ಕ್ರಾಂತಿಕಾರಿ ಭಗತ್ ಸಿಂಗ್ ಹಾಗೂ ಸ್ವಾತಂತ್ರ್ಯ ಚಳವಳಿ

Update: 2016-05-24 17:29 GMT

ಲವು ಕಾರಣಗಳಿಗೆ ಇತಿಹಾಸ ಸದಾ ಚರ್ಚೆಯಲ್ಲಿರುತ್ತದೆ. ಹೀಗೆ ಬೆಳಕಿಗೆ ಬಂದಿರುವ ಇಂಥ ಒಂದು ಚರ್ಚೆ ಭಗತ್ ಸಿಂಗ್ ಅವರ ಇತಿಹಾಸವನ್ನು ಹೊಸ ಆಯಮದಿಂದ ನೋಡುವುದಕ್ಕೆ ಸಂಬಂಸಿದ್ದು. ಇಂದಿನ ಜಾಗತಿಕ ಭಯೋತ್ಪಾದನೆ ಪರಿಸ್ಥಿತಿ ಹಿನ್ನೆಲೆಯಲ್ಲಿ ದೃಷ್ಟಿಕೋನ ಬದಲಾಗಿದೆ. ಒಂದು ಟಿವಿ ಷೋದಲ್ಲಿ ಖ್ಯಾತ ಇತಿಹಾಸಗಾರ ಬಿಪಿನ್‌ಚಂದ್ರ ಹಾಗೂ ಅವರ ‘ಇಂಡಿಯಾಸ್ ಸ್ಟ್ರಗಲ್ ಾರ್ ಇಂಡಿಪೆಂಡೆನ್ಸ್’ ವಿರುದ್ಧ ನಿರೂಪಕರು ದೊಡ್ಡದಾಗಿ ಧ್ವನಿ ಎತ್ತಿದರು. ಭಗತ್ ಸಿಂಗ್ ಹಾಗೂ ಅವರ ಕಾಮ್ರೇಡ್‌ಗಳನ್ನು ಈ ಕೃತಿಯಲ್ಲಿ ಉಗ್ರರೆಂದು ಕರೆಯಲಾಗಿದೆ. ಇಂಥ ದೇಶಪ್ರೇಮಿಗಳನ್ನು ಉದ್ದೇಶಪೂರ್ವಕವಾಗಿ ಅವಮಾನಿಸಲು ಲೇಖಕರು ಮುಂದಾಗಿದ್ದಾರೆ ಎಂದು ನಿರೂಪಕರು ಆಪಾದಿಸಿದರು. ಬಿಜೆಪಿ ಸಂಸದ ಅನುರಾಗ್ ಠಾಕೂರ್ ಕೂಡಾ, ಹುತಾತ್ಮರನ್ನು ಈ ಕೃತಿಯಲ್ಲಿ ಅವಮಾನಿಸಲಾಗಿದೆ ಎಂದು ದೂಷಿಸಿದರೆ, ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವೆ ಸ್ಮತಿ ಇರಾನಿ, ಇಂಥ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗವನ್ನು ಶೈಕ್ಷಣಿಕವಾಗಿ ಹತ್ಯೆ ಮಾಡಲಾಗಿದೆ ಎಂದು ಕಿಡಿ ಕಾರಿದ್ದಾರೆ.

