ಝಿಂಬಾಬ್ವೆಯಲ್ಲಿ ಟೀಮ್ ಇಂಡಿಯಾಕ್ಕೆ ಗೆಲುವು

Update: 2016-06-11 18:31 GMT

ರಾಹುಲ್ ಚೊಚ್ಚಲ ಶತಕ* ರಾಯುಡು ಅರ್ಧಶತಕ

ಹರಾರೆ, ಜೂ.11: ಭಾರತ ತಂಡ ಇಲ್ಲಿ ನಡೆದ ಮೊದಲ ಏಕದಿನ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಝಿಂಬಾಬ್ವೆ ವಿರುದ್ಧ 9 ವಿಕೆಟ್‌ಗಳ ಭರ್ಜರಿ ಜಯ ಗಳಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಹರಾರೆ ಸ್ಫೋರ್ಟ್ಸ್ ಕ್ಲಬ್‌ನಲ್ಲಿ ಶನಿವಾರ ನಡೆದ ಪಂದ್ಯದಲ್ಲಿ ಗೆಲುವಿಗೆ 169 ರನ್‌ಗಳ ಸವಾಲನ್ನು ಪಡೆದ ಭಾರತ ತಂಡ 42.3 ಓವರ್‌ಗಳಲ್ಲಿ 1 ವಿಕೆಟ್ ನಷ್ಟದಲ್ಲಿ 173 ರನ್ ಗಳಿಸಿತು.

ಲೋಕೇಶ್ ರಾಹುಲ್ ದಾಖಲಿಸಿದ ಚೊಚ್ಚಲ ಶತಕ ಮತ್ತು ಅಂಬಟಿ ರಾಯುಡು ಅರ್ಧಶತಕದ ಸಹಾಯದಿಂದ ಭಾರತ ಸುಲಭವಾಗಿ ಗೆಲುವಿನ ದಡ ತಲುಪಿತು.

ಕೆ.ಎಲ್. ರಾಹುಲ್ ಮೊದಲ ಬಾರಿ ಏಕದಿನ ತಂಡದಲ್ಲಿ ಸ್ಥಾನ ಗಿಟ್ಟಿಕೊಂಡು ಚೊಚ್ಚಲ ಶತಕದೊಂದಿಗೆ ದಾಖಲೆ ನಿರ್ಮಿಸಿದರು. 115 ಎಸೆತಗಳನ್ನು ಎದುರಿಸಿದ ರಾಹುಲ್ 7ಬೌಂಡರಿ ಮತ್ತು 1 ಸಿಕ್ಸರ್ ನೆರವಿನಲ್ಲಿ ಚೊಚ್ಚಲ ಶತಕ ದಾಖಲಿಸಿದರು.

1976ರ ಬಳಿಕ ಮೊದಲ ಬಾರಿ ಭಾರತದ ಪರ ಚೊಚ್ಚಲ ಪಂದ್ಯವನ್ನಾಡುತ್ತಿರುವವರು ಇನಿಂಗ್ಸ್ ಆರಂಭಿಸಿದ್ದರು. ಕರ್ನಾಟಕದ ಲೋಕೇಶ್ ರಾಹುಲ್ ಮತ್ತು ಕರುಣ್ ನಾಯರ್ ಇನಿಂಗ್ಸ್ ಆರಂಭಿಸಿದ್ದರು. ಆದರೆ ಈ ಜೋಡಿಗೆ ಮೊದಲ ವಿಕೆಟಗೆ 4.3 ಓವರ್‌ಗಳಲ್ಲಿ 11 ರನ್ ಗಳಿಸಲಷ್ಟೇ ಸಾಧ್ಯವಾಯಿತು. 7 ರನ್ (20ಎ, 1ಬೌ) ಗಳಿಸಿದ ನಾಯರ್ ಅವರು ಚಟಾರ ಎಸೆತದಲ್ಲಿ ಸಿಕಂದರ್ ರಝಾಗೆ ಕ್ಯಾಚ್ ನೀಡುವುದರೊಂದಿಗೆ ಬೇಗನೆ ನಿರ್ಗಮಿಸಿದರು.

ಎರಡನೆ ವಿಕೆಟ್‌ಗೆ ರಾಹುಲ್ ಮತ್ತು ರಾಯುಡು ಎರಡನೆ ವಿಕೆಟ್‌ಗೆ 162 ರನ್ ಸೇರಿಸಿದರು. ರಾಯುಡು ಎಚ್ಚರಿಕೆಯಿಂದಲೇ ಆಡಿದರು. 120 ಎಸೆತಗಳಲ್ಲಿ 5 ಬೌಂಡರಿ ಸಹಾಯದಿಂದ 62 ರನ್ ಗಳಿಸಿ ಔಟಾಗದೆ ಉಳಿದರು. ಅವರು ಆರನೆ ಏಕದಿನ ಅರ್ಧಶತಕ ಪೂರ್ಣಗೊಳಿಸಿದರು.

