ಅಕ್ರಮಕ್ಕೆ 49 ವರ್ಷ
ವೆಸ್ಟ್ ಬ್ಯಾಂಕ್ ಮತ್ತು ಗಾಝಾ ಪಟ್ಟಿಯ ಮೇಲೆ ಇಸ್ರೇಲಿ ಮಿಲಿಟರಿ ವಾಸ್ತವ್ಯಹೂಡಿ ಇಂದಿಗೆ 49 ವರ್ಷಗಳಾದವು. ಹೀಗಾಗಿ ಇಲ್ಲಿ ಬಹುತೇಕ ಅರ್ಧ ಶತಮಾನ ಕಳೆದಿರುವ ಆಧಿಪತ್ಯದ ಕೆಲವು ವಾಸ್ತವಗಳಿವೆ.
1. ಪೂರ್ವ ಜೆರುಸಲೇಂ ಸೇರಿದಂತೆ ವೆಸ್ಟ್ ಬ್ಯಾಂಕ್ ಮತ್ತು ಗಾಝಾ ಪಟ್ಟಿ ಒಟ್ಟಾಗಿ ಆಕ್ರಮಿತ ಫೆಲೆಸ್ತೀನ್ ಪ್ರಾಂತ್ಯ(ಒಪಿಟಿ). ಆದರೆ 1967 ಜೂನ್‌ನಿಂದ ಇದು ಇಸ್ರೇಲಿ ಸೇನೆಯ ಅಡಿಯಲ್ಲಿದೆ.
2. ಇಸ್ರೇಲಿ ಆಕ್ರಮಣಕ್ಕೆ ಮೊದಲು ವೆಸ್ಟ್ ಬ್ಯಾಂಕ್ ಜೋರ್ಡನ್ ನಿಯಂತ್ರಣದಲ್ಲಿತ್ತು ಮತ್ತು ಗಾಝಾ ಪಟ್ಟಿ ಈಜಿಪ್ಟ್ ಅಡಿಯಲ್ಲಿತ್ತು.
3. 1948ರಲ್ಲಿ ಇಸ್ರೇಲ್ ಅಸ್ತಿತ್ವಕ್ಕೆ ಬರುವ ಮೊದಲು ವೆಸ್ಟ್ ಬ್ಯಾಂಕ್ ಮತ್ತು ಗಾಝಾ ಪಟ್ಟಿ ಫೆಲೆಸ್ತೀನ್ ಭಾಗವಾಗಿತ್ತು. ಇಸ್ರೇಲಿ ವಿಸ್ತರಣೆ ಮತ್ತು ಶಸ್ತ್ರಾಸ್ತ್ರ ಪ್ರಯೋಗಗಳ ಕಾರಣದಿಂದ ಗಡಿಗಳು ಬಂದಿವೆ.
4. 1967 ಜೂನ್‌ನಿಂದ 3,00,000 ಫೆಲೆಸ್ತೀನಿಯರು ವೆಸ್ಟ್ ಬ್ಯಾಂಕ್ ಮತ್ತು ಗಾಝಾಪಟ್ಟಿಯಲ್ಲಿ ಸಂತ್ರಸ್ತರಾಗಿದ್ದಾರೆ. ಅವರಲ್ಲಿ ಬಹುತೇಕರು ಮರಳಲೂ ಸಾಧ್ಯವಾಗಲಿಲ್ಲ.
5. 1967ರಲ್ಲಿ ಇಸ್ರೇಲಿ ಪಡೆಗಳು ಜನಾಂಗೀಯವಾಗಿ ಸ್ವಚ್ಛಗೊಳಿಸುವುದು ಮತ್ತು ನಾಶ ಮಾಡುವ ಕೆಲಸಕ್ಕೆ ತೊಡಗಿ ಇಮ್ವಾಸ್, ಬೈಟಿ ನುಬ ಮೊದಲಾಗಿ ಒಪಿಟಿಯ ಹಲವು ಫೆಲೆಸ್ತೀನ್ ಗ್ರಾಮಗಳನ್ನು ನಿರ್ನಾಮ ಮಾಡಿದರು.