ಸುಮಾರು 28 ವರ್ಷಗಳ ಹಿಂದೆ ಬಿಡುಗಡೆಯಾದ ಈ ಕೃತಿ, ಅತ್ಯಂತ ಜನಪ್ರಿಯ ಹಾಗೂ ಈ ವಿಷಯದ ಶ್ರೇಷ್ಠ ಕೃತಿ ಎಂದು ಪರಿಗಣಿತವಾಗಿತ್ತು. ಈ ಕೃತಿಯಲ್ಲಿ ಎಲ್ಲ ಕ್ರಾಂತಿಕಾರರಾದ ಪ್ರುಲ್ಲಾ ಚಾಕಿ, ಕುದಿರಾಂ ಬೋಸ್, ಮದನ್‌ಲಾಲ್ ಂಗಾರಾ, ಸಚಿನ್ ಸನ್ಯಾಲ್, ಭಗತ್ ಸಿಂಗ್ ಹಾಗೂ ರಶ್‌ಬೆಹಾರಿ ಬೋಸ್ ಅವರನ್ನು ಕ್ರಾಂತಿಕಾರಿ ಉಗ್ರರು ಎಂದು ಬಣ್ಣಿಸಲಾಗಿದೆ. ಇತಿಹಾಸಕಾರರಾದ ಬಿಪಿನ್‌ಚಂದ್ರ ಹಾಗೂ ಅವರ ಸಹೋದ್ಯೋಗಿಗಳು, ಈ ಕ್ರಾಂತಿಕಾರಿ ಉಗ್ರರು ಎಂದು ಬಣ್ಣಿಸಲು ಕಾರಣವೆಂದರೆ, ಈ ಯುವ ಸ್ವಾತಂತ್ರ್ಯ ಹೋರಾಟಗಾರರ ಬಗೆಗಿನ ಸ್ವಯಂ ದೃಷ್ಟಿಕೋನ. ಗಾಂಧೀಜಿಯವರು ಈ ಕ್ರಾಂತಿಕಾರಿಗಳನ್ನು ಟೀಕಿಸಿದ್ದಕ್ಕೆ ಪ್ರತಿಕ್ರಿಯೆಯಾಗಿ, ಭಗವತಿ ಚರಣ್ ವೋರಾ, ‘‘ಹೀಗೆ ಭಯೋತ್ಪಾದನಾ ಚಟುವಟಿಕೆ ದೇಶದಲ್ಲಿ ಹುಟ್ಟಿಕೊಂಡಿತು. ಇದು ಅಗತ್ಯವಾಗಿದ್ದ ಹಂತ. ಇದು ಕ್ರಾಂತಿಯ ಅನಿವಾರ್ಯ ಘಟ್ಟ. ಉಗ್ರಗಾಮಿ ಚಟುವಟಿಕೆ ಸಂಪೂರ್ಣ ಕ್ರಾಂತಿಯಲ್ಲ; ಅಂತೆಯೇ ಉಗ್ರಗಾಮಿತ್ವ ಇಲ್ಲದೇ ಕ್ರಾಂತಿ ಪೂರ್ಣವಾಗಲಾರದು. ಇದು ಪ್ರತೀಕಾರದ ನಿರೀಕ್ಷೆಯನ್ನು ಹುಟ್ಟಿಸಿತು. ಜತೆಗೆ ತುಳಿತಕ್ಕೆ ಒಳಗಾದ ಸಮುದಾಯಕ್ಕೆ ಬಿಡುಗಡೆ ದೊರಕಿಸಿಕೊಟ್ಟಿತು.

