ಜೂನ್ 7 ರಂದು ಮುಂಗಾರು ಕೇರಳ ಪ್ರವೇಶ
Update: 2016-05-15 14:00 IST
ಹೊಸದಿಲ್ಲಿ, ಮೇ 15: ಮುಂಗಾರು ಮಾರುತವು ಜೂನ್ 7 ರಂದು ಕೇರಳ ಪ್ರವೇಶಿಸಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ರವಿವಾರ ಹೇಳಿದೆ.
ಕಳೆದ ವರ್ಷ ಜೂನ್ 5ರಂದು ಕೇರಳಕ್ಕೆ ಮುಂಗಾರಿನ ಪ್ರವೇಶ ಆಗತ್ತು. ಕಳೆದ ವರ್ಷ ನಾಲ್ಕು ದಿನ ವಿಳಂಬವಾಗಿ ಮುಂಗಾರು ಪ್ರವೇಶವಾಗಿತ್ತು. ಈ ಬಾರಿಯೂ ಮುಂಗಾರು ವಿಳಂಬವಾಗಿದೆ. ಪ್ರಸಕ್ತ ಸಾಲಿನಲ್ಲಿಯೂ ವಾಡಿಕೆಗಿಂತ ಕಡಿಮೆ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಈಗಾಗಲೇ ಹೇಳಿದೆ. ಮೇ 30ರಂದು ಮುಂಗಾರು ಕೇರಳ ಪ್ರವೇಶ ಮಾಡುತ್ತದೆ ಎಂದು ಈ ಮೊದಲು ಹೇಳಲಾಗಿದ್ದರೂ, ಇದೀಗ ಮತ್ತೆ ಬದಲಾಗಿದೆ.