×
Ad

ವೈದ್ಯಕೀಯ ಮಂಡಳಿಯ ನೀಟ್ (NEET)

Update: 2016-05-20 23:42 IST
ಒಂದು ನಿರ್ಧಾರವನ್ನು ಯಾವುದೇ ವಿಚಾರಣೆಯಿಲ್ಲದೆ ಬದಿಗೆ ತಳ್ಳಲು ಅದು ಹೇಗೆ ಸಾಧ್ಯ? ಆದರೆ ನ್ಯಾಯಾಧೀಶ ದವೆ ಹಠಮಾರಿಯಾಗಿದ್ದರು ಮತ್ತು ಇತರ ನ್ಯಾಯಾಧೀಶರು ಅದಕ್ಕೆ ಒಪ್ಪಿದ್ದರು. ಮುಂದೆ ನಡೆದದ್ದು ಅದಕ್ಕೂ ಹೆಚ್ಚಿನ ಅಸಂಬದ್ಧತೆ. ನೀಟ್‌ನ ಪಠ್ಯಪುಸ್ತಕಗಳು 2015ರ ಡಿಸೆಂಬರ್‌ನಲ್ಲಿ ಮುದ್ರಣವಾಗಿದ್ದರೇನಂತೆ, ಆರು ಲಕ್ಷಕ್ಕೂ ಮಿಕ್ಕಿದ ವಿದ್ಯಾರ್ಥಿಗಳಿಗೆ ನೀಟ್ ಪರೀಕ್ಷೆ ನಡೆಸಲು ಮೇ 1ನೆ ತಾರೀಕನ್ನು ನಿಗದಿಪಡಿಸಲಾಯಿತು. ಪಠ್ಯಪುಸ್ತಕ ಮುದ್ರಣವಾಗುತ್ತಿದ್ದ ಸಮಯದಲ್ಲಿ ನೀಟ್ ಅಸಾಂವಿಧಾನಿಕವಾಗಿತ್ತು. ಈಗ ವಿದ್ಯಾರ್ಥಿಗಳು ಕೇವಲ ಮೂರು ದಿನಗಳಲ್ಲಿ ಪರೀಕ್ಷೆಗೆ ಸಿದ್ಧರಾಗಬೇಕಿತ್ತು. ಅಷ್ಟೇ ಅಲ್ಲದೆ, ರಾಜ್ಯಗಳು ಮತ್ತು ಅಲ್ಪಸಂಖ್ಯಾತ ಸಂಸ್ಥೆಗಳು ನಡೆಸಲುದ್ದೇಶಿಸಿರುವ ಅಥವಾ ಈಗಾಗಲೇ ನಿಗದಿಪಡಿಸಿರುವ ಎಲ್ಲಾ ಪರೀಕ್ಷೆಗಳನ್ನು ರದ್ದುಪಡಿಸುವಂತೆ ಅದು ಸೂಚನೆ ನೀಡಿತ್ತು. ಒಂದು ವೇಳೆ ನ್ಯಾಯಾಧೀಶ ದವೆ ನೇತೃತ್ವದ ತ್ರಿಸದಸ್ಯ ಪೀಠ ಮಾಡಿದ್ದನ್ನು ಶಾಸಕಾಂಗ ಅಥವಾ ಕಾರ್ಯಾಂಗ ಮಾಡಿದ್ದರೆ ಅದನ್ನು ತಡೆಯಬಹುದಿತ್ತು ಅಥವಾ ರದ್ದುಗೊಳಿಸಬಹುದಿತ್ತು. ಯಾವುದೇ ಉಚ್ಚ ನ್ಯಾಯಾಲಯ ಈ ರೀತಿ ವರ್ತಿಸಿದ್ದರೆ ಸರ್ವೋಚ್ಚ ನ್ಯಾಯಾಲಯ, ಉಚ್ಚ ನ್ಯಾಯಾಲಯದ ನಿರ್ಣಯವನ್ನು ಇಟ್ಟಿಗೆಯ ಗೋಡೆಯಂತೆ ಕೆಡವುತ್ತಿತ್ತು. ಈ ನಿರ್ಧಾರವನ್ನು ಮತ್ತಷ್ಟು ನಗೆಪಾಟಲಿಗೀಡುಮಾಡಿದ್ದೆಂದರೆ, ಕೆಲವು ದಿನಗಳ ಮೊದಲಷ್ಟೇ ಮಧ್ಯಪ್ರದೇಶದ ಪ್ರಕರಣದಲ್ಲಿ ನ್ಯಾಯಾಧೀಶ ದಾವೆ ನೇತೃತ್ವದ ಪೀಠ ರಾಜ್ಯದ ಪ್ರಕರಣದಲ್ಲಿ ವಾದಿಸಲು ಎಂಸಿಐ ಮಂಡಳಿಗೆ ಅನುಮತಿ ನೀಡಿತ್ತು (ಅದಕ್ಕೆ ಯಾವುದೇ ಸಂಬಂಧವಿರದಿದ್ದರೂ) ಮತ್ತು ಆಗ ತೀರ್ಪು ಕೂಡಾ ಹೊರಬರದ ಈ ಪ್ರಕರಣದ ವಾದ ಸಿಎಂಸಿಯ ಪುನವಿಮರ್ಶೆಗೆ ಸಾಕಾಗುತ್ತದೆ ಎಂದು ಹೇಳಿಕೊಂಡಿದ್ದು. ಪ್ರಧಾನ ವಕೀಲರ ಪ್ರವೇಶ  ನ್ಯಾಯಾಲಯವು ಮೂರು ನ್ಯಾಯಾಧೀಶರಾದ ದವೆ, ಶಿವ್‌ಕೀರ್ತಿ ಸಿಂಗ್ ಮತ್ತು ಗೋಯೆಲ್ ಜೆಜೆ ಅವರ ಮೂಲಕ ಪ್ರಕರಣವನ್ನು ಆಲಿಸಲು ಮುಂದಾಗಿತ್ತು. ಆಗ ಸೋಲಿ ಸೊರಾಬ್ಜಿ, ಸಿಬಲ್, ಪಿಪಿ ರಾವ್ ಮತ್ತು ನಾನು ಇತರರೊಂದಿಗೆ ಸೇರಿ ಪ್ರಕರಣವನ್ನು ಐದು ಸದಸ್ಯ ಪೀಠದ ಮೂಲಕವೇ ಆಲಿಸಬೇಕು ಎಂದು ಆಗ್ರಹಿಸಿ ಪ್ರತಿಭಟಿಸಿದೆವು. ಯಾಕೆಂದರೆ ತೀರ್ಪನ್ನು ರದ್ದು ಮಾಡಿದ್ದು ಐದು ಸದಸ್ಯ ಪೀಠ. ಆದರೆ ಮೂವರು ನ್ಯಾಯಾಧೀಶರು ಪ್ರಕರಣವನ್ನು ತಮ್ಮ ಮೂಲಕವೇ ಆಲಿಸುವಂತೆ ಹಠ ಹಿಡಿದಿದ್ದರು.  ಒಮ್ಮಿಂದೊಮ್ಮೆಲೆ ರಾಜ್ಯಗಳು ನಡೆಸುವ ಪರೀಕ್ಷೆಗಳನ್ನುಳಿಸುವ ಸಲುವಾಗಿ ಅಟರ್ನಿ ಜನರಲ್ ಅವರು ಪ್ರತ್ಯಕ್ಷವಾದರು. ವದಂತಿಯೇನಿತ್ತೆಂದರೆ (ತಮಿಳುನಾಡಿನ ಅನೇಕ ವಕೀಲರು ದೃಢಪಡಿಸಿದ್ದಾರೆ) ಮುಖ್ಯಮಂತ್ರಿ ಜಯಲಲಿತಾ ಅವರು ಕೋಪಗೊಂಡಿದ್ದಾರೆ ಎಂದು. ಆಕೆಯ ಪಕ್ಷ ಸಂಸತ್ ಅಧಿವೇಶನಕ್ಕೆ ತೊಂದರೆ ಮಾಡುತ್ತದೆ ಎಂದು ತೆರೆಯ ಹಿಂದೆ ಬೆದರಿಕೆ ಇತ್ತು. ತಮಿಳುನಾಡು ತಮಿಳು ಮತ್ತು ಇಂಗ್ಲಿಷ್ ಭಾಷೆಯಲ್ಲಿ 12ನೆ ತರಗತಿಯಿಂದ ನೇಮಕ ಮಾಡುತ್ತದೆ. ಆಂಧ್ರಪ್ರದೇಶ ಮತ್ತು ತೆಲಂಗಾಣ ತಾವು ಸಂವಿಧಾನದ 371ಡಿ ವಿಧಿಯಡಿ ಬರುತ್ತೇವೆ ಎಂದು ಪ್ರತಿಭಟನೆ ನಡೆಸಿದವು. ಕ್ರಿಶ್ಚಿಯನ್ ಕಾಲೇಜು ವೆಲ್ಲೋರ್ ಮತ್ತು ಮಹಾತ್ಮಾ ಗಾಂಧಿ ಕಾಲೇಜುಗಳು ತಮ್ಮದೇ ಆದ ಪರೀಕ್ಷೆಗಳನ್ನು ನಡೆೆಸುತ್ತಿದ್ದವು. ತಾನು ಗಾಂಧೀಜಿಯವರ ತತ್ವಗಳನ್ನು ದಾಖಲಾತಿ ಪರೀಕ್ಷೆಗಳಲ್ಲಿ ಕಡ್ಡಾಯ ಮಾಡುತ್ತೇನೆ ಆದರೆ ನೀಟ್ ಮಾತ್ರ ಜಾರಿಯಲ್ಲಿರುತ್ತದೆ ಎಂದು ನ್ಯಾಯವಾದಿ ದವೆ ಹೇಳಿದ್ದರು. ನಾನು ಹಿಟ್ಲರ್ ಆಗಿದ್ದರೆ ಎಲ್ಲಾ ಶಾಲೆಗಳಲ್ಲಿ ಭಗವದ್ಗೀತೆಯನ್ನು ಕಡ್ಡಾಯಗೊಳಿಸುತ್ತಿದ್ದೆ ಎಂದೊಮ್ಮೆ ದವೆ ಹೇಳಿರುವುದನ್ನು ನಾನವರಿಗೆ ಜ್ಞಾಪಿಸಿದೆ. ಅದ್ಯಾಕೆ ಏಸುಕ್ರಿಸ್ತನ ಬೆಟ್ಟದ ಮೇಲಿನ ಧರ್ಮೋಪದೇಶವನ್ನು ಆರಿಸುವುದಿಲ್ಲ ಎಂದು ನಾನು ಬಹಳಷ್ಟು ಬಾರಿ ಯೋಚಿಸುತ್ತಿದ್ದೆ. ಆದರೆ ರಾಜ್ಯಗಳಿಂದ ಎದುರಾದ ವಿರೋಧದಿಂದ ಕಂಗೆಟ್ಟ ತ್ರಿಸದಸ್ಯ ಪೀಠ ಒಂದು ಹಂತದಲ್ಲಿ ರಾಜ್ಯಗಳು ತಮ್ಮದೇ ಆದ ಪರೀಕ್ಷೆ ಮತ್ತು ಮಾನದಂಡಗಳನ್ನು ಅನುಸರಿಸುವಂತೆ ತಿಳಿಸಲು ಕೂಡಾ ಮುಂದಾಗಿತ್ತು. ವಿಚಾರಣೆಯ ವೇಳೆ ಗುಜರಾತ್ ಮತ್ತು ಆಂಧ್ರಪ್ರದೇಶಕ್ಕೆ ದೀರ್ಘ ಸಮಯಾವಕಾಶ ನೀಡಲಾಗಿತ್ತು. ಖಾಸಗಿ ಸಂಸ್ಥೆಗಳಲ್ಲಿ ಕೂಡಾ ತಮ್ಮದೇ ಆದ ಉನ್ನತ ಪರೀಕ್ಷೆಗಳಿದ್ದವು. ಖಾಸಗಿ ಸಂಸ್ಥೆಗಳಿಗೆ ಕಡಿಮೆ ಅವಧಿ ನೀಡಲಾಯಿತು. ಆದರೆ ರಾಜ್ಯಗಳ ವಿಜಯೋತ್ಸಾಹ ಮಾತ್ರ ಬೇಗನೆ ಕರಗಿತ್ತು. ಒಮ್ಮೆಲೆ, ನ್ಯಾಯಾಧೀಶರು ಮುಖವನ್ನು ಸೊಟ್ಟಗೆ ಮಾಡಿಕೊಂಡು ರಾಜ್ಯಗಳ ಪರೀಕ್ಷೆಗಳ ವಿರುದ್ಧವೂ ತೀರ್ಪನ್ನು ನೀಡಿಬಿಟ್ಟರು. ರಾಜ್ಯಗಳು ತಮ್ಮ ಪರೀಕ್ಷೆಗಳನ್ನು