6. ಇತಿಹಾಸದ ಕಾಕತಾಳೀಯ ಎನ್ನುವಂತೆ ಒಪಿಟಿಯಲ್ಲಿ ಇಸ್ರೇಲ್ ಸೇನಾ ಕಾರ್ಯಚಟುವಟಿಕೆಯನ್ನು ಆರಂಭಿಸುವ ಮೊದಲು 1966 ಡಿಸೆಂಬರ್ ವರೆಗೆ ಅಧಿಕೃತವಾಗಿ ಇಸ್ರೇಲಿನ ಫೆಲೆಸ್ತೀನ್ ನಾಗರಿಕರ ಮೇಲೆ ಮಿಲಿಟರಿ ಕ್ರಮ ನಡೆದಿತ್ತು.
7. ಹೀಗೆ ಇಸ್ರೇಲ್ ಫೆಲೆಸ್ತೀನಿ ನಾಗರಿಕರು ಮತ್ತು ಫೆಲೆಸ್ತೀನಿ ನಾಗರಿಕರೇತರು ಇಬ್ಬರ ಮೇಲೂ ತನ್ನ 68 ವರ್ಷದ ಅಸ್ತಿತ್ವದ ಆರು ತಿಂಗಳನ್ನು ಹೊರತಾಗಿ ಎಲ್ಲಾ ಸಮಯದಲ್ಲೂ ಸೇನಾ ಆಡಳಿತದಿಂದ ನಲುಗಿಸಿದೆ. 8. ಪೂರ್ವ ಜೆರುಸಲೇಂ ನಲ್ಲಿ ಇಸ್ರೇಲಿ ಅಧಿಕಾರಿಗಳ ಮೊದಲ ಕ್ರಮವಾಗಿ ಮುಘರಬಿ ಕ್ವಾರ್ಟರ್ ನಾಶ ಮಾಡಿ 135 ಮನೆಗಳನ್ನು ನಾಶ ಮಾಡಿ 600 ನಿವಾಸಿಗಳನ್ನು ಹೊರ ಹಾಕಿದೆ.
9. 800 ವರ್ಷಗಳ ಪುರಾತನ ಮುಘರಬಿ ಕ್ವಾರ್ಟರ್‌ನಲ್ಲಿ ಇಸ್ರೇಲ್ ಪಶ್ಚಿಮ ವಾಲ್ ಪ್ಲಾಜಾ ನಿರ್ಮಿಸಿತು.
10. 1967ರಲ್ಲಿ ವೆಸ್ಟ್ ಬ್ಯಾಂಕ್ ವಾಸ ಆರಂಭವಾದಾಗ ಲೇಬರ್ ನೇತೃತ್ವದ ಸರಕಾರ ಅದಕ್ಕೆ ಅಂಗೀಕರಿಸಿತ್ತು.
11. ಒಪಿಟಿಯ ಎಲ್ಲಾ ಇಸ್ರೇಲಿ ನಿವಾಸವು ಅಂತಾರಾಷ್ಟ್ರೀಯ ಕಾನೂನಿನಂತೆ ಅಕ್ರಮ, ನಾಲ್ಕನೆ ಜಿನಿವಾ ಸಮ್ಮೇಳನದ ಉಲ್ಲಂಘನೆ.
12. 1967ರಲ್ಲಿ ರಹಸ್ಯ ಮೆಮೊದಲ್ಲಿ ಇಸ್ರೇಲಿ ಸರಕಾರದ ಕಾನೂನು ಸಲಹೆಗಾರ ಒಪಿಟಿಯಲ್ಲಿ ನಾಗರಿಕ ವಾಸದ ಅಕ್ರಮವನ್ನು ದೃಢೀಕರಿಸಿದೆ.
13. 1972ರಲ್ಲಿ 10,000 ಇಸ್ರೇಲಿಗರು ಒಪಿಟಿಯ ಅಕ್ರಮ ವಾಸಸ್ಥಳಗಳಲ್ಲಿ ನೆಲೆಸಿದ್ದರು.
