×
Ad

1,284 ನೂತನ ಗ್ರಹಗಳನ್ನು ಶೋಧಿಸಿದ ಕೆಪ್ಲರ್: ನಾಸಾ

Update: 2016-05-11 23:33 IST

ಮಯಾಮಿ (ಅಮೆರಿಕ), ಮೇ 11: ನಮ್ಮ ಸೌರ ಮಂಡಲದ ಹೊರಗೆ 1,284 ನೂತನ ಗ್ರಹಗಳನ್ನು ಕೆಪ್ಲರ್ ಬಾಹ್ಯಾಕಾಶ ಟೆಲಿಸ್ಕೋಪ್ ಪತ್ತೆಹಚ್ಚಿದೆ ಎಂದು ನಾಸಾ ಮಂಗಳವಾರ ಘೋಷಿಸಿದೆ. ‘‘ಮುಂದೊಂದು ದಿನ ಅಲ್ಲಿ ನಮ್ಮಂತೆಯೇ ಇರುವ ಸೂರ್ಯನ ಸುತ್ತ ಇನ್ನೊಂದು ಭೂಮಿಯನ್ನು ಪತ್ತೆಹಚ್ಚುವ ಭರವಸೆಯನ್ನು ಇದು ನಮ್ಮಲ್ಲಿ ಹುಟ್ಟಿಸಿದೆ’’ ಎಂದು ವಾಶಿಂಗ್ಟನ್‌ನ ನಾಸಾ ಪ್ರಧಾನ ಕಚೇರಿಯಲ್ಲಿರುವ ಮುಖ್ಯ ವಿಜ್ಞಾನಿ ಅಲನ್ ಸ್ಟೋಫನ್ ಹೇಳಿದರು. 2009ರಲ್ಲಿ ಉಡಾಯಿಸಲಾದ ಮಾನವರಹಿತ ಕೆಪ್ಲರ್ ಬಾಹ್ಯಾಕಾಶ ಶೋಧಕ, 1,50,000 ನಕ್ಷತ್ರಗಳ ಸುತ್ತ ಯಾವುದಾದರೂ ಜೀವಪೋಷಕ ಗ್ರಹಗಳು ಪ್ರದಕ್ಷಿಣೆ ಹಾಕುತ್ತಿವೆಯೇ ಎಂಬುದನ್ನು ಶೋಧಿಸುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News