ಒಬ್ಬರೇ ಪ್ರಯಾಣಿಸಬಾರದ ಅಪಾಯಕಾರಿ ನಗರಗಳ ಪಟ್ಟಿಯಲ್ಲಿ ಭಾರತದ ಪ್ರಮುಖ ನಗರ!

Update: 2016-05-24 08:02 GMT

ಬಹಳಷ್ಟು ಮಂದಿ ಸಾಹಸಮಯ ಪ್ರಯಾಣಕ್ಕೆ ಸಿದ್ಧವಾಗುತ್ತಾರೆ. ಏಕಾಂಗಿಯಾಗಿ ಪ್ರಯಾಣಿಸುವುದು ಹಲವರ ಅಭ್ಯಾಸ. ಆದರೆ ಹೀಗೆ ದೂರ ಪ್ರಯಾಣವನ್ನು ಏಕಾಂಗಿಯಾಗಿ ಮಾಡುವುದು ಮಜಾ ಕೊಡಬಹುದಾದರೂ, ಜಾಗರೂಕರಾಗಿರುವುದು ಉತ್ತಮ. ನೀವು ಹೋಗುವ ತಾಣದ ಬಗ್ಗೆ ವಿವರ ತಿಳಿದುಕೊಳ್ಳುವುದು ಅತೀ ಮುಖ್ಯ. ಕೆಲವು ತಾಣಗಳಿವೆ ಅಲ್ಲಿನ ಅಪಾಯಕಾರಿ ಸ್ಥಿತಿಗಳ ಕಾರಣ ಭೇಟಿ ನೀಡಬಾರದು. ಉದಾಹರಣೆಗೆ ಅಪರಾಧ ಜಾಗತಿಕವಾಗಿ ಸಾಮಾನ್ಯವಾಗಿದೆ. ಆದರೆ ಕೆಲವು ನಗರಗಳಲ್ಲಿ ಇವು ಮಿತಿಮೀರಿರಬಹುದು. ಮಾಧ್ಯಮಗಳ ಪ್ರಕಾರ ವೆನಿಜುವೆಲ ಈಗ ದೊಡ್ಡ ಬಿಕ್ಕಟ್ಟಿನಲ್ಲಿದೆ. ಅಲ್ಲಿನ ರಾಜಧಾನಿ ಕಾರಕಸ್ ನಲ್ಲಿ ಕಳೆದ ವರ್ಷ ಜಾಗತಿಕವಾಗಿಯೇ ಅತೀ ಹೆಚ್ಚು ಕೊಲೆಗಳನ್ನು ಕಂಡಿದೆ. ಈ ನಗರಗಳಿಗೆ ಹೋಗಬೇಕಾದರೆ ಜತೆಯಲ್ಲಿ ಯಾರಾದರೂ ಇರಲೇಬೇಕು. ಅಂತಹ ಕೆಲವು ಅಪಾಯಕಾರಿ ಸ್ಥಳಗಳ ವಿವರಗಳು ಇಲ್ಲಿವೆ.

ಮೆಕ್ಸಿಕೊ ನಗರ, ಮೆಕ್ಸಿಕೊ

ಅಪಹರಣ, ಕೊಲೆ ಮತ್ತು ಸುಲಿಗೆಗಳು ಇಲ್ಲಿ ಸಾಮಾನ್ಯ. ಅಮೆರಿಕ ಹೇಳಿರುವ ಪ್ರಕಾರ ಮೆಕ್ಸಿಕೊದ ಕೆಲವು ಸ್ಥಳಗಳು ಸುರಕ್ಷಿತವಲ್ಲ. ಅಮೆರಿಕನ್ನರ ಮೇಲೆ ಹಿಂಸಾತ್ಮಕ ಅಪರಾಧಗಳಾಗಿವೆ. ಅಪಹರಣ, ಕಾರು ಅಪಹರಣ, ಕೊಲೆ ಮತ್ತು ಕಳ್ಳತನವು ಮೆಕ್ಸಿಕೊದ ವ್ಯವಸ್ಥಿತ ಜಾಲಗಳಿಂದ ನಡೆಯುತ್ತವೆ ಎಂದು ಅಮೆರಿಕ ಅಧಿಕೃತವಾಗಿ ಘೋಷಿಸಿದೆ. ಮೆಕ್ಸಿಕೊಗೆ ಏಕಾಂಗಿಯಾಗಿ ಪ್ರಯಾಣಿಸುವುದು ಅತೀ ಅಪಾಯಕಾರಿ.