ಇದು ಹಿಂಜರಿಯುತ್ತಿದ್ದ ವರ್ಗಕ್ಕೆ ಧೈರ್ಯ ಹಾಗೂ ಆತ್ಮವಿಶ್ವಾಸ ತುಂಬಿತು. ಆಡಳಿತ ವರ್ಗವೇ ಶ್ರೇಷ್ಠ ಎಂಬ ಭಾವನೆಯನ್ನು ಛಿದ್ರಗೊಳಿಸಿತು. ಜನರ ಸ್ಥಿತಿಗತಿಯನ್ನು ವಿಶ್ವದ ದೃಷ್ಟಿಯಲ್ಲಿ ಎತ್ತರಿಸಿತು. ಏಕೆಂದರೆ ಇದು ರಾಷ್ಟ್ರದ ಹಸಿವು ಮತ್ತು ಸ್ವಾತಂತ್ರ್ಯಕ್ಕೆ ಸಾಕ್ಷಿಯಾಗಿತ್ತು’’ (ಭಗವತಿ ಚರಣ್ ವೋರಾ ಅವರ ಫಿಲಾಸಫಿ ಆ್ ಬಾಂಬ್ ಕೃತಿಯಿಂದ).
ಇನ್ನೊಂದು ವಿಷಯವೆಂದರೆ, ಕಾಲಕ್ರಮೇಣ ಈ ಕ್ರಾಂತಿಕಾರಿಗಳ ಗುಂಪು, ತಮ್ಮ ಸಿದ್ಧಾಂತವನ್ನು ಬದಲಿಸಿಕೊಂಡಿತು. ರಾಮಪ್ರಸಾದ್ ಬಿಸ್‌ಮಿಲ್ ಅವರ ಸಲಹೆಯಂತೆ ಈ ಗುಂಪು, ಮುಕ್ತ ಚಳವಳಿಯಲ್ಲಿ ಭಾಗವಹಿಸುವ ಬದಲು ರಿವಾಲ್ವರ್ ಹಾಗೂ ಪಿಸ್ತೂಲನ್ನು ತ್ಯಜಿಸುವ ಆಶಯವನ್ನು ವ್ಯಕ್ತಪಡಿಸುವಲ್ಲಿ ಇದು ಪ್ರತಿಲನಗೊಂಡಿದೆ. ಬಹಳಷ್ಟು ಸಮಯ ಕಳೆದ ಬಳಿಕ ಭಗತ್ ಸಿಂಗ್ ಅವರ ಸ್ವಂತ ಅಭಿಪ್ರಾಯವೇ ಬದಲಾಯಿತು. 1929ರ ವೇಳೆಗೆ, ಮಾರ್ಕ್ಸ್ ವಾದ ಹಾಗೂ ವಿಸ್ತೃತ ಸಮೂಹ ಆಧರಿತ ಚಳವಳಿ ಕ್ರಾಂತಿಗೆ ಸೂಕ್ತ ಮಾರ್ಗವೇ ವಿನಃ ವೈಯಕ್ತಿಕ ಚಟುವಟಿಕೆಗಳಲ್ಲ ಎನ್ನುವುದು ಅವರಿಗೆ ಮನವರಿಕೆಯಾಗಿತ್ತು. 1931ರಲ್ಲಿ ಜೈಲಿನಲ್ಲಿ ಕಾಮ್ರೇಡ್‌ಗಳನ್ನು ಉದ್ದೇಶಿಸಿ ಮಾತನಾಡುವಾಗ, ಭಯೋತ್ಪಾದನೆಯನ್ನು ತಮ್ಮ ಕಾರ್ಯತಂತ್ರವಾಗಿ ಬಳಸಿಕೊಳ್ಳುವ ಕುರಿತ ಸೂಕ್ಷ್ಮ ವ್ಯತ್ಯಾಸವನ್ನು ವಿವರಿಸಿದರು.

