×
Ad

ಅಧಿಕಾರ ಕೈಬಿಡಲು ಬ್ರೆಝಿಲ್ ಅಧ್ಯಕ್ಷೆ ತಯಾರಿ

Update: 2016-05-12 23:46 IST

ಬ್ರೆಸೀಲಿಯ (ಬ್ರೆಝಿಲ್), ಮೇ 12: ತನ್ನನ್ನು ಅಮಾನತಿನಲ್ಲಿಟ್ಟು ತನ್ನ ವಿರುದ್ಧ ಛೀಮಾರಿ ಪ್ರಕ್ರಿಯೆ ಆರಂಭಿಸಲು ಸೆನೆಟ್ ಬಹುಮತದಿಂದ ನಿರ್ಧರಿಸಿದ ಹಿನ್ನೆಲೆಯಲ್ಲಿ, ಅಧಿಕಾರವನ್ನು ಉಪಾಧ್ಯಕ್ಷ ಮೈಕಲ್ ಟೆಮರ್‌ಗೆ ಬಿಟ್ಟುಕೊಡಲು ಬ್ರೆಝಿಲ್ ಅಧ್ಯಕ್ಷೆ ಡಿಲ್ಮಾ ರೌಸೆಫ್ ಗುರುವಾರ ನಿರ್ಧರಿಸಿದ್ದಾರೆ.
 ಮತದಾನಕ್ಕೆ ಮುನ್ನ ಸುದೀರ್ಘ 17 ಗಂಟೆಗಳ ಚರ್ಚೆ ಬುಧವಾರ ರಾತ್ರಿಯಿಡೀ ಮುಂದುವರಿದಿರುವಂತೆಯೇ, ತನ್ನ ಹಣೆಬರಹವೇನೆಂಬುದನ್ನು ಬ್ರೆಝಿಲ್‌ನ ಪ್ರಥಮ ಅಧ್ಯಕ್ಷೆ ಸ್ಪಷ್ಟವಾಗಿ ಕಂಡುಕೊಂಡಿದ್ದಾರೆ.
ಡಿಲ್ಮಾರನ್ನು ಆರು ತಿಂಗಳ ಕಾಲ ಅಮಾನತಿನಲ್ಲಿಡಲು 81 ಸದಸ್ಯ ಬಲದ ಸೆನೆಟ್‌ನಲ್ಲಿ ಸರಳ ಬಹುಮತ ಸಾಕಾಗುತ್ತದೆ. ಈ ಆರು ತಿಂಗಳ ಅವಧಿಯಲ್ಲಿ ಅವರು ಬಜೆಟ್ ಅಕೌಂಟಿಂಗ್ ಕಾನೂನುಗಳನ್ನು ಉಲ್ಲಂಘಿಸಿದ್ದಾರೆ ಎಂಬ ಆರೋಪದ ಕುರಿತು ಚರ್ಚೆ ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News