ಡೆಟ್ರಾಯಿಟ್, ಮಿಚ್

ಡೆಟ್ರಾಯಿಟ್ ಶಾಂತವಾಗುತ್ತಿದೆಯಾದರೂ, ಈಗಲೂ ಇದನ್ನು ಅಪಾಯಕಾರಿ ನಗರವೆಂದೇ ಹೇಳಲಾಗುತ್ತಿದೆ. ಕಳ್ಳತನಗಳು, ಲೈಂಗಿಕ ಹಲ್ಲೆಗಳು, ಕೊಲೆಗಳು, ಮಾದಕ ದ್ರವ್ಯ ಮೊದಲಾದವು ಬೀದಿಗಳಲ್ಲಿ ಸಾಮಾನ್ಯ.

ಲಿಮಾ,ಪೆರು ಪ್ರವಾಸಿಗರು ಮತ್ತು ಸ್ಥಳೀಯರನ್ನು ಪೆರು ದೇಶದ ಲಿಮಾಗೆ ಭೇಟಿ ನೀಡುವುದು ಮತ್ತು ನೆಲೆಸುವ ಬಗ್ಗೆ ಎಚ್ಚರಿಸಲಾಗಿದೆ. ಇದನ್ನು ಸುರಕ್ಷಿತ ನಗರವಾಗಿಸಲು ಕ್ರಮ ಕೈಗೊಳ್ಳಲಾಗುತ್ತಿದ್ದರೂ ಅಪಾಯ ಇನ್ನೂ ಇದೆ. ಸೆಂಟ್ರಲ್ ಪ್ಲಾಜಾದಂತಹ ಅಧಿಕ ಪ್ರವಾಸಿಗರು ಇರುವ ಸ್ಥಳಗಳಲ್ಲಿ ಬೀದಿ ಅಪರಾಧಗಳು ಸಾಮಾನ್ಯ. ಜೊತೆಯಲ್ಲಿ ಮತ್ತೊಬ್ಬ ವ್ಯಕ್ತಿ ಇದ್ದು ಪ್ರಯಾಣಿಸಿ. ಬೀದಿಗಳಲ್ಲಿ ಅತ್ತಿತ್ತ ನೋಡುತ್ತಾ ನಡೆಯಲು ಇಬ್ಬರು ಬೇಕು. ಪರ್ಸ್ ಕಳ್ಳರು ಮತ್ತು ಇತರ ಹಣ ಹೊಡೆಯುವವರು ಇಲ್ಲಿ ಸಾಮಾನ್ಯ.

ನವದೆಹಲಿ, ಭಾರತ

ಜಗತ್ತಿನ ಅತೀ ಕೆಟ್ಟ ನಗರ ಮಾತ್ರವಲ್ಲ, ಅಪಾಯಕಾರಿ ಕೂಡ. ನಗರ ದೊಡ್ಡದಾಗಿದ್ದು, 12 ದಶಲಕ್ಷ ಮಂದಿ ಇದ್ದಾರೆ. ಹೀಗಾಗಿ ಕಳ್ಳತನದಂತಹ ಅಪರಾಧ ಸಾಮಾನ್ಯ. ಜನಸಂದಣಿ ಇರುವ ಸ್ಥಳಗಳಲ್ಲಿ, ಬಸ್ ಮತ್ತು ರೈಲ್ವೇ ನಿಲ್ದಾಣದಲ್ಲಿ ಪಿಕ್ ಪಾಕೆಟ್ ಸಾಮಾನ್ಯ. ಪರ್ಸುಗಳು ಮತ್ತು ಬ್ಯಾಗುಗಳನ್ನು ಜಾಗರೂಕವಾಗಿ ಇಡಬೇಕು.

ಮೆಂಫಿಸ್, ಟೆನ್

ಮೆಂಫಿಸ್ ನಗರಕ್ಕೆ ಒಬ್ಬರೇ ಪ್ರಯಾಣಿಸಲೇಬೇಡಿ. 2015ರಲ್ಲಿ ಎಫ್‌ಬಿಐ ಮೆಂಫಿಸನ್ನು ಜಗತ್ತಿನ 3ನೇ ಅತೀ ಅಪಾಯಕಾರಿ ನಗರ ಎಂದು ಕರೆದಿದೆ. ಇಲ್ಲಿನ ಬಡತನದ ಕಾರಣವೇ ಅಧಿಕ ಅಪರಾಧ ನಡೆಯುತ್ತದೆ. ಕೊಲೆ ಸುಲಿಗೆ, ಮೋಟಾರ್ ಬೈಕ್ ಕಳ್ಳತನ ಇಲ್ಲಿ ಸಾಮಾನ್ಯ.

http://www.foxnews.com/

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News