42.3ನೆ ಓವರ್‌ನಲ್ಲಿ ಏಕದಿನ ಕ್ರಿಕೆಟ್‌ನಲ್ಲಿ ಮೊದಲ ಸಿಕ್ಸರ್ ಬಾರಿಸುವುದರೊಂದಿಗೆ ಚೊಚ್ಚಲ ಶತಕ ಪೂರ್ಣಗೊಳಿಸಿದರು. ಭಾರತ ಇದರೊಂದಿಗೆ ಗೆಲುವಿನ ಗುರಿ ತಲುಪಿತು. ರಾಹುಲ್ ಮೊದಲ ಪಂದ್ಯದಲ್ಲೇ ಶತಕ ತಲುಪಿದರು. ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

ಝಿಂಬಾಬ್ವೆ 168ಕ್ಕೆ ಅಲೌಟ್: ಝಿಂಬಾಬ್ವೆ ತಂಡ ಟಾಸ್ ಸೋತು ಮೊದಲು ಬ್ಯಾಟಿಂಗ್ ಅವಕಾಶ ಪಡೆದಿತ್ತು.

ಭಾರತದ ಜಸ್‌ಪ್ರೀತ್ ಬುಮ್ರಾ (28ಕ್ಕೆ 4), ಧವಳ್ ಕುಲಕರ್ಣಿ(42ಕ್ಕೆ 2), ಬಲ್ವಿಂದರ್ ಸ್ರಾನ್(42ಕ್ಕೆ 2), ಅಕ್ಷರ್ ಪಟೇಲ್(26ಕ್ಕೆ 1), ಚಾಹಲ್(27ಕ್ಕೆ 1) ಸಂಘಟಿತ ದಾಳಿಗೆ ಸಿಲುಕಿದ ಝಿಂಬಾಬ್ವೆ ತಂಡ 49.5 ಓವರ್‌ಗಳಲ್ಲಿ 168 ರನ್‌ಗಳಿಗೆ ಆಲೌಟಾಗಿತ್ತು.

ಸ್ಕೋರ್ ವಿವರ

ಝಿಂಬಾಬ್ವೆ: 49.5 ಓವರ್‌ಗಳಲ್ಲಿ 168 ರನ್‌ಗೆ ಆಲೌಟ್

ಮೂರ್ ಎಲ್‌ಬಿಡಬ್ಲು ಸ್ರಾನ್ 03

ಚಿಭಾಭಾ ಬಿ ಬುಮ್ರಾ 13

ಮಸಕಝ ಸಿ ಧೋನಿ ಬಿ ಕುಲಕರ್ಣಿ 14

ಎರ್ವಿನ್ ಸಿ ಸಬ್ ಬಿ ಪಟೇಲ್ 21

ಸಿಬಾಂಡ ಸಿ ಧೋನಿ ಬಿ ಬುಮ್ರಾ 05

ಸಿಕಂದರ್ ರಝಾ ಬಿ ಸ್ರಾನ್ 23

ಚಿಗುಂಬುರ ಬಿ ಬುಮ್ರಾ 41

ಮುತುಂಬಮಿ ಸಿ ರಾಹುಲ್ ಬಿ ಚಾಹಲ್ 15

ಕ್ರೀಮರ್ ಬಿ ಕುಲಕರ್ಣಿ 08

ಚಟಾರ ಸಿ ರಾಯುಡು ಬಿ ಬುಮ್ರಾ 04

ಮುಝರಬನಿ ಔಟಾಗದೆ 01

ಇತರ 20

ವಿಕೆಟ್ ಪತನ: 1-8, 2-30, 3-47, 4-69, 5-77, 6-115, 7-140, 8-156, 9-167, 10-168.

ಬೌಲಿಂಗ್ ವಿವರ:

ಧವಳ್ ಕುಲಕರ್ಣಿ 10-1-42-2

ಸ್ರಾನ್ 10-0-42-2

ಬುಮ್ರಾ 9.5-0-28-4

ಅಕ್ಷರ್ ಪಟೇಲ್ 10-1-26-1

ಚಾಹಲ್ 10-1-27-1

ಭಾರತ: 42.3 ಓವರ್‌ಗಳಲ್ಲಿ 173/1

ಕೆಎಲ್ ರಾಹುಲ್ ಔಟಾಗದೆ 100

ಕರುಣ್ ನಾಯರ್ ಸಿ ಸಿಕಂದರ್ ಬಿ ಚಟಾರ 07

ರಾಯುಡು ಔಟಾಗದೆ 62

ಇತರ 04

ವಿಕೆಟ್ ಪತನ: 1-11.

ಬೌಲಿಂಗ್ ವಿವರ:

ಚಟಾರ 7-1-20-1

ಮುಝರಬನಿ 6-0-18-0

ಚಿಭಾಭಾ 8-1-14-0

ಕ್ರೀಮರ್ 10-0-47-0

ಚಿಗುಂಬುರ 4-0-34-0

ಸಿಕಂದರ್ ರಝಾ 5-0-20-0

ಮಸಕಝ 2.3-0-19-0

ರಾಹುಲ್ ಚೊಚ್ಚಲ ಏಕದಿನ ಪಂದ್ಯದಲ್ಲೇ ಶತಕ ಸಿಡಿಸಿದ ಭಾರತದ ಮೊದಲ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಭಾಜನರಾಗಿದ್ದಾರೆ. 2006ರಲ್ಲಿ ಇಂದೋರ್‌ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧ ಪಂದ್ಯದಲ್ಲಿ ರಾಬಿನ್ ಉತ್ತಪ್ಪ ಬಾರಿಸಿದ್ದ 86 ರನ್ ಈವರೆಗೆ ಭಾರತ ಆಟಗಾರ ಚೊಚ್ಚಲ ಪಂದ್ಯದಲ್ಲಿ ಗಳಿಸಿದ್ದ ಗರಿಷ್ಠ ವೈಯಕ್ತಿಕ ಸ್ಕೋರ್ ಆಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News