ಡೈರಿ ಉತ್ಪನ್ನಗಳನ್ನು ಸೇವಿಸಲು ಹಿಂಜರಿಕೆ ಬೇಡ
ಕ್ಯಾಲರಿ ಮತ್ತು ಕೊಲೆಸ್ಟರಾಲ್ ನಿಯಂತ್ರಣದ ಶಿಸ್ತಿನ ಆಹಾರಕ್ಕೆ ಇಳಿದಾಗ ಮುಖ್ಯವಾಗಿ ಡೈರಿ ಉತ್ಪನ್ನಗಳನ್ನೇ ತ್ಯಜಿಸುತ್ತೇವೆ. ಡೈರಿ ವಿಷಯದಲ್ಲಿ ತಜ್ಞರ ಅಭಿಪ್ರಾಯಗಳೂ ಭಿನ್ನವಾಗೇ ಇರುತ್ತವೆ. ಡೈರಿ ಉತ್ಪನ್ನಗಳನ್ನು ವಿರೋಧಿಸುವ ಪರಿಣತರಿಗೆ ವಿವರಣೆಗೆ ಸಾಕಷ್ಟು ವಿಷಯಗಳು ಇರಬಹುದು. ಆದರೆ ಬಹುತೇಕ ವೈಜ್ಞಾನಿಕ ವಿವರಣೆಗಳ ಪ್ರಕಾರ ಮತ್ತು ಡಯಟ್ ಮಾರ್ಗದರ್ಶಿಗಳ ಪ್ರಕಾರ ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳನ್ನು ಆಹಾರದ ಭಾಗವಾಗಿ ಸೇವಿಸುವುದು ಆೋಗ್ಯಕರ ಡಯಟ್ ಆಗಿರುತ್ತದೆ.
ಡೈರಿ ಉತ್ಪನ್ನಗಳಿಂದ ಮೂಳೆ ಬೆಳೆಯುವುದು ಮತ್ತು ಕ್ಯಾಲ್ಸಿಯಂ, ಮೆಗ್ನೇಶಿಯಂ, ವಿಟಮಿನ್ ಎ, ವಿಟಮಿನ್ ಬಿ ಮತ್ತು ಪ್ರೊಟೀನ್ ಗಳಂತಹ ಅತೀ ಮೌಲ್ಯಯುತವಾದ ಪೌಷ್ಠಿಕಾಂಶಗಳು ದೇಹಕ್ಕೆ ದೊರೆಯುತ್ತವೆ. ತೂಕ ನಿಭಾಯಿಸುವಲ್ಲಿ ಇವುಗಳ ಪಾತ್ರ ಹೆಚ್ಚಿನದು. ಕ್ಯಾಲ್ಸಿಯಂ ಡೈರಿಯಲ್ಲಿ ಯಥೇಚ್ಛವಾಗಿರುವ ಪೌಷ್ಠಿಕಾಂಶ. ಇದು ತೂಕ ಇಳಿಸಲು ಉಪಯೋಗಿ ಎಂದು ಕಂಡುಬಂದಿದೆ. ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳನ್ನು ಸೇವಿಸಿದ ಜನರಲ್ಲಿ ಕಡಿಮೆ ದೇಹದ ಕೊಬ್ಬು ಬೆಳೆದಿರುವುದು ಮತ್ತು ದೇಹದ ಮಾಸ್ ಇಂಡೆಕ್ಸ್ ಇತರರಿಗೆ ಹೋಲಿಸಿದರೆ ಕಡಿಮೆ ಇದ್ದುದು ಕಂಡುಬಂದಿದೆ. ನಿತ್ಯವೂ 300 ಮಿಲಿಗ್ರಾಂ ಕ್ಯಾಲ್ಸಿಯಂ ಸೇವನೆಯಲ್ಲಿ ಏರಿದರೆ ಮಕ್ಕಳಲ್ಲಿ 1 ಕೆ.ಜಿ ದೇಹದ ಕೊಬ್ಬು ಕಡಿಮೆಯಾಗುತ್ತದೆ. ವಯಸ್ಕರಲ್ಲಿ 2.5-3 ಕೆ.ಜಿ ದೇಹದ ತೂಕ ಇಳಿಯುತ್ತದೆ. ರಕ್ತದೊತ್ತಡ ಮತ್ತು ರಕ್ತ ಹೆಪ್ಪುಗಟ್ಟುವುದರ ಮೇಲೂ ಕ್ಯಾಲ್ಸಿಯಂ ಪ್ರಮಾಣ ಪರಿಣಾಮ ಬೀರುತ್ತದೆ.
