×
Ad

ಗಿನ್ನಿಸ್‌ರಿಶಿ: ದಾಖಲೆಯ ಗೀಳು, 26 ವರ್ಷಗಳಲ್ಲಿ 20 ಗಿನ್ನಿಸ್ ದಾಖಲೆಗಳು

Update: 2016-05-28 14:03 IST

74 ವರ್ಷದ ಹರ್ ಪ್ರಕಾಶ್ ರಿಶಿ ತಮ್ಮ ದೇಹದ ಮೇಲೆ ವಿಭಿನ್ನ ದೇಶಗಳ ಧ್ವಜಗಳ ಹಚ್ಚೆ ಹಾಕಿಸಿಕೊಂಡಿದ್ದಾರೆ. ಅವರ ಈ ಹುಚ್ಚು ಈಗ ಗಿನ್ನಿಸ್ ದಾಖಲೆಗೆ ಕಾರಣವಾಗಿದೆ. ಅವರು 496 ಸ್ಟ್ರಾಗಳನ್ನು ತೂರಿಸಲು ತಮ್ಮೆಲ್ಲ ಹಲ್ಲುಗಳನ್ನು ತೆಗೆಸಿದ್ದಾರೆ!

366 ಧ್ವಜಗಳನ್ನು ಮೈಮೇಲೆ ಹಚ್ಚೆ ಹಾಕಿಸಿಕೊಂಡು ಗಿನ್ನಿಸ್ ದಾಖಲೆ ಬರೆಯುವ ಹುಚ್ಚಿನಲ್ಲಿ ಮತ್ತು ತಮ್ಮ ಬಾಯಿಯಲ್ಲಿ 500 ಪಾನೀಯ ಸೇವಿಸುವ ಸ್ಟ್ರಾಗಳನ್ನು ಮತ್ತು 50 ಉರಿಯುವ ಮೇಣದ ಬತ್ತಿ ಇಟ್ಟುಕೊಳ್ಳಲು ತಮ್ಮ ಹಲ್ಲುಗಳನ್ನೆಲ್ಲ ಕಿತ್ತಿದ್ದಾರೆ.

 ಹರ್ ಪ್ರಕಾಶ್ ರಿಶಿ 20ಕ್ಕೂ ಹೆಚ್ಚು ದಾಖಲೆ ಬರೆದು ಗಿನ್ನಿಸ್ ರಿಶಿ ಎಂದು ಕರೆಸಿಕೊಂಡಿದ್ದಾರೆ. ಅವರ ಮೊದಲ ದಾಖಲೆ ಬಂದದ್ದು 1990ರಲ್ಲಿ. 1942ರಲ್ಲಿ ದೆಹಲಿಯ ಸಿನಿಮಾ ಹಾಲಲ್ಲಿ ಜನಿಸಿದ ರಿಶಿ 1990ರಲ್ಲಿ ಇಬ್ಬರು ಸ್ನೇಹಿತರ ಜೊತೆಗೂಡಿ 1,001 ಗಂಟೆಗಳ ಕಾಲ ಸ್ಕೂಟರ್ ಓಡಿಸಿ ಮೊದಲ ದಾಖಲೆ ಬರೆದಿದ್ದರು. ಗಿನ್ನಿಸ್ ದಾಖಲೆ ಪುಸ್ತಕದಲ್ಲಿ ಹೆಸರು ಬರೆಸುವ ಹುಚ್ಚು ಅವರು ಕೆಲವು ವಿಚಿತ್ರ ನಡವಳಿಕೆ ಪ್ರದರ್ಶಿಸಲೂ ಕಾರಣವಾಯಿತು. ಅದರಲ್ಲಿ ನವದೆಹಲಿಯಿಂದ ಸ್ಯಾನ್ ಫ್ರಾನ್ಸಿಸ್ಕೋಗೆ ಪಿಜ್ಜಾ ಡೆಲಿವರಿ ಮಾಡಿದ್ದು ಮತ್ತು ಟೊಮ್ಯಾಟೋ ಕೆಚಪ್ ಬಾಟಲಿಯನ್ನು ನಾಲ್ಕೇ ನಿಮಿಷದಲ್ಲಿ ನುಂಗಿದ್ದು ಇದರಲ್ಲಿ ಸೇರಿದೆ. ತಮ್ಮ ಕುಟುಂಬವನ್ನೂ ಅವರು ಬಿಡಲಿಲ್ಲ. ಅವರ ಪತ್ನಿ ಬಿಮ್ಲಾ 1991ರ ದಾಖಲೆ ಹೊಂದಿದ್ದಾರೆ. ಜಗತ್ತಿನ ಅತೀ ಸಣ್ಣ ಉಯಿಲು ಅವರು ಬರೆದಿದ್ದಾರೆ. ಎಲ್ಲವೂ ಮಗನಿಗೆಎನ್ನುವ ಉಯಿಲು.

ಆದರೆ ದೇಹದಲ್ಲಿ 500 ದೇಶಗಳ ಧ್ವಜದ ಹಚ್ಚೆ ಹಾಕಿಸಿದ್ದು ಅವರನ್ನು ಜನಪ್ರಿಯಗೊಳಿಸಿತು. ರಿಶಿ ಪ್ರಕಾರ ಬಾಯಿಗೆ ಸ್ಟ್ರಾ ಸಿಕ್ಕಿಸುವುದು ಅತೀ ಕಷ್ಟದ ದಾಖಲೆಯಾಗಿತ್ತು. 496 ಸ್ಟ್ರಾಗಳನ್ನು ಬಾಯಿಯಲ್ಲಿ ಇಟ್ಟು ವಿಶ್ವ ದಾಖಲೆ ಮಾಡಬೇಕಾಗಿತ್ತು. ಅದಕ್ಕೆ ಬಾಯಿಯಲ್ಲಿ ಜಾಗ ಬೇಕಿತ್ತು. ಅದಕ್ಕಾಗಿ ಹಲ್ಲುಗಳನ್ನು ಕಿತ್ತೆ. ಹಾಗೆ ಗರಿಷ್ಠ ಸ್ಟ್ರಾಗಳನ್ನು ಬಾಯಿಯಲ್ಲಿ ಇಟ್ಟುಕೊಳ್ಳಬಲ್ಲವನಾದೆ ಎನ್ನುತ್ತಾರೆ ರಿಶಿ.

ಈಗ ರಿಶಿ ಜಾಗತಿಕ ನಾಯಕರ ಚಿತ್ರಗಳನ್ನು ದೇಹಕ್ಕೆ ಹಚ್ಚಿಕೊಳ್ಳುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ, ಬ್ರಿಟನ್ ರಾಣಿ ಎಲಿಜಬೆತ್ ಮತ್ತು ಮಹಾತ್ಮಾ ಗಾಂಧಿ ಇವರಲ್ಲಿ ಸೇರಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News