ಭಗತ್ ಸಿಂಗ್ ಅವರನ್ನು ಉಗ್ರಗಾಮಿ ಎಂದು ಕರೆದಿರುವ ಈ ಕೃತಿಯನ್ನು ಟೀಕಿಸುವವರಿಗಿಂತ ಭಿನ್ನವಾಗಿ, ಕ್ರಾಂತಿಕಾರರೇ ಈ ಪದವನ್ನು ಬಳಸಿದ್ದಾರೆ. ಆದರೆ 2001ರ ವೇಳೆಗೆ ಉಗ್ರಗಾಮಿ ಎಂಬ ಪದವನ್ನು ಇಂದಿನ ಅರ್ಥದಲ್ಲಿ ಬಳಸುತ್ತಿರಲಿಲ್ಲ. ಇದೀಗ ಮುಖ್ಯವಾಗಿ ಉಗ್ರಗಾಮಿ ಪದ ಬಳಕೆಯಾಗುತ್ತಿರುವುದು ಜಾಗತಿಕ ತೈಲ ಸಂಪನ್ಮೂಲಗಳ ನಿಯಂತ್ರಣಕ್ಕೆ ನಡೆಯುತ್ತಿರುವ ಮೇಲಾಟದ ಹಿನ್ನೆಲೆಯಲ್ಲಿ.
‘ಇಂಡಿಯಾಸ್ ಸ್ಟ್ರಗಲ್ ಾರ್ ಇಂಡಿಪೆಂಡೆನ್ಸ್’ ಎಂಬ ಈ ಕೃತಿ 1988ರಲ್ಲಿ ಮೊದಲ ಮುದ್ರಣ ಕಂಡಿತ್ತು. ಮುಂದಿನ ದಶಕಗಳಲ್ಲಿ ಇತಿಹಾಸಕಾರ ಬಿಪಿನ್ ಚಂದ್ರ ಅವರು, ಭಗತ್ ಸಿಂಗ್ ಬಗ್ಗೆ ಹಲವು ಬರಹಗಳನ್ನು ಪ್ರಕಟಿಸಿದ್ದಾರೆ. ಆದರೆ ಆ ಬಳಿಕ ಎಲ್ಲೂ ಉಗ್ರಗಾಮಿ ಎಂಬ ಪದವನ್ನು ಭಗತ್ ಸಿಂಗ್ ಬಗ್ಗೆ ಬಳಸಿಲ್ಲ. ಭಗತ್‌ಸಿಂಗ್ ಕುರಿತ, ‘ವೈ ಐ ಆಮ್ ಆನ್ ಅಥೆಯಿಸ್ಟ್’ ಎಂಬ ಕರಪತ್ರದಲ್ಲಿ, ಚಂದ್ರ ಅವರನ್ನು ಕುರಿತು ಹೀಗೆ ಉಲ್ಲೇಖಿಸಿದ್ದಾರೆ, ‘‘ಭಗತ್‌ಸಿಂಗ್ ಅವರು ಭಾರತದ ಶ್ರೇಷ್ಠ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕ್ರಾಂತಿಕಾರಿ ಸಮಾಜವಾದಿ ಮಾತ್ರವಲ್ಲದೆ, ದೇಶದಲ್ಲಿ ಆರಂಭಿಕ ಮಾರ್ಕ್ಸ್‌ವಾದಿ ಚಿಂತಕರಲ್ಲಿ ಮತ್ತು ಸಿದ್ಧಾಂತಗಾರರಲ್ಲಿ ಒಬ್ಬರು’’
ಚಂದ್ರ ಅವರ ಸಹ ಲೇಖಕರು ಹೇಳುವಂತೆ, ಭಗತ್ ಸಿಂಗ್ ಅವರನ್ನು ಅತ್ಯಂತ ಗೌರವಯುತವಾಗಿ ಕಂಡಿದ್ದಾರೆ. ಹಲವು ಅಧ್ಯಾಯಗಳಲ್ಲಿ ಭಗತ್ ಸಿಂಗ್ ಅವರ ಜನಪ್ರಿಯತೆಯನ್ನು ವಿವರಿಸಿದ್ದಾರೆ. ಚಂದ್ರ ಅವರ ಪ್ರಕಾರ, ಭಗತ್ ಸಿಂಗ್ ದೇಶಾದ್ಯಂತ ಜನಪ್ರಿಯತೆ ಹೊಂದಿದ್ದರು. ‘‘ಭಗತ್ ಸಿಂಗ್ ಅವರನ್ನು ಗಲ್ಲಿಗೇರಿಸಿದ ಸುದ್ದಿ ತಿಳಿದ ಎಷ್ಟೋ ಮಂದಿ ಆಹಾರವನ್ನೇ ಸೇವಿಸಿರಲಿಲ್ಲ’’ ಎಂದು ಚಂದ್ರ ವಿವರಿಸಿದ್ದಾರೆ