ಡೈರಿ ಅಸಹಿಷ್ಣು ವ್ಯಕ್ತಿಗಳು ಕ್ಯಾಲ್ಸಿಯಂ ಶ್ರೀಮಂತವಾಗಿರುವ ಆಹಾರಗಳಾದ ಸೋಯಾ ಮತ್ತು ಸೋಯಾ ಉತ್ಪನ್ನಗಳಾದ ಟೋಫು, ಸೋಯಾ ಹಾಲು, ಹಸಿರು ಎಲೆ ತರಕಾರಿಗಳು, ಸಾಗರಸಸ್ಯಗಳು, ಮಿಸೊ, ಸಾಸಿವೆ ಬೀಜಗಳು, ಫ್ಲಾಕ್ಸ್ ಬೀಜಗಳು, ಸೂರ್ಯಕಾಂತಿ ಬೀಜಗಳು, ಪಾಪಿ ಬೀಜಗಳು ಮತ್ತು ಬಾದಾಮಿಗಳನ್ನು ಸೇವಿಸಬೇಕು. ಹಾಲು ಮತ್ತು ಯೊಗಾರ್ಟ್ ಪ್ರೊಟೀನ್ ಹೊಂದಿರುತ್ತವೆ. ಅವುಗಳಲ್ಲಿ ಅಮಿನೋ ಆಸಿಡ್ ಲ್ಯೂಸಿನ್ ಇರುತ್ತದೆ.
ಇವುಗಳು ಮೂಳೆಗಳನ್ನು ಕಟ್ಟಲು ನೆರವಾಗುತ್ತವೆ. ಇದು ಚಯಾಪಚಯ ದರವನ್ನೂ ಏರಿಸುತ್ತದೆ. ಅಧ್ಯಯನಗಳ ಪ್ರಕಾರ ಅದು ಪೆಪ್ಟೈಡ್ ಗಳನ್ನು ಹೊಂದಿದ್ದು, ಸಿಂಥೆಸಿಸ್ ಅನ್ನು ಕಡಿತಗೊಳಿಸುತ್ತದೆ. ಹಾಲು, ಬೆಣ್ಣೆ ಮತ್ತು ಗಿಣ್ಣುಗಳಲ್ಲೂ ಸಿಎಲ್‌ಎ ಇದೆ. ದನದ ಮಾಂಸ ಮತ್ತು ಕುರಿಮಾಂಸದಲ್ಲೂ ಇದೆ. ಸಿಎಲ್‌ಎ ದೇಹದ ಕೊಬ್ಬನ್ನು ಹಲವು ಕಾರ್ಯಾಚರಣೆಯಲ್ಲಿ ಇಳಿಸುತ್ತದೆ ಎಂದು ಅಧ್ಯಯನಗಳು ಹೇಳಿವೆ. ಇದರಿಂದ ಚಯಾಪಚಯ ದರವೂ ಹೆಚ್ಚಾಗುತ್ತದೆ. ಹೀಗಾಗಿ ಮುಂದಿನ ಬಾರಿ ಗಿಣ್ಣನ್ನು ಸೇವಿಸಲು ಎತ್ತಿಕೊಂಡಾಗ ಬಾಯಿಗಿಡಲು ಹಿಂಜರಿಯಬೇಡಿ. ಅದು ನೀವು ಅಂದುಕೊಂಡಷ್ಟು ಕೆಟ್ಟ ಕೊಬ್ಬೇನಲ್ಲ. ಕಡಿಮೆ ಕೊಬ್ಬಿನ ಹಾಲು, ಯೊಗಾರ್ಟ್ ಮತ್ತು ಗಿಣ್ಣನ್ನು ನೀವು ಸೇವಿಸಿದರೆ ನಿಮ್ಮ ಕ್ಯಾಲರಿ ನಿಯಂತ್ರಣಕ್ಕೇನೂ ಹಾನಿಯಾಗದು.
ಕೃಪೆ: indianexpress.com