14. 1974/75ರಲ್ಲಿ ಇಸ್ರೇಲ್ ಮಾಲ್ ಅಡ್ಯುಮಿನ್ ಸ್ಥಾಪಿಸಿತು. ಇದು ಪೂರ್ವ ಜೆರುಸಲೆಂನ ವೆಸ್ಟ್ ಬ್ಯಾಂಕಿನಲ್ಲಿದೆ. ಇದು ಈ ಪ್ರಾಂತ್ಯದ ಅತೀ ದೊಡ್ಡ ಇಸ್ರೇಲಿ ವಾಸಸ್ಥಳವಾಗಿದೆ.
15. ಒಪಿಟಿಯಲ್ಲಿ ಈಗ 125 ಸರಕಾರಿ ಮಂಜೂರಾದ ವಾಸಸ್ಥಳಗಳಿವೆ. ಇನ್ನೂ 100 ಅಥವಾ ಹೆಚ್ಚು ಅಕ್ರಮ ನಿವಾಸಗಳಿವೆ.
16. ಆಕ್ರಮಿತ ವೆಸ್ಟ್ ಬ್ಯಾಂಕಲ್ಲಿ ಸುಮಾರು 4,00,000 ಇಸ್ರೇಲಿಗರು ಅಕ್ರಮ ವಾಸಸ್ಥಳಗಳಲ್ಲಿದ್ದಾರೆ.
17.ಪೂರ್ವ ಜೆರುಸಲೇಂನ ಕಾಲನಿಗಳಲ್ಲಿ ಪ್ರತ್ಯೇಕವಾಗಿ ಇನ್ನೂ 2,00,000 ಮಂದಿ ಇಸ್ರೇಲಿಗರಿದ್ದಾರೆ.
18. 1967 ಜೂನ್‌ನಿಂದ ಇಸ್ರೇಲಿಗರು 14 ರಾಷ್ಟ್ರೀಯ ಚುನಾವಣೆಗಳ ಮತ ಹಾಕಿದ್ದಾರೆ. ಆದರೆ ಒಪಿಟಿಯ ಫೆಲೆಸ್ತೀನಿಯರಿಗೆ ಈ ಯಾವ ಚುನಾವಣೆಗಳ ಮತ ಹಾಕುವ ಅವಕಾಶ ಸಿಗಲಿಲ್ಲ.
19. ವಿಶ್ವ ಸಂಸ್ಥೆ ಪ್ರಕಾರ 2,598 ಹಿಂಸಾ ಕೃತ್ಯಗಳನ್ನು ಇಸ್ರೇಲಿ ನಿವಾಸಿಗಳು ಕಳೆದ 10 ವರ್ಷಗಳಲ್ಲಿ ಫೆಲೆಸ್ತೀನಿಯರ ಮೇಲೆ ನಡೆಸಿದ್ದಾರೆ.
20. ಇಸ್ರೇಲಿ ಅಧಿಕಾರಿಗಳು ದಶಕಗಳಿಂದ ವೆಸ್ಟ್ ಬ್ಯಾಂಕ್ ಪ್ರಾಂತ್ಯವನ್ನು ವಸಾಹತನ್ನಾಗಿ ಮಾಡಲು ಅನುಸರಿಸಿದ ಕ್ರಮವೆಂದರೆ 1858ರ ಭೂ ಕಾನೂನುಗಳನ್ನು ಪ್ರಯೋಗಿಸಿರುವುದು.
21. 1980ರ ಮಧ್ಯಭಾಗದಲ್ಲಿ ಫೆಲೆಸ್ತೀನಿಯರು ವೆಸ್ಟ್ ಬ್ಯಾಂಕಲ್ಲಿ ಹೊಂದಿದ ಪ್ರಾಂತದ ಭಾಗ ಶೇ. 40ಕ್ಕೆ ಇಳಿದಿತ್ತು.
22. 1991ರಲ್ಲಿ ಇಸ್ರೇಲ್‌ಗೆ ಒಪಿಟಿ ಮೂಲಕ ಬರುವ ಫೆಲೆಸ್ತೀನಿಯನ್ನರು ಖಾಸಗಿ ಪರವಾನಿಗೆ ಪಡೆಯುವ ನಿಯಮ ಜಾರಿಗೆ ತಂದಿದೆ.
