ಪುರುಷರು ಮೊಡವೆಗಳಿಂದ ಮುಕ್ತಿ ಪಡೆಯುವುದು ಹೇಗೆ?

Update: 2016-05-30 07:17 GMT

ಮೊಡವೆಗಳು ಹದಿಹರೆಯದವರಿಗೆ ಮತ್ತು ಮಹಿಳೆಯರಿಗೆ ಬಹಳ ದೊಡ್ಡ ಸಮಸ್ಯೆ. ಆದರೆ ಮೊಡವೆಗಳು ಆಧುನಿಕ ನಗರದ ಪುರುಷರನ್ನೂ ಕಾಡುತ್ತವೆ. ಸಾಕಷ್ಟು ನೀರು ಕುಡಿಯಬೇಕು ಮತ್ತು ಮೊಡವೆಗಳನ್ನು ಆಗಾಗ್ಗೆ ಜಿಗುಟುವ ಅಭ್ಯಾಸವನ್ನು ಬಿಡಬೇಕು ಎನ್ನುತ್ತಾರೆ ತಜ್ಞರು. ಹಿಮಾಲಯ ಔಷಧಿ ಸಂಸ್ಥೆಯ ಚರ್ಮ ತಜ್ಞೆ ಚಂದ್ರಿಕಾ ಮಹೀಂದ್ರ ಈ ಕೆಳಗಿನ ಸಲಹೆಗಳನ್ನು ನೀಡುತ್ತಾರೆ.

► ನಿಮ್ಮ ಮುಖವನ್ನು ಎರಡು ಮೂರು ಬಾರಿ ತೊಳೆಯಿರಿ. ಇದು ಧೂಳಿನ ಕಣಗಳನ್ನು ತೆಗೆಯಲು ನೆರವಾಗುತ್ತದೆ. ಆದರೆ ಅತಿಯಾಗಿ ತೊಳೆಯುವುದು ಬೇಡ. ಪುರುಷರ ಫೇಸ್ವಾಷ್ ಬಳಸಿ ನಿತ್ಯವೂ ಮುಖ ತೊಳೆಯಿರಿ. ಪ್ರಾಕೃತಿಕ ಅಂಶಗಳಿರುವ ಉತ್ಪನ್ನಗಳು ಉತ್ತಮ ಮತ್ತು ಪರಿಣಾಮಕಾರಿ.

► ನಿಮ್ಮ ಚರ್ಮವನ್ನು ಮೊಡವೆ ರಹಿತವನ್ನಾಗಿಸಲು ಸುಲಭವಾದ ದಾರಿ ಎಂದರೆ ದೇಹದಲ್ಲಿ ನೀರಿನಂಶ ಇರುವಂತೆ ನೋಡಿಕೊಳ್ಳುವುದು. ಇದು ಅಂಗಾಂಶಗಳನ್ನು ಸ್ವಚ್ಛ ಮಾಡುವುದು ಮತ್ತು ಚರ್ಮ ಸ್ವಚ್ಛ ಮಾಡಲು ನೆರವಾಗುತ್ತದೆ.

►ಮೊಡವೆಯನ್ನು ಎಂದೂ ಜಿಗುಟಬೇಡಿ ಅಥವಾ ಸ್ಪರ್ಶಿಸಲೇಬೇಡಿ. ಅದು ಧೀರ್ಘ ಸಮಯ ಉಳಿಯುವ ಗಾಯಗಳಿಗೆ ಕಾರಣವಾಗುತ್ತದೆ.

► ನೀವು ನಿತ್ಯವೂ ಶೇವ್ ಮಾಡಿಕೊಳ್ಳುತ್ತಿದ್ದಲ್ಲಿ ಉತ್ತಮ ಗುಣಮಟ್ಟದ ಇಲೆಕ್ಟ್ರಿಕ್ ಶೇವರ್ ಅಥವಾ ರೇಜರ್ ಬಳಸುವುದನ್ನು ಖಚಿತಪಡಿಸಿ. ಹದ ಬಿಸಿಯಿರುವ ಸೋಪ್ ನೀರಿನಲ್ಲಿ ಗಡ್ಡವನ್ನು ತೊಳೆದ ಮೇಲೆ ಶೇವಿಂಗ್ ಕ್ರೀಮ್ ಬಳಸಿ.

ಕೃಪೆ:indianexpress.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News