×
Ad

ಬ್ರಿಟನ್: 800ಕ್ಕೂ ಅಧಿಕ ಶಂಕಿತ ಉಗ್ರರ ಡಿಎನ್‌ಎ ಪುರಾವೆಗಳು ನಾಶ

Update: 2016-05-28 23:44 IST

ಲಂಡನ್, ಮೇ 28: ಬ್ರಿಟನ್‌ನ ಗುಪ್ತಚರ ಹಾಗೂ ಪೊಲೀಸ್ ಇಲಾಖೆಗಳ ತಪ್ಪಿನಿಂದಾಗಿ, 800ಕ್ಕೂ ಅಧಿಕ ಶಂಕಿತ ಭಯೋತ್ಪಾದಕರ ಡಿಎನ್‌ಎ ವಿವರಗಳಿರುವ ದಾಖಲೆಗಳು ನಾಶಗೊಂಡಿದ್ದು, ಈ ಬಗ್ಗೆ ಶನಿವಾರ ತನಿಖೆಗೆ ಆದೇಶಿಸಲಾಗಿದೆ. ಡಿಎನ್‌ಎ ಮಾದರಿಗಳನ್ನು ತಮಗೆ ವರ್ಗಾಯಿಸುವಲ್ಲಿ ಬ್ರಿಟನ್ ಪೊಲೀಸರು ಪದೇ ಪದೇ ವಿಳಂಬ ಮಾಡುತ್ತಿರುವುದೇ ಈ ಸಾಕ್ಷಾಧಾರಗಳ ನಾಶಕ್ಕೆ ಕಾರಣವಾಗಿದೆಯೆಂದು ಬ್ರಿಟನ್‌ನ ಬಯೋಮೆಟ್ರಿಕ್ಸ್ ಇಲಾಖೆಯ ಆಯುಕ್ತ ಮ್ಯಾಕ್‌ಗ್ರೆಗೊರ್ ಆಪಾದಿಸಿದ್ದಾರೆ.

ಕ್ರಿಮಿನಲ್ ಕೃತ್ಯಗಳ ಜೊತೆ ಶಂಕಿತ ಉಗ್ರರ ನಂಟಿರುವುದಕ್ಕೆ ಪುರಾವೆ ನೀಡುವ ಡಿಎನ್‌ಎ ವಿವರಗಳು ನಾಶಗೊಂಡಿವೆ. ಅವುಗಳಲ್ಲಿ ಅನೇಕ ಪ್ರಕರಣಗಳು ಭಯೋತ್ಪಾದನೆಗೆ ಸಂಬಂಧಿಸಿದ್ದಾಗಿವೆಯೆಂದು ಬ್ರಿಟನ್‌ನ ಹಿರಿಯ ಸಂಸದ ಕೀತ್ ವಾಝ್ ಆತಂಕ ವ್ಯಕ್ತಪಡಿಸಿದ್ದಾರೆ. ನಾಶಗೊಂಡ ಡಿಎನ್‌ಎ ಪುರಾವೆಗಳ ಪೈಕಿ 108 ಮಂದಿ ತುಂಬಾ ಅಪಾಯಕಾರಿ ಉಗ್ರರದ್ದಾಗಿವೆಯೆಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News