ಇದು ಪಂಚತಾರಾ ಹೊಟೇಲ್ ಅಲ್ಲ, ನ್ಯೂಡೆಲ್ಲಿ ರೈಲ್ವೇ ಸ್ಟೇಷನ್ ಲಾಂಜ್!

Update: 2016-06-04 06:52 GMT

ಈ ಫೋಟೋಗಳನ್ನು ನೋಡಿ ಯಾವುದೋ ಪಂಚತಾರಾ ಹೊಟೇಲ್ ಅಥವಾ ರೆಸ್ಟೊರೆಂಟ್ ಎಂದುಕೊಳ್ಳಬೇಡಿ. ಈ ದುಬಾರಿ ಎಕ್ಸಿಕ್ಯೂಟಿವ್ ಲಾಂಜ್ ನವದೆಹಲಿಯ ರೈಲ್ವೇ ನಿಲ್ದಾಣದಲ್ಲಿದೆ. ಐಆರ್‌ಸಿಟಿಸಿ ಮತ್ತು ಎಸ್‌ಎಸ್‌ಪಿ ಕ್ಯಾಟರಿಂಗ್ ಇಂಡಿಯಾ ಜೊತೆಗೂಡಿ ಈ ಪಂಚತಾರಾ ಕಾಯುವ ಲಾಂಜನ್ನು ಎನ್‌ಡಿಎಲ್‌ಎಸ್ ನಿಲ್ದಾಣದ ಪ್ರಯಾಣಿಕರಿಗಾಗಿ ಸಿದ್ಧಪಡಿಸಿದ್ದಾರೆ.

ಎಸ್‌ಎಸ್‌ಪಿ ಕ್ಯಾಟರಿಂಗ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಸುಮಾರು 50 ಕಾಯುವಿಕೆ ಲಾಂಜ್ ಗಳನ್ನು ದೇಶದಾದ್ಯಂತ ವಿಮಾನ ನಿಲ್ದಾಣಗಳಲ್ಲಿ ನಿರ್ಮಿಸಿದೆ. ಈಗ ಭಾರತದಲ್ಲಿ ಮೊದಲ ಬಾರಿಗೆ ರೈಲ್ವೇ ನಿಲ್ದಾಣದಲ್ಲೂ ಎಕ್ಸಿಕ್ಯೂಟಿವ್ ಲಾಂಜನ್ನು ತೆರೆದಿದೆ.

ಮನೆಯ ಹಿತ ಮತ್ತು ಹೊಟೇಲಿನ ಆಡಂಭರ

ಮನೆಯಂತೆ ಹಿತಕರ ಮತ್ತು ಹೊಟೇಲಿನಂತಹ ಆಡಂಭರವನ್ನು ಅಗ್ಗದ ಬೆಲೆಯಲ್ಲಿ ಕೊಡಲು ಐಆರ್ಸಿಟಿಸಿ ಈ ಎಕ್ಸಿಕ್ಯೂಟಿವ್ ಲಾಂಜನ್ನು ಲೀಲಾ ಪ್ಯಾಲೇಸ್ ಮತ್ತು ಇತರ ಹೊಟೇಲ್ ಮತ್ತು ಟ್ರಾವೆಲ್ ಬುಕಿಂಗ್ ವೆಬ್ ತಾಣಗಳ ಜೊತೆಗೂಡಿ ಸಿದ್ಧಪಡಿಸಿದೆ. ಆನ್ ಲೈನಲ್ಲೇ ಜನರು ಈ ಕಾಯುವಿಕೆಯ ಜಾಗದಲ್ಲಿ ವಿಶ್ರಾಂತಿ ಪಡೆಯಲು ಸ್ಥಳ ಬುಕ್ ಮಾಡಬಹುದಾಗಿದೆ.

24*7 ಅತ್ಯಾಧುನಿಕ ಶೈಲಿಯ ವಾಷ್ ರೂಂಗಳು, ಎಸಿ ಇರುವ ಲಾಂಜ್, ಲಗೇಜ್ ರ್ಯಾಕುಗಳು, ವೈಫೈ ಕನೆಕ್ಟಿವಿಟಿ ದೆಹಲಿ ರೈಲ್ವೇ ನಿಲ್ದಾಣದಲ್ಲಿ ಸಿಗುವುದನ್ನು ಪ್ರಯಾಣಿಕರು ಖುಷಿಯಿಂದ ಸ್ವಾಗತಿಸಿದ್ದಾರೆ. ಇಲ್ಲಿ ಒಂದು ಬಾರಿ 125 ಮಂದಿ ಕೂರಬಹುದು.