ನಡೆಸಲು ಅನುಮತಿ ನೀಡಬೇಕು ಎಂದು ಸಾಲಿಸಿಟರ್ ಜನರಲ್ ನ್ಯಾಯಾಲಯವನ್ನು ಒಪ್ಪಿಸಲು ಪ್ರಯತ್ನಪಟ್ಟರು. ಇದಕ್ಕೆ ನಾನು ವಿರೋಧ ವ್ಯಕ್ತಪಡಿಸಿ ರಾಜ್ಯಗಳಿಗೆ ಅವಕಾಶ ನೀಡಿದರೆ, ಅಲ್ಪಸಂಖ್ಯಾತ ಮತ್ತು ಸಾಂವಿಧಾನಿಕ ಹಕ್ಕನ್ನು ಹೊಂದಿರುವ ಇತರ ಸಂಸ್ಥೆಗಳಿಗೂ ಈ ಅವಕಾಶವನ್ನು ನೀಡಬೇಕು ಎಂದು ಹೇಳಿದೆ. ಅದಕ್ಕೆ ಬಂದ ಉತ್ತರ, ‘‘ನಾವು ನಿಮ್ಮ ವಿಚಾರವನ್ನು ಆಲಿಸುತ್ತೇವೆ.’’ ದೂರಕ್ಕೆ ಸಾಗುವ ಫಲಿತಾಂಶ ಕೇಂದ್ರ ಸರಕಾರವು ಎರಡು ಮುಖವನ್ನು ಹೊಂದಿದೆ. ಒಂದು ಕಡೆ ಅದು ದಾಖಲಾತಿ ಪರೀಕ್ಷೆಯನ್ನು ರಾಷ್ಟ್ರೀಕರಣಗೊಳಿಸಲು ಎಂಸಿಐಯನ್ನು ಬೆಂಬಲಿಸುತ್ತದೆ. ಮತ್ತೊಂದು ಕಡೆ ಈ ಕಠೋರ ನಿರ್ಧಾರವನ್ನು ಮುಂದಕ್ಕೆ ಕೊಂಡೊಯ್ಯದಂತೆ ಅದು ತನ್ನದೇ ಆದ ಮಿತ್ರಪಕ್ಷಗಳಿಂದ ಬೆದರಿಕೆಯನ್ನು ಪಡೆಯುತ್ತಿದೆ. ನೀಟ್ ಭಾಷೀಯ ಸಂಯುಕ್ತತೆಯ ಆಳಕ್ಕೆ ಹೋಗುತ್ತದೆ. ತಮಿಳುನಾಡು ಮತ್ತು ಇತರ ರಾಜ್ಯಗಳು ತಮ್ಮ 10+2 ಬಡ ತಮಿಳು ವಿದ್ಯಾರ್ಥಿಗಳು ಜೀವನದಲ್ಲಿ ಸಾಧಿಸಲು ಅವಕಾಶ ನೀಡುತ್ತದೆ ಎಂದು ವಾದಿಸುತ್ತವೆ. ದೇಶದಲ್ಲಿರುವ ಬಹಳಷ್ಟು ಮಂಡಳಿಗಳು ನೀಟ್ ಪರೀಕ್ಷೆ ಆಧರಿಸಿರುವ ಐಎಸ್‌ಸಿ ಅಥವಾ ಸಿಬಿಎಸ್‌ಸಿ ಪಠ್ಯಕ್ರಮವನ್ನು ಹೊಂದಿಲ್ಲ. ಸಿಬಿಎಸ್‌ಸಿ ಈ ಪರೀಕ್ಷೆಗಳನ್ನು ನಡೆಸುತ್ತದೆ. ನಿಜವಾಗಿಯೂ, ಇಂಗ್ಲಿಷ್‌ನಲ್ಲಿ ಎಂಬಿಬಿಎಸ್ ಮಾಡುತ್ತಾರೆ, ಆದರೆ ದಾಖಲಾತಿಪೂರ್ವ ಅರ್ಹತೆಯೊಂದಿಗೆ. ಓರ್ವ ಆಂಗ್ಲ ಮಾಧ್ಯಮ ವಿದ್ಯಾರ್ಥಿಗೆ ಪ್ರಾದೇಶಿಕ ಭಾಷಾ ವಿದ್ಯಾರ್ಥಿಗಿಂತ ಹೆಚ್ಚಿನ ಅನುಕೂಲತೆಯಿದೆ. ನೀಟ್‌ನ ರಚನೆ ಈ ರೀತಿಯಿದೆ. ಅದು ಕೇವಲ ಆಂಗ್ಲ ಭಾಷೆಯಲ್ಲಿ ಮತ್ತು ಬಹಳ ಸ್ವಲ್ಪ ಹಿಂದಿಯಲ್ಲಿ ಪರೀಕ್ಷೆ ನಡೆಸುತ್ತದೆ. ಆದರೆ ಇನ್ನೊಂದು ಪರಿಣಾಮ ಕೂಡಾ ಇದೆ. 