ ಇತ್ತು. ಸಣ್ಣ ಮರದ ತುಂಡು ಗಿಲ್ಲಿ ಮತ್ತು ದೊಡ್ಡ ಮರದ ತುಂಡು ದಾಂಡು. ದಾಂಡಿನಿಂದ ಗಿಲ್ಲಿಗೆ ಗುರಿ ಹೊಡೆಯುವುದೇ ಆಟ.

ಎರಡು ತಂಡಗಳು ಆಡಬಹುದು. ಎಷ್ಟು ಸದಸ್ಯರು ಬೇಕಾದರೂ ಇರಬಹುದು.

ಖೋಖೋ

ಎರಡು ತಂಡಗಳು ಆಡುವುದು. ಒಂದು ತಂಡ ಎರಡು ಕಂಬದ ನಡುವೆ ಸಾಲಾಗಿ ಕೂತಿರುತ್ತಾರೆ. ಅವರಲ್ಲಿ ಒಬ್ಬರ ನಂತರ ಮತ್ತೊಬ್ಬರು ವಿರುದ್ಧ ಕಡೆಗೆ ಮುಖ ಮಾಡಿರುತ್ತಾರೆ. ಮತ್ತೊಂದು ತಂಡದ ಒಂಭತ್ತು ಮಂದಿ ಮೈದಾನಕ್ಕೆ ಒಬ್ಬೊಬ್ಬರಾಗಿ ಇಳಿಯುತ್ತಾರೆ. ಮೊದಲಿಗೆ ಮೂರು ಮಂದಿ ಮೈದಾನದಲ್ಲಿರುತ್ತಾರೆ. ಕುಳಿತಿರುವ ತಂಡದ ಒಬ್ಬಾಕೆ ಅವರನ್ನು ಓಡಿಸುತ್ತಾರೆ. ಅವರು ಕುಳಿತಿದ್ದ ಜನರ ನಡುವೆ ಓಡುತ್ತಾರೆ. ಓಡಿಸುವವರು ಖೋ ಎಂದು ಹೇಳಿ ಕುಳಿತವರನ್ನು ಮುಟ್ಟಿ ಎಬ್ಬಿಸುತ್ತಾರೆ. ಕೂತಾಕೆ ಎದ್ದು ಓಡುವವರನ್ನು ಓಡಿಸಿ ಹಿಡಿಯಬೇಕು. ಸಮಯದೊಳಗೆ ಎಷ್ಟು ಮಂದಿಯನ್ನು ಔಟ್ ಮಾಡಲಾಗುತ್ತದೆ ಎನ್ನುವುದರ ಮೇಲೆ ಗೆಲುವು ನಿರ್ಧಾರವಾಗುತ್ತದೆ.

ಒಂಭತ್ತು ಸದಸ್ಯರಿರುವ ಎರಡು ತಂಡಗಳು ಈ ಆಟ ಆಡುತ್ತವೆ.

ಡೊಂಕ

ಒಂದು ಚಿಪ್ಪೆ ಕಲ್ಲು ಹಿಡಿದು ಆಡುವುದು. ನಾಲ್ಕು ಕೋಣೆಗಳನ್ನು ಸೃಷ್ಟಿಸಲಾಗುತ್ತದೆ. ಡೊಂಕ ಹಾಕಿ ಹಾರುತ್ತಾ ಕಲ್ಲನ್ನು ಕಾಲಿನಿಂದ ದೂಡಬೇಕು. ಕಲ್ಲು ನಾಲ್ಕು ಕೋಣೆಗಳಲ್ಲಿ ಬೀಳಬೇಕು. ಅದಕ್ಕೆ ನಿಯಮಗಳೂ ಇವೆ. ಕಲ್ಲು ಗೆರೆಗೆ ಬಿದ್ದರೆ ಅಥವಾ ಕೋಣೆಗಳಿಂದ ಹೊರಗೆ ಹೋದರೆ ಔಟ್.

ಒಬ್ಬ ಅಥವಾ ಹೆಚ್ಚು ಜನ ಆಡಬಹುದು.

ಕಣ್ಣು ಮುಚ್ಚಾಲೆ

ಒಬ್ಬರು ಕಣ್ಣು ಮುಚ್ಚಿ ನಿಲ್ಲುತ್ತಾರೆ. ಉಳಿದವರೆಲ್ಲ ಓಡಿ ಅಡಗುತ್ತಾರೆ. ಕಣ್ಣು ಮುಚ್ಚಿದವರು ತಮ್ಮ ಹಾಡನ್ನು ಮುಗಿಸಿದ ಮೇಲೆ ಅಡಗಿದವರನ್ನು ಹಿಡಿಯಬೇಕು.

ಎಷ್ಟು ಮಂದಿ ಬೇಕಾದರೂ ಆಡಬಹುದು.

ಕಳ್ಳ-ಸೈನಿಕ

ಒಂದು ತಂಡ ಕಳ್ಳ ಮತ್ತು ಇನ್ನೊಂದು ತಂಡ ಸೈನಿಕರು. ಸೈನಿಕರು ಕಳ್ಳರನ್ನು ಹಿಡಿಯಬೇಕು. ನಂತರ ಈ ತಂಡ ಉಲ್ಟಾ ಆಗಿ ಸೈನಿಕರು ಸಿಪಾಯಿಗಳನ್ನು ಹಿಡಿಯಬೇಕು.

ಎರಡು ತಂಡಗಳು. ಎಷ್ಟು ಮಂದಿ ಬೇಕಾದರೂ ಆಡಬಹುದು.

ಕಬಡ್ಡಿ

ಕಬ್ಬಡ್ಡಿ ಆಟ ಈಗ ವಾಣಿಜ್ಯೀಕರಣಗೊಂಡು ಜನಪ್ರಿಯವಾಗಿದೆ. ಪ್ರೊ ಕಬಡ್ಡಿ ಎನ್ನುವ ಲೀಗ್ ಕೂಡ ಇದೆ. ಎರಡು ತಂಡಗಳು ಆಡುವ ಆಟ ಗ್ರಾಮೀಣ ಮಕ್ಕಳಲ್ಲಿ ಪ್ರಸಿದ್ಧ.

ಟವೆಲ್ ಎತ್ತುವ ಆಟ

ಮಧ್ಯಭಾಗದಲ್ಲಿ ಒಂದು ಟವೆಲ್ ಇಡುತ್ತಾರೆ. ಎರಡೂ ಕಡೆಯಿಂದಲೂ ಟವೆಲ್ ಹಿಡಿಯಲು ಇಬ್ಬರು ಸದಸ್ಯರು ಬರುತ್ತಾರೆ. ಯಾರು ಮೊದಲು ಮತ್ತೊಬ್ಬರ ಕಣ್ಣು ತಪ್ಪಿಸಿ ಟವೆಲ್ ಎತ್ತುತ್ತಾರೋ ಅವರು ಗೆಲ್ಲುತ್ತಾರೆ.

ಎರಡು ತಂಡಗಳು. ಎಷ್ಟು ಜನ ಬೇಕಾದರೂ ಇರಬಹುದು.

ವಿಷಾಮೃತ

ವಿಷ ಕೊಟ್ಟು ಮತ್ತೊಬ್ಬ ವ್ಯಕ್ತಿಯನ್ನು ಔಟ್ ಮಾಡುವುದು. ವಿಷ ಪಡೆದಾತನಿಗೆ ಆತನ ತಂಡದ ಮತ್ತೊಬ್ಬ ಅಮೃತ ಕೊಟ್ಟು ಮತ್ತೆ ಆಟಕ್ಕೆ ಸೇರಿಸಿಕೊಳ್ಳುತ್ತಾನೆ. ಎಲ್ಲಾ ಆಟಗಾರರಿಗೆ ವಿಷ ಕೊಟ್ಟು ಔಟ್ ಮಾಡಿದಾಗ ಮತ್ತೊಂದು ತಂಡ ಗೆಲ್ಲುತ್ತದೆ.

ಎಷ್ಟು ಜನ ಬೇಕಾದರೂ ಆಡಬಹುದು.

ಡೊಂಕ

ಡೊಂಕ ಹಾಕುತ್ತಾ ಓಡುವವರನ್ನು ಔಟ್ ಮಾಡಬೇಕು.

ಎಷ್ಟು ಜನ ಬೇಕಾದರೂ ಆಡಬಹುದು.

ಕೃಪೆ: www.thebetterindia.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News