ಬಹುಶಃ ಸ್ಮತಿ ಇರಾನಿ ಹಾಗೂ ಅವರ ತಂಡದವರು, ‘ಉಗ್ರಗಾಮಿ’ ಎಂಬ ಪದವನ್ನಷ್ಟೇ ಆಯ್ದುಕೊಂಡು ಅನಗತ್ಯ ದುರ್ಲಾಭ ಪಡೆಯಲು ಯತ್ನಿಸುತ್ತಿದ್ದಾರೆ. ಈ ಕೃತಿ ವಾಸ್ತವವಾಗಿ ಕೋಮುವಾದಿ ರಾಜಕೀಯದ ವಿರುದ್ಧ ಕಟು ಟೀಕೆ ಮಾಡಿದೆ. ಈ ಪುಸ್ತಕವನ್ನು ಓದಿದಾಗ ತಿಳಿದುಬರುವ ಅಂಶವೆಂದರೆ, ಹಿಂದೂ ಹಾಗೂ ಮುಸ್ಲಿಂ ಕೋಮುವಾದಿಗಳು ಸ್ವಾತಂತ್ರ್ಯ ಹೋರಾಟದಲ್ಲಿ ಯಾವ ಪಾತ್ರವನ್ನೂ ನಿರ್ವಹಿಸಿರಲಿಲ್ಲ ಅಥವಾ ಬ್ರಿಟಿಷ್ ವಿರೋ ರಾಷ್ಟ್ರೀಯವಾದಿ ಚಳವಳಿಯಲ್ಲಿ ಭಾಗವಹಿಸಿರಲಿಲ್ಲ. ಈ ಅಂಶವನ್ನು ಕೋಮುವಾದಿಗಳು ಮುಚ್ಚಿಟ್ಟು, ತಮ್ಮ ರಾಷ್ಟ್ರೀಯತೆಯನ್ನು ಪ್ರದರ್ಶಿಸಲು ಹೊರಟಿದ್ದಾರೆ. ಇದರಿಂದ ಭಗತ್ ಸಿಂಗ್ ಅವರನ್ನು ಉಗ್ರಗಾಮಿ ಎಂದು ಕರೆದ ಪದವನ್ನಷ್ಟೇ ದೊಡ್ಡ ವಿವಾದ ಮಾಡುತ್ತಿದ್ದಾರೆ.
ಆರೆಸ್ಸೆಸ್ ಪರಿವಾರದ ಇತರರು, ಈ ಕೃತಿ ನೆಹರೂ ಅವರ ಸುತ್ತ ಮತ್ತು ಎಡಪಕ್ಷಗಳ ಸುತ್ತವಷ್ಟೇ ಇದೆ ಎಂದು ನಂಬಿದ್ದಾರೆ. ಅವರು ಇದನ್ನು ತಪ್ಪಾಗಿ ಅರ್ಥ ಮಾಡಿಕೊಂಡಿದ್ದು, ಇದರಿಂದ ಪ್ರಭಾವಿತರಾಗಿದ್ದಾರೆ.

