ಸ್ಟ್ರೈಕ್ ರೇಟ್ 33.33: ಕೊಹ್ಲಿ ವಿರುದ್ಧ ಪಾಕ್ ಸ್ಟಾರ್ ಲೇವಡಿ

Update: 2024-04-12 06:16 GMT

Photo: sports.ndtv.com

ಬೆಂಗಳೂರು: ಕೇಂದ್ರ ಸರಕಾರದ ಅಲ್ಪಸಂಖ್ಯಾತರ ವ್ಯವಹಾರಗಳ ಇಲಾಖೆಯ ವಿಳಂಬ ಧೋರಣೆಯಿಂದಾಗಿ ಕರ್ನಾಟಕ ಸೇರಿದಂತೆ ದೇಶದ ಇತರ ರಾಜ್ಯಗಳಿಂದ ಖಾಸಗಿ ಟೂರ್ ಆಪರೇಟರ್‌ಗಳ ಮೂಲಕ ಪ್ರಸಕ್ತ ಸಾಲಿನ ಪವಿತ್ರ ಹಜ್ ಯಾತ್ರೆ ಕೈಗೊಳ್ಳಲು ಮುಂದಾಗಿರುವ ಯಾತ್ರಿಗಳಿಗೆ ವಿಐಪಿ ಸೌಲಭ್ಯ ಕಲ್ಪಿಸುವುದು ಖಾಸಗಿ ಟೂರ್ ಆಪರೇಟರ್‌ಗಳಿಗೆ ಸವಾಲಾಗಿ ಪರಿಣಮಿಸಿದೆ.

ಮಕ್ಕಾ ನಗರದ ಮೀನಾ ಬಳಿ ಖಾಸಗಿ ಟೂರ್ ಆಪರೇಟರ್‌ಗಳಿಗೆ ಅವರ ಅನುಕೂಲಕ್ಕೆ ತಕ್ಕಂತೆ ಸೌದಿ ಅರೇಬಿಯಾ ಸರಕಾರವು ಟೆಂಟ್‌ಗಳನ್ನು ಕಲ್ಪಿಸುತ್ತದೆ. ಇದು ಹಜ್ ಸಂದರ್ಭದಲ್ಲಿ ಸಾಮಾನ್ಯವಾಗಿ ನಡೆಯುವಂತಹ ಪ್ರಕ್ರಿಯೆ. ಇದಕ್ಕಾಗಿ ಅಂತರ್‌ರಾಷ್ಟ್ರೀಯ ಬ್ಯಾಂಕ್ ಖಾತೆ ಸಂಖ್ಯೆ(ಐಬಾನ್)

ಯಲ್ಲಿ ಟೂರ್ ಆಪರೇಟರ್‌ಗಳು ಹಣವನ್ನು ವರ್ಗಾವಣೆ ಮಾಡಿ, ಅದರ ಮೂಲಕವೇ ಟೆಂಟ್, ಸಾರಿಗೆ ಸೇರಿದಂತೆ ಇತರ ವೆಚ್ಚಗಳನ್ನು ಭರಿಸುತ್ತಿದ್ದರು.

ಆದರೆ, ಈ ಬಾರಿ ಸೌದಿ ಅರೇಬಿಯಾ ಸರಕಾರವು ಹೊಸ ಕಾನೂನು ಮಾಡಿ, ಎಲ್ಲ ದೇಶಗಳ ಖಾಸಗಿ ಟೂರ್ ಆಪರೇಟರ್‌ಗಳು ಹಣವನ್ನು ಐಬಾನ್ ಖಾತೆಗೆ ಜಮೆ ಮಾಡದೆ, ಮಕ್ಕಾದಲ್ಲಿರುವ ತಮ್ಮ ತಮ್ಮ ದೇಶದ ಹಜ್ ಸಂಬಂಧಿತ ಸರಕಾರಿ ಮಿಷನ್‌ಗಳ ಖಾತೆಗೆ ಹಣ ಜಮೆ ಮಾಡಬೇಕು. ಅದೇ ರೀತಿ ಭಾರತದ ಖಾಸಗಿ ಟೂರ್ ಆಪರೇಟರ್‌ಗಳು ಇಂಡಿಯನ್ ಹಜ್ ಮಿಷನ್ ಖಾತೆಗೆ ಹಣ ಜಮೆ ಮಾಡುವಂತೆ ಸೂಚಿಸಿದೆ.

