ಮತ್ತೆ ' ಕಮಾಲ್ ' ಮಾಡಿದ ಬೀದರ್ ಜಿಲ್ಲಾಡಳಿತದ ಯೋಜನೆ
ಬೀದರಿನ ಆರ್ ಸಾಯಿ ಕುಮಾರ್ ಮತ್ತು ವಿಜಯ್ ಲಕ್ಷ್ಮೀ ಬಿ ಸಿಇಟಿ ರ್ಯಾಂಕಿಂಗಿನಲ್ಲಿ 2000 ಒಳಗೆ ವೈದ್ಯಕೀಯ ಮತ್ತು ಇಂಡಿಯನ್ ಸಿಸ್ಟಮ್ಸ್ ಆಫ್ ಮೆಡಿಸಿನ್ ಆಂಡ್ ಹೋಮಿಯೋಪತಿಗೆ ಅರ್ಹತೆ ಪಡೆದಿದ್ದಾರೆ. ಬೀದರ್ ಜಿಲ್ಲಾ ಆಡಳಿತವು ಬಡ ಕುಟುಂಬಗಳಿಂದ ಆರಿಸಿ ಖಾಸಗಿ ಪಿಯು ಕಾಲೇಜುಗಳಿಗೆ ಶುಲ್ಕ ಮನ್ನಾ ಮಾಡಿ 300 ಮೆರಿಟ್ ವಿದ್ಯಾರ್ಥಿಗಳನ್ನು ಸೇರಿಸಿತ್ತು. ಆದರೆ ಇವರಲ್ಲಿ ಈ ಇಬ್ಬರು ಪ್ರತ್ಯೇಕವಾಗಿ ನಿಲ್ಲಲು ಕಾರಣವಿದೆ. ಈ 300 ಮಂದಿಯಲ್ಲಿ ಈಗ 180ಕ್ಕೂ ಹೆಚ್ಚು ಮಂದಿ ವೈದ್ಯಕೀಯ, ಇಂಜಿನಿಯರಿಂಗ್ ಮತ್ತು ಇತರ ವೃತ್ತಿಪರ ಕಾಲೇಜಿಗೆ ಉನ್ನತ ರ್ಯಾಂಕುಗಳಲ್ಲಿ ಆಯ್ಕೆಯಾಗಿದ್ದಾರೆ. ಪ್ರತಿಷ್ಠಿತ ಸರ್ಕಾರಿ ಕಾಲೇಜುಗಳಲ್ಲಿ ಅವರಿಗೆ ಭಡ್ತಿ ಸಿಗುವುದು ಖಚಿತ ಎನ್ನುತ್ತಾರೆ ಕಾರ್ಯಕ್ರಮದ ಸಂಯೋಜಕ ಅಲಿ ಶಿಂಧೆ. ಜಿಲ್ಲಾಡಳಿತದ ಯೋಜನೆ ಇಲ್ಲದಿದ್ದರೆ ನನ್ನ ಮಗ ಎಸ್‌ಎಸ್‌ಎಲ್‌ಸಿ ನಂತರ ಓದುತ್ತಿರಲಿಲ್ಲ. ನನಗೆ ಕೆಲಸದಲ್ಲಿ ಸಹಾಯ ಮಾಡಲು ಕೂರುತ್ತಿದ್ದ ಎಂದು ಭಾವನಾತ್ಮಕವಾಗಿ ಹೇಳುತ್ತಾರೆ ಸಾಯಿ ಕುಮಾರ್ ತಂದೆ ರಾಜ್ ಕುಮಾರ್. ಹುಮ್ನಾಬಾದಲ್ಲಿ ರಾಜ್ ಕುಮಾರ್ ಬಡಗಿಯಾಗಿ ಕೆಲಸ ಮಾಡುತ್ತಿದ್ದಾರೆ. ಈ ಕಾರ್ಯಕ್ರಮದಲ್ಲಿ ಆರಿಸಲಾದ ಬಾಲಕರು ಮತ್ತು ಬಾಲಕಿಯರು ಬಹುತೇಕ ಪರಿಶಿಷ್ಟ ಜಾತಿ, ಪಂಗಡ ಮತ್ತು ಒಬಿಸಿ ಸಮುದಾಯಕ್ಕೆ ಸೇರಿದ್ದಾರೆ. ಪಿಯು ಓದುತ್ತಿದ್ದಾಗ ಅವರು ಸರ್ಕಾರಿ ಹಾಸ್ಟೆಲುಗಳಲ್ಲಿ ತಂಗಿದ್ದರು. ಗಡಿ ಜಿಲ್ಲೆಯ ಕನ್ನಡ, ಮರಾಠಿ, ಉರ್ದು, ಹಿಂದಿ ಮತ್ತು ತೆಲುಗು ಮಾಧ್ಯಮದ ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿದ್ದರು. ಒಮ್ಮೆ ಇವರ ಹತ್ತನೇ ತರಗತಿ ಅಂಕಗಳನ್ನು ನೋಡಿ ಆರಿಸಿಕೊಂಡ ಮೇಲೆ ಅವರು ಪ್ರವೇಶ ಪರೀಕ್ಷೆಯೊಂದನ್ನು ಬರೆಯಬೇಕಾಗಿತ್ತು. ಜಿಲ್ಲಾಧಿಕಾರಿ ಪಿಸಿ ಜಾಫರ್ ನಂತರ ಖಾಸಗಿ ಕಾಲೇಜುಗಳ ಮುಖ್ಯಸ್ಥರ ಜೊತೆಗೆ ಮಾತನಾಡಿ 2014ರಲ್ಲಿ 450 ಸೀಟುಗಳನ್ನು ಮತ್ತು 2015ರಲ್ಲಿ 550 ಸೀಟುಗಳನ್ನು ಈ ಮಕ್ಕಳಿಗಾಗಿ ತೆರವು ಮಾಡಿದ್ದರು. ಬೀದರಲ್ಲಿ ಕೆಲ ದಿನಗಳ ಹಿಂದೆ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಅನುರಾಗ್ ತಿವಾರಿ ಈ ವರ್ಷವೂ ಬಡ ಸಮುದಾಯದ 558 ವಿದ್ಯಾರ್ಥಿಗಳನ್ನು ಒಟ್ಟು 79 ಖಾಸಗಿ ಪಿಯು ಕಾಲೇಜುಗಳ ಪೈಕಿ 38ರಲ್ಲಿ ಭಡ್ತಿ ಮಾಡಲಾಗುವುದು. ಉಳಿದ 41 ಕಾಲೇಜುಗಳ ಆಡಳಿತ ಮಂಡಳಿ ಜಿಲ್ಲಾಧಿಕಾರಿ ಕೋರಿಕೆಗೆ ಇನ್ನೂ ಪ್ರತಿಕ್ರಿಯಿಸಿಲ್ಲ. ಇನ್ನೂ 250 ಸೀಟುಗಳು ವಿದ್ಯಾರ್ಥಿಗಳಿಗೆ ಸಿಗಲಿದೆ ಎನ್ನುವ ಭರವಸೆಯನ್ನು ತಿವಾರಿ ಹೊಂದಿದ್ದಾರೆ. ಜಿಲ್ಲೆಯಲ್ಲಿ ಬಡ ಕುಟುಂಬದ ಶೇ.60ಕ್ಕೂ ಅಧಿಕ ಅಂಕಪಡೆದ 1352 ವಿದ್ಯಾರ್ಥಿಗಳು ಈ ಕಾರ್ಯಕ್ರಮದಲ್ಲಿ ವಿದ್ಯಾಭ್ಯಾಸಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.