ಖಾಮಿನೈಗೆ 7 ಶತಮಾನದ ಕುರ್‌ಆನ್ ಹಸ್ತಪ್ರತಿಯ ಉಡುಗೊರೆ ನೀಡಿದ ಮೋದಿ

Update: 2016-05-23 18:43 GMT

ಟೆಹ್ರಾನ್, ಮೇ 23: ಪ್ರಧಾನಿ ನರೇಂದ್ರ ಮೋದಿ ಸೋಮವಾರ ಇರಾನ್‌ನ ಸರ್ವೋಚ್ಚ ನಾಯಕ ಸಯ್ಯದ್ ಅಲಿ ಖಾಮಿನೈ ಅವರನ್ನು ಭೇಟಿಯಾದ ಸಂದರ್ಭದಲ್ಲಿ ಅವರಿಗೆ ಪವಿತ್ರ ಕುರ್‌ಆನ್ ಗ್ರಂಥದ 7 ಶತಮಾನದ ಅಪೂರ್ವ ಹಸ್ತಪ್ರತಿಯೊಂದನ್ನು ಕೊಡುಗೆಯಾಗಿ ನೀಡಿದ್ದಾರೆ.

   ಕುಫಿಕ್ ಶೈಲಿಯ ಅಕ್ಷರವಿನ್ಯಾಸದಲ್ಲಿ ರಚಿತವಾದ ಈ ಹಸ್ತಪ್ರತಿಯನ್ನು, ಕೇಂದ್ರ ಸಂಸ್ಕೃತಿ ಸಚಿವಾಲಯದ ಅಧೀನದಲ್ಲಿರುವ ಉತ್ತರ ಪ್ರದೇಶದ ರಾಮ್‌ಪುರ್ ರಝಾ ಗ್ರಂಥಾಲಯದಲ್ಲಿ ಸಂಗ್ರಹಿಸಿಡಲಾಗಿತ್ತು. ವಾಜಪೇಯಿ ಬಳಿಕ ಇರಾನ್‌ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿಯಾಗಿರುವ ಮೋದಿಯವರು, ಖ್ಯಾತ ಕವಿ ಮಿರ್ಝಾ ಗಾಲಿಬ್ 18ನೇ ಶತಮಾನದಲ್ಲಿ ಪರ್ಶಿಯನ್ ಭಾಷೆಯಲ್ಲಿ ಬರೆದಿರುವ ‘ಖುಲ್ಲಿಯತೆ ಫಾರ್ಸಿ ಎ ಗಾಲಿಬ್’ ಕವನಗಳ ಸಂಕಲನವನ್ನು ಇರಾನ್ ಅಧ್ಯಕ್ಷ ಹಸನ್ ರೂಹಾನಿಯವರಿಗೆ ಕೊಡುಗೆಯಾಗಿ ನೀಡಿದರು. 1863ರಲ್ಲಿ ಪ್ರಕಟವಾದ ಈ ಅಪೂರ್ವ ಕವನಸಂಕಲನವು 11 ಸಾವಿರಕ್ಕೂ ಅಧಿಕ ಪದ್ಯಗಳನ್ನು ಒಳಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News