×
Ad

ತಮಿಳುನಾಡು ಅಸೆಂಬ್ಲಿ ಇತಿಹಾಸದಲ್ಲೇ ಅತಿ ಶ್ರೀಮಂತ 170 ಕೋಟ್ಯಧಿಪತಿಗಳು

Update: 2016-05-21 21:58 IST

ಚೆನ್ನೈ, ಮೇ 21: ಈ ಬಾರಿಯ ತಮಿಳುನಾಡು ವಿಧಾನಸಭೆ, ರಾಜ್ಯದ ಇತಿಹಾಸದಲ್ಲೇ ಅತ್ಯಂತ ಶ್ರೀಮಂತ ವಿಧಾನಸಭೆಯಾಗಲಿದೆ. ದಾಖಲೆ ಪ್ರಮಾಣದ ಅಂದರೆ 170 ಮಂದಿ ಕೋಟ್ಯಧಿಪತಿಗಳು ಬಾರಿ ವಿಧಾನಸಭಾ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಅಭ್ಯರ್ಥಿಗಳು ಚುನಾವಣೆ ವೇಳೆ ಘೋಷಣೆ ಮಾಡಿಕೊಂಡು ತಮ್ಮ ಆಸ್ತಿ ಪಾಸ್ತಿ ವಿವರಗಳಿಂದ ಈ ಅಂಶ ಬಹಿರಂಗವಾಗಿದೆ.
ಮುಖ್ಯಮಂತ್ರಿ ಜೆ.ಜಯಲಲಿತಾ ಸೇರಿದಂತೆ ಮೂವರು ಶಾಸಕರು, 100ಕೋಟಿಗಿಂತ ಅಧಿಕ ವೌಲ್ಯದ ಆಸ್ತಿ ಹೊಂದಿದ್ದಾರೆ. ನಂಗುನೇರಿಯ ಕಾಂಗ್ರೆಸ್ ಶಾಸಕ ಎಚ್. ವಸಂತಕುಮಾರ್ ಅವರ ಆದಾಯ 337 ಕೋಟಿ. ಅಣ್ಣಾನಗರ ಡಿಎಂಕೆ ಶಾಸಕ ಎಂ.ಎ.ಮೋಹನ್ ಅವರ ಆಸ್ತಿ ವೌಲ್ಯ 170 ಕೋಟಿ ರೂಪಾಯಿ.ಮೊನ್ನೆ ಚುನಾವಣೆ ನಡೆದ ನಾಲ್ಕು ವಿಧಾನಸಭೆಗಳ ಪೈಕಿ 100 ಕೋಟಿಗಿಂತ ಅಧಿಕ ವೌಲ್ಯದ ಶಾಸಕರನ್ನು ಹೊಂದಿರುವ ಏಕೈಕ ವಿಧಾನಸಭೆ ಇದಾಗಲಿದೆ. ಆದರೆ ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ಕೂಡಾ 100 ಕೋಟಿ ರೂಪಾಯಿಗಿಂತ ಹೆಚ್ಚು ವೌಲ್ಯದ ಶಾಸಕರಿದ್ದಾರೆ. ಇಲ್ಲಿ ಆಯ್ಕೆಯಾದ ಶೇ. 83ರಷ್ಟು ಶಾಸಕರು ಕೋಟ್ಯಧಿಪತಿಗಳಾಗಿದ್ದರೆ, ತಮಿಳುನಾಡಿನ ಶಾಸಕರಲ್ಲಿ ಶೇ.76ರಷ್ಟು ಮಂದಿ ಈ ಸ್ಥಾನಮಾನ ಹೊಂದಿದ್ದಾರೆ.
ತಮಿಳುನಾಡು ವಿಧಾನಸಭೆ ಶಾಸಕರ ಸರಾಸರಿ ಆಸಿವೌಲ್ಯ 8.21 ಕೋಟಿ ರೂಪಾಯಿ. ಇತ್ತೀಚೆಗೆ ಚುನಾವಣೆ ನಡೆದ ರಾಜ್ಯಗಳಲ್ಲೇ ಇದು ಅತ್ಯಧಿಕ.
ತಮಿಳುನಾಡಿನ 170 ಶಾಸಕರು 31ರಿಂದ 70 ವರ್ಷ ವಯೋಮಿತಿಯವಾಗಿದ್ದು, 90 ಮಂದಿ 25 ರಿಂದ 30 ವರ್ಷ ವಯೋಮಿತಿಯವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News