×
Ad

ಫಲ್ಲೂಜಾ ನಗರದಿಂದ 3,700 ಮಂದಿ ಪಲಾಯನ: ವಿಶ್ವಸಂಸ್ಥೆ

Update: 2016-06-01 23:58 IST

ವಿಶ್ವಸಂಸ್ಥೆ, ಜೂ. 1: ಐಸಿಸ್ ಭಯೋತ್ಪಾದಕರ ನಿಯಂತ್ರಣದಲ್ಲಿರುವ ಇರಾಕ್‌ನ ಫಲ್ಲೂಜಾ ನಗರವನ್ನು ಮತ್ತೆ ತನ್ನ ವಶಕ್ಕೆ ತೆಗೆದುಕೊಳ್ಳಲು ಇರಾಕ್ ಸೇನೆ ನೂತನ ಆಕ್ರಮಣ ಆರಂಭಿಸಿರುವ ಹಿನ್ನೆಲೆಯಲ್ಲಿ ಕಳೆದ ವಾರ ಸುಮಾರು 3,700 ಜನರು (624 ಕುಟುಂಬಗಳು) ನಗರವನ್ನು ತೊರೆದಿದ್ದಾರೆ ಎಂದು ವಿಶ್ವಸಂಸ್ಥೆ ಮಂಗಳವಾರ ತಿಳಿಸಿದೆ.

ನಗರದಲ್ಲಿ ಸಿಲುಕಿಕೊಂಡಿರುವ ಸುಮಾರು 50,000 ನಾಗರಿಕರನ್ನು ಭಯೋತ್ಪಾದಕ ಗುಂಪು ಮಾನವ ಗುರಾಣಿಗಳನ್ನಾಗಿ ಬಳಸಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ ಎಂದು ವಿಶ್ವಸಂಸ್ಥೆಯ ಇರಾಕ್‌ಗಾಗಿನ ಮಾನವೀಯ ಸಂಯೋಜಕರು ಮಂಗಳವಾರ ವರದಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News