1958ರ ಪ್ರಸಿದ್ಧ ಕೇರಳ ತೀರ್ಪಿನ ಪ್ರಕಾರ, ಅನೇಕ ಐದು ಮತ್ತು ಒಂಬತ್ತು ನ್ಯಾಯಾಧೀಶರ ತೀರ್ಮಾನದಂತೆ ಭಾಷೀಯ ಮತ್ತು ಧಾರ್ಮಿಕ ಅಲ್ಪಸಂಖ್ಯಾತ ಸಂಸ್ಥೆಗಳು ರಕ್ಷಿಸಲ್ಪಟ್ಟಿವೆ. 2002ರ ಟಿಎಂಎ ಪೈ ತೀರ್ಪು ಅಂತಿಮವಾಗಿ ಎಲ್ಲಾ ವಿವಾದಗಳಿಗೂ ತೆರೆಯೆಳೆದು ಅಲ್ಪಸಂಖ್ಯಾತ ಸಂಸ್ಥೆಗಳನ್ನು ತಮ್ಮದೇ ಆದ ಪರೀಕ್ಷೆಗಳನ್ನು ನಡೆಸಲು ಮುಕ್ತವಾಗಿಸಲಾಯಿತು. ಭಾರತದ ಬಹುಸಂಸ್ಕೃತಿ ಮತ್ತು ಬಹುಧಾರ್ಮಿಕ ವೈವಿಧ್ಯತೆಗೆ ಅನುಗುಣವಾಗಿ ಇದೊಂದು ಬಹಳ ಶ್ರೇಷ್ಠ ತೀರ್ಮಾನವಾಗಿತ್ತು. ಅದು ಏನು ಹೇಳುತ್ತದೆ ಓದಿ:  ‘‘ಒಂದು ಬಿಲಿಯನ್ ಜನಸಂಖ್ಯೆಯಿರುವ ಭಾರತದಲ್ಲಿ ಆರು ಮುಖ್ಯ ಜನಾಂಗೀಯ ಗುಂಪುಗಳಿವೆ ಮತ್ತು ಐವತ್ತೆರಡು ಪ್ರಮುಖ ಪಂಗಡಗಳಿವೆ; ಆರು ಮುಖ್ಯ ಧರ್ಮಗಳು ಮತ್ತು 6,400 ಜಾತಿಗಳು ಮತ್ತು ಉಪಜಾತಿಗಳು; 18 ಪ್ರಮುಖ ಭಾಷೆಗಳು ಮತ್ತು 1,600 ಸಣ್ಣ ಭಾಷೆಗಳು. ಭಾರತದಲ್ಲಿನ ಜಾತ್ಯತೀತತೆಯ ಸೊಬಗನ್ನು ಕಾಣಬೇಕಾದರೆ ಭಾರತದ ಭೂಪಟವನ್ನು ಮೊಸೈಕ್ ಮೇಲೆ ಚಿತ್ರಿಸಬೇಕು. ಅಲ್ಲಿ ಭೂಪಟ ರಚಿಸಲು ಬೇಕಾಗುವ ಸಣ್ಣಸಣ್ಣ ಅಮೃತಶಿಲೆಯ ಕಲ್ಲುಗಳು ದೇಶದಲ್ಲಿರುವ ಒಂದು ಬಿಲಿಯನ್ ಜನರು. ಪ್ರತಿಯೊಬ್ಬ ವ್ಯಕ್ತಿ ಆಕೆ ಅಥವಾ ಆತ ಯಾವುದೇ ಧರ್ಮ, ಜಾತಿ, ಪಂಗಡವಾಗಿರಲಿ ಅವರನ್ನು ರಕ್ಷಿಸಲೇ ಬೇಕು, ಆಗ ಮಾತ್ರ ಆ ಎಲ್ಲಾ ಜನರನ್ನು ಒಂದುಗೂಡಿದಾಗ ಭಾರತದ ಸುಂದರ ಭೂಪಟ ಸಿದ್ಧವಾಗಲು ಸಾಧ್ಯ. ಭೂಪಟದಲ್ಲಿ ಕಂಡುಬರುವ ಬಣ್ಣಗಳ ವ್ಯತ್ಯಾಸ ಮತ್ತು ಏರುಪೇರು ಅದು ಹೊಂದಿರುವ ವಿವಿಧ ಹಿನ್ನೆಲೆಯ ಜನರಿಂದುಂಟಾಗಿದೆ, ಆದರೆ ಅದರಲ್ಲಿ ಯಾವುದೇ ಒಂದು ಬಣ್ಣವನ್ನು ಅಥವಾ ಅಮೃತಶಿಲೆಯನ್ನು ತೆಗೆದರೂ ಭಾರತದ ಭೂಪಟದ ಅಂದವೇ ಕೆಡುತ್ತದೆ.’’ ನೀಟ್‌ನ ನಿರ್ಧಾರವು ಅಪಾಯವನ್ನು ಆಹ್ವಾನಿಸುತ್ತಿದೆ. ಅದು ಸ್ಪಷ್ಟವಾಗಿ ಅಸಂಬದ್ಧ ಯಾಕೆಂದರೆ ನೀಟನ್ನು ರದ್ದು ಮಾಡುವ ಸಿಎಂಸಿಯ 2014ರ ತೀರ್ಪು ಇನ್ನೂ ಕೂಡಾ ರದ್ದಾಗಿಲ್ಲ. ವೈದ್ಯಕೀಯ ಶಿಕ್ಷಣದ ಗಂಟಲೊಳಗೆ ಅಸಾಂವಿಧಾನಿಕವಾಗಿ ನೂಕಲ್ಪಡುತ್ತಿರುವ ನೀಟ್‌ನ ನಿಜವಾದ ಪರಿಣಾಮವೆಂದರೆ ಅದು ಬಡವ ವಿರೋಧಿ, ಅಲ್ಪಸಂಖ್ಯಾತ ವಿರೋಧಿ, ಒಕ್ಕೂಟ ವಿರೋಧಿ ಮತ್ತು ಸಂವಿಧಾನ ವಿರೋಧಿ. ಪ್ರತಿಯೊಂದು ರಾಜ್ಯ ಕೂಡಾ ಈ ನಿರ್ಧಾರವನ್ನು ಹಿಂಪಡೆಯುವಂತೆ ಆಗ್ರಹಿಸಿ ಮಸೂದೆ ಮಂಡಿಸಬೇಕು ಮತ್ತು ಸರ್ವೋಚ್ಚ ನ್ಯಾಯಾಲಯದ ಆದೇಶದ ವಿರುದ್ಧ ರಾಷ್ಟ್ರಪತಿಯವರು ಹಸ್ತಕ್ಷೇಪ ಮಾಡುವಂತೆ ಕೋರಬೇಕು. ಮೋದಿ ಸರಕಾರ ಏನು ಮಾಡುತ್ತದೆ ಎಂದು ನೋಡೋಣ. ಬಹುಶಃ ಸರ್ವೋಚ್ಚ ನ್ಯಾಯಾಲಯ ಅದರ ಪರ ಆಟವಾಡುವಾಗ ಕೇಂದ್ರ ಸರಕಾರ ಬದಿಯಲ್ಲಿ ಕುಳಿತುಕೊಂಡಿರಬಹುದು.
ಸರ್ವೋಚ್ಚ ನ್ಯಾಯಾಲಯ ಯಾವತ್ತೂ ಕೂಡಾ ಓರ್ವ ಅಸಮ್ಮತಿ ಹೊಂದಿರುವ ನ್ಯಾಯಾಧೀಶರ ಸಿದ್ಧಾಂತವನ್ನು ಇಷ್ಟೊಂದು ಒತ್ತಾಯಪೂರ್ವಕವಾಗಿ ಹೇರಿದ ಇತಿಹಾಸವಿಲ್ಲ.

Writer - ರಾಜೀವ್ ಧವನ್

contributor

Editor - ರಾಜೀವ್ ಧವನ್

contributor

Similar News