×
Ad

ಕುವೈಟ್: ಊರಿಗೆ ಕಳುಹಿಸುವ ಹಣಕ್ಕೆ ತೆರಿಗೆ,ಪಾರ್ಲಿಮೆಂಟ್ ಸಮಿತಿಯ ಪರಿಗಣನೆಯಲ್ಲಿ

Update: 2016-06-01 09:56 IST

  ಕುವೈಟ್ ಸಿಟಿ, ಜೂನ್ 1: ದೇಶದಲ್ಲಿ ಕೆಲಸ ಮಾಡುತ್ತಿರುವ ವಿದೇಶಿಗಳು ಊರಿಗೆ ಕಳುಹಿಸುವ ಹಣಕ್ಕೆ ತೆರಿಗೆ ವಿಧಿಸುವ ಸಲಹೆಯನ್ನು ಪಾರ್ಲಿಮೆಂಟ್ ಕಾನೂನು ವಿಷಯಗಳ ಸಮಿತಿ ಪರಿಶೀಲಿಸುತ್ತಿದೆ. ಇದಕ್ಕೆ ಸಂಬಂಧಿಸಿ ಪಾರ್ಲಿಮೆಂಟ್‌ನಲ್ಲಿ ಮಂಡಿಸಲಾದ ಕರಡುನಿರ್ದೇಶನಗಳನ್ನು ಅದು ಸರಕಾರದ ಬೆಂಬಲದೊಂದಿಗೆ ಈಗ ಸಕ್ರಿಯವಾಗಿ ಪರಿಶೀಲನೆ ನಡೆಸುತ್ತಿದೆ ಎಂದು ಸಂಬಂಧಿಸಿದ ಮೂಲಗಳು ತಿಳಿಸಿವೆ.

ಇತ್ತೀಚೆಗೆ ಸಂಸತ್ಸದಸ್ಯ ಫೈಸಲ್ ಮುಹಮ್ಮದ್ ಅಲ್‌ಕಂದರಿ ಪಾರ್ಲಿಮೆಂಟ್‌ನಲ್ಲಿ ಮಂಡಿಸಿದ್ದ ಕರಡು ನಿರ್ದೇಶನವನ್ನು ಕಾನೂನು ವಿಷಯಗಳ ಸಮಿತಿಈಗ ಪರಿಶೀಲಿಸುತ್ತಿದೆ. ನೂರು ದೀನಾರ್‌ಗಿಂತ ಕಡಿಮೆ ಹಣವನ್ನು ಊರಿಗೆ ಕಳುಹಿಸುವವರಿಗೆ ಶೇ. 2,ರಷ್ಟು ತೆರಿಗೆ ಹಾಗೂ 100 ದೀನಾರ್ ಮತ್ತು ಐನೂರು ದೀನಾರ್ ವರೆಗೆ ಕಳುಹಿಸುವವರಿಗೆ ಶೇ.4ರಷ್ಟು ತೆರಿಗೆ ಹಾಗೂ ಐನೂರು ದೀನಾರ್‌ಗಿಂತ ಹೆಚ್ಚು ಕಳುಹಿಸುವವರಿಗೆಶೇ. 5ರಷ್ಟು ತೆರಿಗೆ ವಿಧಿಸಬೇಕೆಂದು ಕರಡು ನಿರ್ದೇಶನದಲ್ಲಿದೆ. ವಿತ್ತಸಚಿವಾಲಯು ಬಿಡುಗಡೆಗೊಳಿಸಿರುವ ಫೈನಾನ್ಶಿಯಲ್ ಸ್ಟಾಂಪ್‌ಗಳ ಮೂಲಕ ತೆರಿಗೆಯನ್ನು ಸಂಗ್ರಹಿಸಲಾಗುವುದು.

  ಈ ಸ್ಟಾಂಪ್‌ಗಳನ್ನು ಅಂಗೀಕೃತ ಎಕ್ಸ್‌ಚೇಂಜ್ ಕಂಪೆನಿಗಳಿಗೂ ಬ್ಯಾಂಕ್‌ಗಳಲ್ಲಿಯೂ ಲಭ್ಯಗೊಳಿಸಲಾಗುವುದು. ಈ ವಿಧಾನದಲ್ಲಲ್ಲದೆ ಅನಧಿಕೃತ ವಿಧಾನದಲ್ಲಿ ಹಣವನ್ನು ಕಳುಹಿಸುವವರಿಗೆ ಆರು ತಿಂಗಳ ಸಜೆ ಹಾಗೂ 10,000 ದೀನಾರ್ ದಂಡ ವಿಧಿಸಬೇಕೆಂದು ಕರುಡು ನಿರ್ದೇಶನದಲ್ಲಿದೆ. ಹಣಕಾಸು ಸಮಿತಿಯಿಂದ ಅಂಗೀಕಾರ ದೊರಕಿದರೆ ಈ ನಿರ್ದೇಶನ ಪುನಃ ಪಾರ್ಲಿಮೆಂಟ್ ಪರಿಶೀಲನೆಗೆ ಬರಲಿದೆ. ಆನಂತರ ಎರಡು ಹಂತಗಳ ಚರ್ಚೆಯಲ್ಲಿ ಮಸೂದೆಯ ಕುರಿತು ನಿರ್ಧಾರವಾಗಲಿದೆ. ವಿದೇಶಿಯರು ಊರಿಗೆ ಕಳುಹಿಸುವ ಹಣಕ್ಕೆ ತೆರಿಗೆ ವಿಧಿಸಬೇಕೆಂದು ಬಲವಾದ ಒತ್ತಾಯ ಇತ್ತೀಚೆಗೆ ಕೇಳಿ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News