ಸಂಜೆ ಏಳರ ನಂತರ ಎಡವಬೇಡಿ, ಆರೋಗ್ಯ ಹಾಳು ಮಾಡಿಕೊಳ್ಳಬೇಡಿ !

Update: 2016-05-16 05:18 GMT

ಕಚೇರಿಯಿಂದ ಸಂಜೆ ಮನೆಗೆ ಬಂದ ಮೇಲೆ ಟೀವಿ ನೋಡುವುದು, ಸೋಡಾ ಕುಡಿಯುವುದು, ಭರ್ಜರಿ ರಾತ್ರಿಯೂಟ ಮತ್ತು ಸ್ವಲ್ಪ ನಿದ್ದೆ. ಯಾರಾದರೂ ವೃತ್ತಿಪರ ವ್ಯಕ್ತಿಯೂ ತನ್ನ ಸಂಜೆಯನ್ನು ಹೀಗೆ ಕಳೆಯುವ ಬದಲಾಗಿ ಇನ್ಯಾವುದೇ ರೀತಿಯಲ್ಲಿ ಸದುಪಯೋಗಪಡಿಸಿಕೊಳ್ಳಬಹುದು ಎಂದು ಯೋಚಿಸಿದ್ದಾರೆಯೆ?

ಕೆಲಸದಲ್ಲಿ ತೊಟ್ಟ ಉಡುಪನ್ನೂ ಬದಲಿಸುವುದಿಲ್ಲವೆ?

ಬಹಳಷ್ಟು ಮಂದಿ ಮನೆಗೆ ಬಂದು ಬಟ್ಟೆ ಬದಲಿಸಿಕೊಳ್ಳಲೂ ಇಚ್ಛಿಸುವುದಿಲ್ಲ. ಇದು ನೈರ್ಮಲ್ಯದ ವಿಷಯದಲ್ಲಿ ಉತ್ತಮ ಅಭ್ಯಾಸವಲ್ಲ. ಮನೆಗೆ ಬಂದ ಕೂಡಲೇ ಮೊದಲಿಗೆ ನಿಮ್ಮ ಮುಖ ತೊಳೆದುಕೊಂಡು ಕೈ-ಕಾಲುಗಳನ್ನು ತೊಳೆದುಕೊಳ್ಳಿ. ನಂತರ ಬಟ್ಟೆ ಬದಲಾಯಿಸಿ. ಸಾಧ್ಯವಾದರೆ ಸ್ನಾನವೂ ಮಾಡಿ. ಕೆಲಸದಲ್ಲಿ ನೀವು ಕಳೆದ ಎಂಟು ಗಂಟೆ, ಪ್ರಯಾಣದ ಒತ್ತಡ ಎಲ್ಲವೂ ಕಡಿಮೆಯಾಗುತ್ತದೆ. ಹಿತಕರವಾದ ಅನುಭವ ಪಡೆಯಲು ಮತ್ತು ಆರೋಗ್ಯ ಕಾಪಾಡಲು ಇದು ಅತ್ಯವಶ್ಯ.

ಸಾಕಷ್ಟು ನೀರು ಕುಡಿಯುವುದಿಲ್ಲವೆ?

ಬೆಳಗ್ಗಿನಿಂದ ಸಂಜೆಯವರೆಗೆ ಕುಡಿಯುವ ನೀರಿನ ಬಗ್ಗೆ ಗಮನಹರಿಸುತ್ತೀರಿ. ಆದರೆ ಮನೆಗೆ ಬರುತ್ತಲೇ ಅದು ಮರೆತು ಹೋಗುತ್ತದೆ. ಅತಿಯಾದ ಸಕ್ಕರೆ ಇರುವ ಬೇಸಗೆ ಪಾನೀಯ ಕುಡಿಯುತ್ತೀರಿ. ನೀರು ಮರೆಯುತ್ತೀರಿ. ರಾತ್ರಿ ದೇಹಕ್ಕೆ ನೀರು ಕಡಿಮೆಯಾಗಬಾರದು.

ಸ್ನಾಕ್ಸ್ ಸೇವನೆ?

ಮನೆಗೆ ಹೋದ ಮೇಲೆ ಚಹಾ ಕುಡಿದು ಸ್ನಾಕ್ಸ್, ಬಿಸ್ಕತ್ತು ತಿನ್ನುತ್ತೀರಿ? ಸಂಜೆ ಚಹಾ ಕುಡಿಯುವುದು ಮತ್ತು ಆರೋಗ್ಯಕರ ಸ್ನಾಕ್ಸ್ ಉತ್ತಮವೇ. ಮುಂದಿನ ಬಾರಿ ಚಹಾ ಕುಡಿಯುವಾಗ ಕಡಲೆ ಕಾಳುಗಳು ಮತ್ತು ಗೋಧಿ ಬಿಸ್ಕತ್ತುಗಳನ್ನು ಸೇವಿಸಿ. ಹಾಗೆಂದು ರಾತ್ರಿ ಭೋಜನಕ್ಕಾಗುವಾಗ ಚಹಾ ಕುಡಿಯಬೇಡಿ.

ಬಹಳ ಟೀವಿ ನೋಡುತ್ತೀರಾ?

ಸುಸ್ತಾಗಿ ಮನೆಗೆ ಬಂದು ಚಾನೆಲ್ ಮೇಲೆ ಚಾನಲ್ ತಿರುಗಿಸುತ್ತಾ ಟೀವಿ ನೋಡುವಾಗ ರಿಲ್ಯಾಕ್ಸ್ ಆಗುತ್ತದೆ ಎಂದುಕೊಳ್ಳುತ್ತೀರಿ. ಟೀವಿ ಸಮಯ 30 ನಿಮಿಷಗಳಿಗಿಂತ ಹೆಚ್ಚು ಬೇಡ. ಓದುವುದು ಅಭ್ಯಾಸವಿರಲಿ. ನಿಮಗೆ ಇಷ್ಟವಾದುದನ್ನು ಮಾಡಿ.

ಊಟದ ತಟ್ಟೆಯಲ್ಲಿ ಏನಿದೆ?

ಉಪಾಹಾರ ದಿನದ ಉತ್ತಮ ಆಹಾರ ಎನ್ನುತ್ತಾರೆ. ಅದು ನಿಜ. ಆದರೆ ರಾತ್ರಿಯೂಟ ಕಡಿಮೆ ಪ್ರಾಮುಖ್ಯತೆ ಪಡೆಯಬಾರದು. ರಾತ್ರಿಯೂಟ ಬಹಳ ಹಗುರವಾಗಿರಬೇಕು. ನೀವು ದಿನದ ಕೆಲಸ ಮುಗಿಸಿ ಮಲಗುವಾಗ ಹೆಚ್ಚು ಜೀರ್ಣವ್ಯವಸ್ಥೆ ಮೇಲೆ ಒತ್ತಡ ಬೇಡ. ಅದಕ್ಕೂ ನಿದ್ದೆಯ ಅವಕಾಶ ಕೊಡಿ. ಧಾನ್ಯ, ಹಾಲು, ಟೋಸ್ಟ್, ಸೂಪ್, ಬೇಳೆಕಾಳು ಅಥವಾ ಸಲಾಡ್ ಮತ್ತು ಹಣ್ಣುಗಳನ್ನು ಸೇವಿಸಬಹುದು.

ಕೃಪೆ:timesofindia.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News