23. 500ಕ್ಕೂ ಅಧಿಕ ತಡೆಗಳನ್ನು ಮುಂದಿಡಲಾಯಿತು. ಚೆಕ್ ಪಾಯಿಂಟುಗಳು ಮತ್ತು ಭೂಮಿಯ ಏರು ತಗ್ಗುಗಳು ಮೊದಲಾಗಿ ವೆಸ್ಟ್ ಬ್ಯಾಂಕಲ್ಲಿ ಫೆಲೆಸ್ತೀನಿಯನ್ನರ ಸ್ವಾತಂತ್ರ್ಯಕ್ಕೆ ಧಕ್ಕೆ ತರಲಾಯಿತು.
24. 2003ರಲ್ಲಿ ಇಸ್ರೇಲ್ ವೆಸ್ಟ್ ಬ್ಯಾಂಕ್ ಮತ್ತು ಪೂರ್ವ ಜೆರುಸಲೇಂನಲ್ಲಿ ಪ್ರತ್ಯೇಕ ಗೋಡೆಯ ಕೆಲಸ ಆರಂಭಿಸಿತು. ಈ ಗೋಡೆಯ ಶೇ. 85ರಷ್ಟು ಭಾಗ ಒಪಿಟಿಯಲ್ಲಿತ್ತು.
25. 2004ರಲ್ಲಿ ಹೇಗ್‌ನ ಅಂತಾರಾಷ್ಟ್ರೀಯ ನ್ಯಾಯಾಲಯವು ಒಪಿಟಿಯಲ್ಲಿ ಗೋಡೆ ಕಟ್ಟುವುದು ಅಂತಾರಾಷ್ಟ್ರೀಯ ಕಾನೂನಿನ ಉಲ್ಲಂಘನೆ ಎಂದಿತು.
26. ಸುಮಾರು 82,000 ಮಂದಿ ಪ್ರತ್ಯೇಕ ಗೋಡೆಯ ಹೊರಗಿದ್ದಾರೆ. ಉತ್ತರ ವೆಸ್ಟ್ ಬ್ಯಾಂಕ್‌ನ ಮಧ್ಯಭಾಗದ ಆರಿಯಲ್ ನಗರದಲ್ಲಿ 1 ಲಕ್ಷ ಮಂದಿ ಇದ್ದಾರೆ.
27. ಗಾಝಾ ಪಟ್ಟಿಯು 1.8 ದಶಲಕ್ಷ ಫೆಲೆಸ್ತೀನಿಯರಿಗೆ ಮನೆ. ಸುಮಾರು ಶೇ. 70ರಷ್ಟು ಮಂದಿ ವಿಶ್ವಸಂಸ್ಥೆಯ ನೋಂದಾಯಿತ ನಿರಾಶ್ರಿತರು. 1948ರಲ್ಲಿ ತಮ್ಮ ಮನೆಗಳಿಂದ ಅವರನ್ನು ಇಸ್ರೇಲ್ ಹೊರಗಟ್ಟಿದೆ.
28. ದಶಕಗಳಿಂದ ಗಾಝಾದಲ್ಲಿ ಶಾಶ್ವತ ಸಶಸ್ತ್ರ ಸೇನೆ ಇಟ್ಟಿದೆ. ಭೂಮಿ ಅತಿಕ್ರಮಿಸಿ ವಸಾಹತುಗಳನ್ನು ಕಟ್ಟಿ ತಮ್ಮ ಜನಸಂಖ್ಯೆಯನ್ನು 8,000ಕ್ಕೂ ಮೇಲೇರಿಸಿದೆ.
29. 2005ರಲ್ಲಿ ಇಸ್ರೇಲ್ ಈ ನಿವಾಸಿಗಳನ್ನು ಸ್ಥಳಾಂತರಿಸಿ ಗಾಝಾದಲ್ಲಿ ಸೇನಾ ಪಡೆಗಳನ್ನು ಮರಳಿ ಇರಿಸಿದೆ. 30. ಗಾಝಾಪಟ್ಟಿ ಈಗಲೂ ಇಸ್ರೇಲ್ ಅಡಿಯಲ್ಲಿದೆ. ವೆಸ್ಟ್ ಬ್ಯಾಂಕ್ ಮತ್ತು ಪೂರ್ವ ಜೆರುಸಲೇಂ ಕೂಡ. ಇವೆಲ್ಲ ಜೊತೆಗೆ ಒಪಿಟಿಯಾಗಿದೆ.
