ಎನ್​ಎಸ್​ಜಿ ಸೇರಲು ಭಾರತಕ್ಕೆ ಮೆಕ್ಸಿಕೊ ಬೆಂಬಲ

Update: 2016-06-09 05:42 GMT

ಮೆಕ್ಸಿಕೊ, ಜೂ.9: ಭಾರತಕ್ಕೆ ಅಣುಸಾಮಗ್ರಿ ಪೂರೈಕೆದಾರರ ಗುಂಪು (ಎನ್​ಎಸ್​ಜಿ)ಗೆ ಸೇರಲು  ಮೆಕ್ಸಿಕೊ  ಬೆಂಬಲ ನೀಡಲಿದೆ ಎಂದು ಅಧ್ಯಕ್ಷ ಎನ್ರಿಕ್ ಪೆನಾ ನಿಯೆಟೋ ತಿಳಿಸಿದ್ದಾರೆ.
ಪ್ರಧಾನ ಮಂತ್ರಿ  ನರೇಂದ್ರ ಮೋದಿ ಅವರೊಂದಿಗೆ ಮಾತುಕತೆ ಬಳಿಕ ನಡೆದ ಜಂಟಿ ಪತ್ರಿಕಾ ಗೋಷ್ಠಿಯಲ್ಲಿ ಅವರು ಮಾತನಾಡಿದರು.
ಆಟೋಮೊಬೈಲ್ ಕ್ಷೇತ್ರ, ಇಂಧನ, ಔಷಧ, ವಿಜ್ಞಾನ, ಅಂತರಿಕ್ಷ, ಕೃಷಿ ಸಂಶೋಧನೆ, ಬಯೋ ಟೆಕ್ನಾಲಜಿ,ಮಾಹಿತಿ ತಂತ್ರಜ್ಞಾನ, ಸೋಲಾರ್ ವಿದ್ಯುತ್ ಉತ್ಪಾದನೆ, ತ್ಯಾಜ್ಯ ನಿರ್ವಹಣೆ, ನೈಸರ್ಗಿಕ ವಿಕೋಪ ಮುನ್ನೆಚ್ಚರಿಕೆ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ನೀಡಲು ಮತ್ತು ಬಂಡವಾಳ ಹೂಡಿಕೆ ಮಾಡಲು  ಭಾರತ ಮತ್ತು ಮೆಕ್ಸಿಕೊ ಒಪ್ಪಿಕೊಂಡಿದೆ  ಎಂದು ನಿಯೆಟೋ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News