ಮೋದಿಯನ್ನು ಟೀಕಿಸಿ ಅಷ್ಟೇ ವೇಗವಾಗಿ ಟ್ವೀಟ್ ಡಿಲೀಟ್ ಮಾಡಿದ ಝೀ ನ್ಯೂಸ್ ಸಂಪಾದಕ!
ಮುಂಬೈ: ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರದ ಕಡೆ ವಾಲಿದ ಕಾರಣಕ್ಕಾಗಿ ಝೀ ನ್ಯೂಸ್ ಚಾನಲ್ ಧೋರಣೆಯನ್ನು ಪ್ರೇಕ್ಷಕರು, ಅದರಲ್ಲೂ ಮುಖ್ಯವಾಗಿ ಉದಾರವಾದಿಗಳು ಹಾಗೂ ಜಾತ್ಯತೀತವಾದಿಗಳು ಕಟುವಾಗಿ ಟೀಕಿಸಿದ ಘಟನೆ ನಡೆದಿದೆ. ಜೆಎನ್‌ಯು ವಿವಾದದಲ್ಲಿ ವೀಡಿಯೊ ತಿದ್ದಿ ಪ್ರಸಾರ ಮಾಡಿದ ಕೃತ್ಯಕ್ಕೆ ಟೀಕಾಪ್ರಹಾರ ಎದುರಿಸಿದ್ದ ಚಾನಲ್‌ಗೆ ಇದೀಗ ಮತ್ತೊಮ್ಮೆ ಮುಖಭಂಗವಾಗಿದೆ.
ಈ ಟೀಕೆಯಿಂದ ಅವಮಾನಿತರಾದ ಚಾನಲ್, ಟೀಕಾಕಾರರನ್ನು ಅಫ್ಜಲ್ ಪ್ರೇಮಿ ಗ್ಯಾಂಗ್ ಎಂದು ಲೇವಡಿ ಮಾಡಿತ್ತು. ಹಲವು ಸಂದರ್ಭಗಳಲ್ಲಿ ಚಾನಲ್ ದೇಶಪ್ರೇಮಿ ಎಂದು ಬಿಂಬಿಸಿಕೊಳ್ಳುವ ಕಸರತ್ತು ಮಾಡುತ್ತಲೇ ಬಂದಿದೆ.
ಗುರುವಾರ ಮತ್ತೆ ಈ ಚಾನಲ್‌ನ ವಿವಾದಾಸ್ಪದ ಸಂಪಾದಕ ಸುಧೀರ್ ಚೌಧರಿ ಮೋದಿಯನ್ನು ಟೀಕಿಸಿ ಮತ್ತೆ ಇಕ್ಕಟ್ಟಿಗೆ ಸಿಕ್ಕಿಹಾಕಿಕೊಂಡರು. ಎರಡು ವರ್ಷ ಪೂರ್ಣಗೊಳಿಸಿದ ಸಂದರ್ಭದಲ್ಲಿ ಮೋದಿ ವಿದೇಶಿ ಪತ್ರಿಕೆಯೊಂದಕ್ಕೆ ಸಂದರ್ಶನ ನೀಡಿದ್ದಾರೆ. ಇದು ರಾಷ್ಟ್ರೀಯವಾದಿ ಸರಕಾರದ ಫಿರಂಗಿ ಕಾರ್ಯಶೈಲಿ ಎಂದು ವಾಲ್‌ಸ್ಟ್ರೀಟ್ ಜರ್ನಲ್‌ಗೆ ಸಂದರ್ಶನ ನೀಡಿದ ಪ್ರಧಾನಿ ಕ್ರಮವನ್ನು ಟೀಕಿಸಿ ಟ್ವೀಟ್ ಮಾಡಿದ್ದರು. ಬಲಪಂಥೀಯ ಪಕ್ಷದ ಅತ್ಯುನ್ನತ ನಾಯಕನನ್ನು ಟೀಕಿಸುವುದರಿಂದ ಯಾವ ಪರಿಣಾಮ ಬೀರಬಹುದು ಎಂದು ತಕ್ಷಣ ಅಂದಾಜಿಸಿ, ಟ್ವೀಟ್ ಡಿಲೀಟ್ ಮಾಡಿದರು. ಅವರ ಈ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಬಹುಶಃ ಟಿವಿ ನಿರೂಪಕ ತಮ್ಮ ಚಾನಲ್ ಸಂಪಾದಕರಿಗೆ ಮುಂದಿನ ಪರಿಣಾಮದ ಬಗ್ಗೆ ಎಚ್ಚರಿಸಿದ್ದರಿಂದ ಟ್ವೀಟ್ ಡಿಲೀಟ್ ಮಾಡಿರಬೇಕು ಎಂಬ ಅಭಿಪ್ರಾಯಗಳು ಜಾಲತಾಣದಲ್ಲಿ ಹರಿದಾಡುತ್ತಿವೆ.