×
Ad

ಗುಜರಾತ್ ಗುಲ್ಬರ್ಗಾ ಸೊಸೈಟಿ ಹತ್ಯಾಕಾಂಡ ಇಂದು ತೀರ್ಪು

Update: 2016-06-02 11:31 IST

ಅಹ್ಮದಾಬಾದ್, ಜೂನ್2: ಗುಲ್ಬರ್ಗಾಸೊಸೈಟಿ ಸಾಮೂಹಿಕ ಕಗ್ಗೊಲೆಯ ತೀರ್ಪು ಇಂದು ಹೊರಬರಲಿದೆ. ವಿಶೇಷ ಎಸ್‌ಐಟಿ ಕೋರ್ಟ್ ತೀರ್ಪು ನೀಡಲಿದೆ. 2002ರ ಗುಜರಾತ್ ಸಾಮೂಹಿಕ ಹತ್ಯಾಕಾಂಡದ ಎರಡನೆ ಬಹುದೊಡ್ಡ ಸಾಮೂಹಿಕ ಹತ್ಯಕಾಂಡ ಗುಲ್ಬರ್ಗಾ ಸೊಸೈಟಿಯಲ್ಲಿ ನಡೆದಿತ್ತು. ಮಾಜಿ ಕಾಂಗ್ರೆಸ್ ಸಂಸತ್ ಸದಸ್ಯ ಇಹ್ಸಾನ್ ಜಾಫ್ರಿ ಸಹಿತ 69 ಮಂದಿಯನ್ನು ಕೋಮಾಂಧರು ಈ ಸಂದರ್ಭದಲ್ಲಿ ಕಗ್ಗೊಲೆ ನಡೆಸಿದ್ದರು.

ಗುಜರಾತ್ ಸಾಮೂಹಿಕ ಹತ್ಯಾಕಾಂಡದ ಪ್ರಕರಣದಲ್ಲಿ ಗುಲ್ಬರ್ಗಾ ಸಾಮೂಹಿಕ ಹತ್ಯಾಕಾಂಡ ಒಂದಾಗಿದ್ದು ಪ್ರಕರಣದಲ್ಲಿ ಬಿಜೆಪಿ ಕಾರ್ಪೊರೇಶನ್ ಕೌನ್ಸಿಲರ್ ಬಿಪಿನ್ ಪಟೇಲ್ ಸಹಿತ 66ಮಂದಿ ವಿರುದ್ಧ ಆರೋಪಹೊರಿಸಲಾಗಿದೆ.

ಅಲ್ಪಸಂಖ್ಯಾತ ವಿಭಾಗಕ್ಕೆ ಸೇರಿದವರನ್ನು ಹುಡುಕಿ ಮುಗಿಸಲು ಯೋಜನಾಬದ್ಧವಾಗಿ ನಡೆಸಿದ ಮಾನವ ಸಂಹಾರ ಇದು ಎಂದು ಬಲಿಪಶುಗಳ ವಕೀಲರು ವಿಚಾರಣೆ ವೇಳೆ ವಾದಿಸಿದ್ದರು. ಸುಪ್ರೀಂಕೋರ್ಟ್‌ನ ನಿಗಾದಲ್ಲಿ ಆರ್..ೆ ರಾಘವನ್ ನೇತೃತ್ವದ ವಿಶೇಷ ತನಿಖಾ ತಂಡ ಪ್ರಕರಣವನ್ನು ತನಿಖೆ ನಡೆಸಿದ್ದು ವಿಚಾರಣೆಯು 2015ಸೆಪ್ಟಂಬರ್ 22ಕ್ಕೆ ಪೂರ್ತಿಯಾಗಿತ್ತು. 2002 ಫೆಬ್ರವರಿ 28 ಕ್ಕೆ 20,000ದಷ್ಟಿದ್ದ ಜನರ ಗುಂಪುಗುಲ್ಬರ್ಗಾ ಸೊಸೈಟಿಯ ಮನೆಗಳಿಗೆ ದಾಳಿ ಮಾಡಿತ್ತು. ಇಹ್ಸಾನ್ ಜಾಫ್ರಿ ಅಕ್ರಮಿಗಳಿಂದ ಪಾರು ಮಾಡಬೇಕೆಂದು ಪೊಲೀಸ್ ಅಧಿಕಾರಿಗಳಿಗೆ ಫೋನ್ ಮಾಡಿದ್ದರೂ ಸಹಾಯ ಲಭಿಸಿರಲಿಲ್ಲ.

ಗುಜರಾತ್ ನರಹತ್ಯೆಯ ಅತ್ಯಂತ ದೊಡ್ಡ ಸಾಮೂಹಿಕ ಕಗ್ಗೊಲೆ ನಡೆದ ನರೋಡಾ ಪಾಟ್ಯದಲ್ಲಿ 126 ಮಂದಿ ಕೊಲ್ಲಲ್ಪಟ್ಟಿದ್ದರು. ಈ ಪ್ರಕರಣದಲ್ಲಿ 2012ರ ಆಗಸ್ಟ್‌ನಲ್ಲಿ ಮಾಜಿ ಸಚಿವೆ ಮಾಯಾ ಕೊಡ್ನಾನಿ ಸಹಿತ 32 ಮಂದಿಗೆ ಶಿಕ್ಷೆ ವಿಧಿಸಿ ಕೋರ್ಟು ತೀರ್ಪು ನೀಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News