ಇಂಡಿಯನ್ ಹಜ್ ಮಿಷನ್‌ನವರು ಹಣ ಜಮೆ ಮಾಡಿಸಿಕೊಂಡು ಖಾಸಗಿ ಟೂರ್ ಆಪರೇಟರ್‌ಗಳಿಗೆ ಖಾತೆ ಸಂಖ್ಯೆಯನ್ನು ನೀಡಲಿದ್ದಾರೆ. ಅದನ್ನು ಬಳಸಿಕೊಂಡೆ ಅವರು ಎಲ್ಲ ವ್ಯವಹಾರಗಳನ್ನು ಮಾಡಬೇಕಿದೆ. ದಕ್ಷಿಣ ಏಷ್ಯಾ ರಾಷ್ಟ್ರಗಳಾದ ಯುಎಇ, ಪಾಕಿಸ್ತಾನ, ಬಾಂಗ್ಲಾದೇಶ, ಶ್ರೀಲಂಕಾ ಸೇರಿದಂತೆ ಇತರ ದೇಶಗಳ ಹಜ್ ಸಚಿವಾಲಯಗಳು ಅಲ್ಲಿನ ಖಾಸಗಿ ಟೂರ್ ಆಪರೇಟರ್‌ಗಳಿಗೆ ಅಗತ್ಯ ಸೌಲಭ್ಯ ಗಳನ್ನು ಕಲ್ಪಿಸಿ, ಅವರ ಹಣ ವನ್ನು ಜಮೆ ಮಾಡಿಸಿಕೊಂಡು, ಖಾತೆ ಸಂಖ್ಯೆಗಳನ್ನು ನೀಡಿವೆ.

ಇದರಿಂದಾಗಿ, ಆ ದೇಶಗಳು ಭಾರತದ ಖಾಸಗಿ ಟೂರ್ ಆಪರೇಟರ್‌ಗಳು ಈ ಹಿಂದೆ ವಿಐಪಿ ಟೆಂಟ್‌ಗಳ ಅಳವಡಿಕೆಗೆ ಪಡೆದುಕೊಳ್ಳುತ್ತಿದ್ದ ಜಾಗಗಳನ್ನು ಪಡೆದುಕೊಂಡು ಅವರ ದೇಶದ ಯಾತ್ರಿಗಳಿಗೆ ಸೌಲಭ್ಯಗಳನ್ನು ಕಲ್ಪಿಸಲು ಸಿದ್ಧತೆಗಳನ್ನು ಆರಂಭಿಸಿವೆ. ಆದರೆ, ಕೇಂದ್ರ ಸರಕಾರದ ಅಲ್ಪಸಂಖ್ಯಾತರ ವ್ಯವಹಾರಗಳ ಸಚಿವಾಲಯದಿಂದ ಈವರೆಗೆ ಖಾಸಗಿ ಟೂರ್ ಆಪರೇಟರ್‌ಗಳು ಹಣ ಜಮೆ ಮಾಡಲು ಅವಕಾಶ ಕೊಟ್ಟಿಲ್ಲ.

ಕೆಲವು ಖಾಸಗಿ ಟೂರ್ ಆಪರೇಟರ್‌ಗಳು ಹಳೆಯ ಐಬಾನ್ ಖಾತೆಗೆ ಹಣ ಕಳುಹಿಸಿದ್ದಾರೆ. ಆದರೆ ಹಣ ಖಾತೆಗೂ ಹೋಗದೆ ಇವರಿಗೂ ವಾಪಸ್ ಬರದೆ ಸಿಕ್ಕಿಹಾಕಿಕೊಂಡಿದೆ. ಯಾತ್ರಿಗಳಿಗೆ ಮಾತು ಕೊಟ್ಟಿರುವಂತೆ ಮೀನಾದಲ್ಲಿ ವಿಐಪಿ ಟೆಂಟ್‌ಗಳನ್ನು ಕಲ್ಪಿಸಿಕೊಡಲು ಸಾಧ್ಯವಾಗದೇ ಇದ್ದರೆ ಖಾಸಗಿ ಟೂರ್ ಆಪರೇಟರ್‌ಗಳು ತುಂಬಾ ಸಮಸ್ಯೆ ಎದುರಿಸಬೇಕಾಗುತ್ತದೆ. ಕೇಂದ್ರ ಸರಕಾರದ ವಿಳಂಬದಿಂದಾಗಿ ದೇಶದ ಪ್ರತಿಷ್ಠಿತ ಟೂರ್ ಆಪರೇಟರ್‌ಗಳು ಸಹ ಯಾತ್ರಿಗಳಿಂದ ಅಪಮಾನ ಎದುರಿಸಬೇಕಾಗಬಹುದು. ಅಲ್ಲದೆ , ಕಳೆದ ವರ್ಷವೂ ಕೇಂದ್ರ ಸರಕಾರದ ವಿಳಂಬ ನೀತಿಯಿಂದಾಗಿ ಹಜ್ ಆಪರೇಟರ್‌ಗಳು ಹಜ್ ಯಾತ್ರಿಕರು ಸಮಸ್ಯೆಗಳನ್ನು ಎದುರಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ಅಮ್ಜದ್ ಖಾನ್ ಎಂ.

contributor

Similar News