ಈ ಪುಸ್ತಕವನ್ನು ಸಮಗ್ರವಾಗಿ ಓದಿದರೆ, ಈ ಕೃತಿ ಗಮನ ಹರಿಸಿರುವುದು ಬ್ರಿಟಿಷ್ ಸಾಮ್ರಾಜ್ಯಶಾಹಿ ಆಡಳಿತದ ವಿರುದ್ಧದ ಹೋರಾಟದ ಬಗ್ಗೆ ಎನ್ನುವುದು ಸ್ಪಷ್ಟವಾಗಿ ತಿಳಿಯುತ್ತದೆ. ಜತೆಗೆ ಬ್ರಿಟಿಷ್ ವಿರುದ್ಧದ ಹೋರಾಟದ ಎಲ್ಲ ಆಯಾಮಗಳನ್ನು ಪರಿಚಯಿಸಿದೆ. ಗಾಂ ಹಾಗೂ ನೆಹರೂ ಇಬ್ಬರೂ ಚಳವಳಿಯಲ್ಲಿ ಅಹಿತಕರ ಪಾತ್ರ ವಹಿಸಿದ್ದರು; ಇಷ್ಟಾಗಿಯೂ ಇದರ ಆಳವಾಗಿ ಅವಲೋಕಿಸಿದರೆ, ಚಳವಳಿಯ ವಿಭಿನ್ನ ಮುಖಗಳು ಪರಿಚಯವಾಗುತ್ತವೆ. ಈ ಕೃತಿ ಭಗತ್‌ಸಿಂಗ್, ಸೂರ್ಯಸೇನ್ ಹಾಗೂ ಇತರ ಬ್ರಿಟಿಷ್ ವಿರೋ ಚಳವಳಿಯ ರಾಷ್ಟ್ರಪ್ರೇಮಿಗಳಿಗೆ ಸಂಪೂರ್ಣ ನ್ಯಾಯ ಒದಗಿಸಿದೆ. ಬೋಸ್, ಪಟೇಲ್, ಮೌಲಾನಾ ಆಝಾದ್, ಜಿನ್ನಾ, ಅಂಬೇಡ್ಕರ್ ಎಲ್ಲರನ್ನೂ ಸಮರ್ಪಕ ಸನ್ನಿವೇಶದಲ್ಲಿ ಬಿಂಬಿಸಿದೆ. ಸಮೂಹ ಕ್ರೋಢೀಕರಣದ ಆಳವಾದ ವ್ಯವಸ್ಥೆಯೇ ಚಳವಳಿಯ ಪ್ರಮುಖ ಹೆಜ್ಜೆಗಳು. ಇದರ ಸವಾಲು ಹಾಗೂ ಹುಟ್ಟಿ ಬೆಳೆದಿರುವ ಬಗೆಯನ್ನು ಅತ್ಯಂತ ವಸ್ತುನಿಷ್ಠವಾಗಿ ವಿವರಿಸಲಾಗಿದೆ.

