"ನನ್ನನ್ನು ಹಿಡಿಯಲು ತಾಲಿಬಾನ್ ಗೆ ಜಸ್ವಂತ್ ಹಣದ ಆಮಿಷ ಒಡ್ಡಿದ್ದರು"

Update: 2016-06-06 06:15 GMT

ಹೊಸದಿಲ್ಲಿ, ಜೂ 6 : ನನ್ನನ್ನು ಹಾಗೂ ಇತರ ಇಬ್ಬರನ್ನು ಹಿಡಿದು ಕೊಟ್ಟರೆ ಹಣ ನೀಡುವುದಾಗಿ ಅಂದಿನ ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಜಸ್ವಂತ್ ಸಿಂಗ್ ಆಗಿನ ತಾಲಿಬಾನ್ ಸರ್ಕಾರಕ್ಕೆ ಆಮಿಷ ಒಡ್ಡಿದ್ದರು ಎಂದು ಜೈಶೆ ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್ ಅಝರ್ ಸ್ಪೋಟಕ ಹೇಳಿಕೆ ನೀಡಿದ್ದಾನೆ.

1999 ರಲ್ಲಿ ನಡೆದ ಇಂಡಿಯನ್ ಏರ್ ಲೈನ್ಸ್ ವಿಮಾನ ಅಪಹರಣದ ಸಂದರ್ಭದಲ್ಲಿ ಪ್ರಯಾಣಿಕರು ಹಾಗೂ ವಿಮಾನ ಸಿಬ್ಬಂದಿಯ ಬಿಡುಗಡೆಗೆ ಬದಲಾಗಿ ಮಸೂದ್ ಅಝರ್ ಹಾಗೂ ಇತರ ಇಬ್ಬರನ್ನು ಭಾರತ ಸರ್ಕಾರ ಬಿಡುಗಡೆ ಮಾಡಿ ತಾಲಿಬಾನ್ ಗೆ ಒಪ್ಪಿಸಿತ್ತು. 

ವಿಮಾನ ಅಪಹರಣ ಸಂದರ್ಭದಲ್ಲಿ ತಾಲಿಬಾನ್ ನಾಗರೀಕ ವಿಮಾನ ಯಾನ ಸಚಿವನಾಗಿದ್ದ ಮುಲ್ಲಾ ಅಖ್ತರ್ ಮೊಹಮ್ಮದ್ ಮನ್ಸೂರ್ ಬಳಿ ಜಸ್ವಂತ್ ಈ ಆಮಿಷ ಒಡ್ಡಿದ್ದರು ಎಂದು ಮಸೂದ್ ಅಝರ್ ಹೇಳಿದ್ದಾನೆ. ಮುಲ್ಲಾ ಅಖ್ತರ್ ಕಳೆದ ತಿಂಗಳು ನಡೆದ ಅಮೆರಿಕದ ಡ್ರೋನ್ ದಾಳಿ ಗೆ ಬಲಿಯಾಗಿದ್ದಾನೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News