ಸೌಲಭ್ಯಗಳು

ಲಾಂಜ್ ಅಲ್ಲಿ ಮಸಾಜ್ ಕೇಂದ್ರ, ಕೌಟುಂಬಿಕ ಕೋಣೆಗಳು, ವಾಷಿಂಗ್ ಮತ್ತು ಬಟ್ಟೆ ಬದಲಾವಣೆಗೆ ಜಾಗ, ಔದ್ಯಮಿಕ ಕೇಂದ್ರ, ಹಿತಕರ ಕುಳಿತುಕೊಳ್ಳುವ ಜಾಗ ಮತ್ತು ಆಹ್ಲಾದಕರ ಪಾನೀಯ ಮತ್ತು ಅತ್ಯುತ್ತಮ ಬಫೆಟ್ ಊಟವೂ ಇದೆ. ಕಾಯುತ್ತಿರುವ ಪ್ರಯಾಣಿಕರು 5ಡಿ ಸಿನಿಮಾ ಥಿಯೇಟರ್, ಲೈವ್ ಟಿವಿ ಮತ್ತು ಸಂಗೀತವೂ ಆಲಿಸಬಹುದು. ಫ್ಯಾಕ್ಸ್, ಫೋಟೋಶಾಟ್, ಸ್ಕಾನಿಂಗ್ ಮೊದಲಾದ ಸೌಲಭ್ಯಕ್ಕೆ ಹೆಚ್ಚುವರಿ ಬೆಲೆ ತೆರಬೇಕು.

ಪ್ರವೇಶ ಶುಲ್ಕ

ಸ್ವೈಪ್ ಕಾರ್ಡ್ ಮೂಲಕ ಲಾಂಜ್ ಒಳಕ್ಕೆ ಬರಬಹುದು. ಚೆಕ್ ಇನ್ ಸಮಯ ಈ ಕಾರ್ಡನ್ನು ಪ್ರಯಾಣಿಕರಿಗೆ ಕೊಡಲಾಗುತ್ತದೆ. ಸ್ವೈಪ್ ಕಾರ್ಡಲ್ಲಿ ಲಾಂಜ್ ಒಳಗೆ ಎಷ್ಟು ಸಮಯ ಇರಬಹುದು ಎನ್ನುವ ಸಮಯವೂ ಇರುತ್ತದೆ. ಒಳಗೆ ಎರಡು ಗಂಟೆ ಇರಲು ರು. 150 ತೆರಬೇಕು. ಈ ಬೆಲೆಗೆ ಆರಾಮವಾಗಿ ಕುಳಿತು ಆಹ್ಲಾದಕರ ಪಾನೀಯ ಸೇವಿಸಬಹುದು. 2 ಗಂಟೆ ಮೇಲೆ ಪ್ರಯಾಣಿಕರು ಪ್ರತೀ ಗಂಟೆಗೂ ರೂ. 50 ಹೆಚ್ಚು ತೆರಬೇಕು.

ಬಫೆಟ್ ಉಪಹಾರ ಬೇಕಿದ್ದಲ್ಲಿ ಹೆಚ್ಚುವರಿ ರೂ. 100 ಮತ್ತು ಮಧ್ಯಾಹ್ನದ ಊಟ ಮತ್ತು ರಾತ್ರಿಯೂಟಕ್ಕೆ ರೂ. 200 ತೆರಬೇಕು. ಎಕ್ಸಿಕ್ಯೂಟ್ ಲಾಂಜ್ ನಗದಿನ ಜೊತೆಗೆ ಕ್ರೆಡಿಟ್ ಮತ್ತು ಡೆಬಿಟ್ ಕಾರ್ಡ್ ಸ್ವೀಕರಿಸುತ್ತದೆ.

ಸ್ವೈಪ್ ಕಾರ್ಡ್ ಮೂಲಕ ಪ್ರವೇಶ

ಪ್ರಯಾಣಿಕರು ತಮ್ಮ ಫೋಟೋ ಐಡಿ ಸಾಕ್ಷ್ಯ ಮತ್ತು ಮಾನ್ಯತೆ ಪಡೆದ ಟ್ರೈನ್ ಟಿಕೆಟ್ ತೋರಿಸಿ ಈ ಸೌಲಭ್ಯ ಪಡೆಯಬಹುದು. ಸ್ವೈಪ್ ಕಾರ್ಡ್ ಮೂಲಕವಷ್ಟೇ ಲಾಂಜ್ ಪ್ರವೇಶಿಸಬಹುದು. ಮೂರು ಅಡಿ ಮೀರಿದ ಮಕ್ಕಳಿಗೆ ಪ್ರವೇಶ ಶುಲ್ಕವಿದೆ.

ವೀಲ್ ಚೇರ್ ಸೌಲಭ್ಯ

ಹಿರಿಯ ನಾಗರಿಕರಿಗೆ ಮತ್ತು ವಿಕಲಚೇತನರಿಗೆ ವೀಲ್ ಚೇರ್ ವ್ಯವಸ್ಥೆ ಇದೆ.

ಕೃಪೆ: economictimes.indiatimes.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News