ಚಂದ್ರ ಹಾಗೂ ಅವರ ಸಹ ಲೇಖಕರು ಸ್ವಾತಂತ್ರ್ಯ ಹೋರಾಟದ ಇತಿಹಾಸ ದಾಖಲಿಸುವಾಗ ಸಿದ್ಧಾಂತಗಳು ಹಾಗೂ ವಿದ್ಯಮಾನಗಳಿಗೆ ಒತ್ತು ನೀಡಿದ್ದಾರೆಯೇ ವಿನಃ ವ್ಯಕ್ತಿಗಳ ಬಗ್ಗೆ ಅಥವಾ ನೇತಾರರ ವೈಯಕ್ತಿಕ ಸಂಘರ್ಷಗಳ ಬಗ್ಗೆ ಗಮನ ಹರಿಸಿಲ್ಲ. ಈ ಕಾರಣದಿಂದ ಅಷ್ಟು ವಸ್ತುನಿಷ್ಠವಾಗಿ ದಾಖಲಿಸಲು ಸಾಧ್ಯವಾಗಿದೆ.
ಚಂದ್ರ ಹಾಗೂ ಸಹ ಲೇಖಕರು, ‘‘ಈ ಕೃತಿ ಎಲ್ಲ ರಾಜಕೀಯ ಪ್ರವೃತ್ತಿಗಳಿಗೆ ಸಮಾನ ಒತ್ತು ನೀಡಿದೆ. ಉದಾರವಾದಿಗಳಿಂದ ಹಿಡಿದು ಸಮಾಜವಾದಿ, ಕಮ್ಯುನಿಸ್ಟರವರೆಗೆ ಹಾಗೂ 1857ರ ಸ್ವಾತಂತ್ರ್ಯ ಸಂಗ್ರಾಮದಿಂದ ಹೊರಟು, ಘಾದರ್, ಐಎನ್‌ಎ, ಸ್ವದೇಶಿ, ಕ್ವಿಟ್ ಇಂಡಿಯಾವರೆಗೆ ಎಲ್ಲ ಹೋರಾಟಗಳಿಗೆ ಸಮಾನವಾಗಿ ಒತ್ತು ನೀಡಿದೆ. ರೈತರು ಹಾಗೂ ಕಾರ್ಮಿಕ ಹೋರಾಟದವರೆಗೆ, ಜಾತಿ ವಿರೋ ಚಳವಳಿಯವರೆಗೆ ಎಲ್ಲ ಜನಚಳವಳಿಗಳನ್ನು ಗಂಭೀರವಾಗಿ ಪರಿಗಣಿಸಿದೆ. ದಾದಾಬಾಯಿ ನವರೋಜಿಯವರಿಂದ ಹಿಡಿದು ಬಿಸ್ರಾ ಮುಂಡ, ಲೋಕಮಾನ್ಯ ತಿಲಕ್, ಗಾಂಧೀಜಿ, ಸರ್ದಾರ್ ಪಟೇಲ್ ಹಾಗೂ ಜಯಪ್ರಕಾಶ್ ನಾರಾಯಣ್ ಮತ್ತು ಅರುಣ ಅಸ್ಿ ಅಲಿ ಅವರಿಗೆ ಸಮಾನ ಒತ್ತು ನೀಡಿದೆ.’’
ಇತ್ತೀಚಿನ ದಿನಗಳಲ್ಲಿ ಉಗ್ರಗಾಮಿ ಎನ್ನುವುದಕ್ಕೆ ಸಂಪೂರ್ಣ ಭಿನ್ನ ಅರ್ಥವಿದ್ದು, ಬಿಪಿನ್‌ಚಂದ್ರ ಅವರು ಈಗ ಇಲ್ಲದಿರುವುದರಿಂದ ಹಾಲಿ ಇರುವ ಇತರ ಲೇಖಕರು, ಬೇರೆ ಇತಿಹಾಸಕಾರರ ಜತೆಗೆ ಚರ್ಚಿಸಿ ಖಂಡಿತವಾಗಿಯೂ ಸಂಪೂರ್ಣ ಭಿನ್ನವಾದ ದಂಗೆಕೋರ, ಕ್ರಾಂತಿಕಾರಿಗಳು ಎಂಬಂಥ ಅಥವಾ ಇಂಥದ್ದೇ ಬೇರೆ ಶಬ್ದಗಳನ್ನು ಹೊಸದಾಗಿ ಈ ಕ್ರಾಂತಿಕಾರಿಗಳಿಗೆ ಬಳಸಬಹುದು. ಬಿಜೆಪಿ ತನ್ನ ರಾಜಕೀಯ ಕಾರ್ಯಸೂಚಿಗೆ ಅನುವಾಗುವಂತೆ ಇತಿಹಾಸದ ಜತೆ ಆಟವಾಡುತ್ತಿದೆ. ಈ ಅನಗತ್ಯ ವಿವಾದದ ಮೂಲಕ, ಅಮೂಲ್ಯ ಪಠ್ಯಪುಸ್ತಕವನ್ನು ದೂರ ಮಾಡಲು ಅದಕ್ಕೆ ಮತ್ತೊಂದು ಅವಕಾಶ ಸಿಕ್ಕಿದಂತಾಗಿದೆ. ಸ್ವಾತಂತ್ರ್ಯದ ಹೋರಾಟದಲ್ಲಿ ಹಿಂದುತ್ವ ಸಿದ್ಧಾಂತರ ಪಾತ್ರ ನಗಣ್ಯ ಎನ್ನುವುದನ್ನು ಬಿಂಬಿಸುವ ಈ ಕೃತಿಯನ್ನು ತೆರೆಗೆ ಸರಿಸಲು ಹುನ್ನಾರ ನಡೆಸಿದೆ.

Writer - ರಾಂ ಪುನಿಯಾಣಿ

contributor

Editor - ರಾಂ ಪುನಿಯಾಣಿ

contributor

Similar News