×
Ad

ಅಖಿಲೇಶ್ ಯಾದವ್ ಮಾಫಿಯ ಸಂರಕ್ಷಕರು: ಬಿಜೆಪಿ ಅಧ್ಯಕ್ಷ

Update: 2016-06-08 17:31 IST

   ಅಲಿಗಡ, ಜೂನ್ 8: ಪಕ್ಷದ ಸಂಘಟನೆಗಾಗಿ ಅಲಿಗಡದ ಕಾಸಗಂಜ್‌ನಲ್ಲಿ ಏರ್ಪಡಿಸಿದ ಸಭೆಯಲ್ಲಿ ಭಾಗವಹಿಸಲು ಬಂದಿದ್ದ ಉತ್ತರ ಪ್ರದೇಶ ಬಿಜೆಪಿ ಅಧ್ಯಕ್ಷ ಕೇಶವ ಪ್ರಸಾದ್ ಮೌರ್ಯ ಸಮಾಜವಾದಿ ಸರಕಾರವನ್ನು ಗುಂಡಾಗರ್ದಿ ಸರಕಾರ ಹಾಗೂ ಬಿಎಸ್ಪಿಯ ಭ್ರಷ್ಟಾ ಎಂದು ಟೀಕಿಸಿದ್ದಾರೆ.

ಅಲಿಗಡದ ಕಾಸಗಂಜ್‌ಗೆ ತೆರಳುವ ಮುಂಚೆ ಪತ್ರಕರ್ತರೊಂದಿಗೆ ಮಾತಾಡಿದ ಮೌರ್ಯ, ಸಮಾಜವಾದಿ ಪಕ್ಷ ಹಾಗೂ ಬಹುಜನಸಮಾಜವಾದಿ ಪಕ್ಷವನ್ನು ತೀಕ್ಷ್ಣವಾಗಿ ಖಂಡಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಅಲೆ ಇದೆ. ಅಮಿತ್‌ಶಾ ನೇತೃತ್ವದಲ್ಲಿ ಬಿಜೆಪಿ ಸಮಾಜವಾದಿ ಪಕ್ಷದ ಸೈಕಲ್‌ನ್ನು ಪಂಕ್ಚರ್ ಮಾಡಲಿದೆ ಎಂದು ಮೌರ್ಯ ಹೇಳಿದ್ದಾರೆ.

   ಬಿಜೆಪಿ ಕಾರ್ಯಕರ್ತರ ಬೂತ್ ಮಟ್ಟದ ನಿರ್ವಹಣೆಯ ಕುರಿತು ವಿವರಿಸಿದ ಮೌರ್ಯ ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಬಿಎಸ್ಪಿಯಿಂದ ಯಾವುದೇ ರೀತಿ ಸ್ಪರ್ಧೆ ಇಲ್ಲ ಎಂದು ಆತ್ಮವಿಶ್ವಾಸ ಪ್ರಕಟಿಸಿದ್ದಾರೆ ಹಾಗೂ ಮಥುರಾ ಹಿಂಸೆಯ ತನಿಖೆಯನ್ನು ಸಿಬಿಐಗೆ ವಹಿಸಿಕೊಡಬೇಕು ಎಂದು ಪುನರುಚ್ಚರಿಸಿದ್ದಾರೆ. ಪತ್ರಕರ್ತರು ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮೌರ್ಯ ಮುಖ್ಯಮಂತ್ರಿ ಅಖಿಲೇಶ್ ಯಾದವ್ ಮಾಫಿಯಗಳ ಬಹುದೊಡ್ಡ ಸಂರಕ್ಷಕ ಆಗಿದ್ದಾರೆ ಹಾಗೂ ಸರಕಾರ ನಡೆಸುವ ನೆಪದಲ್ಲಿ ಟೈಮ್ ಪಾಸ್ ಮಾಡುತ್ತಿದ್ದಾರೆ ಎಂದು ಅಣಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News