31. 2009ರ ವಿಶ್ವಸಂಸ್ಥೆ ಭದ್ರತಾ ಆಯೋಗದ ನಿರ್ಣಯ 1860ರಲ್ಲಿ ಇದು ದೃಢಗೊಂಡಿದೆ ಮತ್ತು ನವೆಂಬರ್ 2014ರಲ್ಲೂ ಹೇಗ್‌ನ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ದೃಢಪಟ್ಟಿದೆ.
32. 1967ರಲ್ಲಿ ಇಸ್ರೇಲ್ ಜೆರುಸಲೇಂ ಪಾಲಿಕೆಯ ಗಡಿಗಳನ್ನು ವಿಸ್ತರಿಸಿದೆ. ಈ ಕ್ರಮವನ್ನು ಅಂತಾರಾಷ್ಟ್ರೀಯ ಸಮುದಾಯ ಗುರುತಿಸಲೇ ಇಲ್ಲ.
33. 2001ರಲ್ಲಿ ಹೀಗೆ ವಿಸ್ತರಿಸಿ ಕಾನೂನುಬದ್ಧಗೊಳಿಸಿದ ಪ್ರಾಂತದಲ್ಲಿ 47,000ಕ್ಕೂ ಅಧಿಕ ವಸತಿ ವ್ಯವಸ್ಥೆಗಳನ್ನು ಮಾಡಲಾಯಿತು.
34. ಜೆರುಸಲೆಂನ ಬಹುತೇಕ ಫೆಲೆಸ್ತೇನಿಯನ್ನರು ಶಾಶ್ವತ ನಿವಾಸಿಗಳಾಗಿದ್ದರೂ ಪ್ರಜೆಗಳಲ್ಲ. 2014ರಲ್ಲಿ 107 ಫೆಲೆಸ್ತೀನಿ ಜೆರುಸಲೇಂ ನಿವಾಸಿಗಳ ವಸತಿ ಸ್ಥಿತಿಯನ್ನು ಬದಲಿಸಲಾಗಿದೆ.
35. ಬಹುತೇಕ ಫೆಲೆಸ್ತೀನಿಯರು ಇಸ್ರೇಲ್ ಅಧಿಕಾರಿಗಳ ತಾರತಮ್ಯದ ನೀತಿಯಿಂದ ನಲುಗಿದ್ದಾರೆ.
36. ಒಪಿಟಿಯಲ್ಲಿ ದ್ವಿನ್ಯಾಯ ವ್ಯವಸ್ಥೆಯನ್ನು ಇಸ್ರೇಲ್ ಹೇರಿದೆ. 6 ಲಕ್ಷ ನಿವಾಸಿಗಳಿಗೆ ನಾಗರಿಕ ನ್ಯಾಯಾಲಯ ಮತ್ತು 4.5 ದಶಲಕ್ಷ ಫೆಲೆಸ್ತೀನಿಯರಿಗೆ ಸೇನಾ ನ್ಯಾಯಾಲಯ. ಸೇನಾ ನ್ಯಾಯಾಲಯದಲ್ಲಿ ಶೇ. 99.74ರಷ್ಟು ಅಪರಾಧ ಸಾಬೀತಾಗುತ್ತದೆ.
37. ಇಸ್ರೇಲಿ ಮಿಲಿಟರಿ ಒಪಿಟಿಯಲ್ಲಿ ಫೆಲೆಸ್ತೀನಿಯರನ್ನು ಬಂಧಿಸಿ ಆರೋಪ ಅಥವಾ ವಿಚಾರಣೆಯಿಲ್ಲದೆ ಆರು ತಿಂಗಳ ಕಾಲ ಜೈಲಿಗಟ್ಟುತ್ತದೆ.ಅಂತಹ 715 ಕೈದಿಗಳಿದ್ದಾರೆ. ಒಟ್ಟು 7000 ಫೆಲೆಸ್ತೀನಿಯರು ಜೈಲಿನಲ್ಲಿದ್ದಾರೆ.
38. 1968ರಿಂದ ಇಸ್ರೇಲಿ ಅಧಿಕಾರಿಗಳು ನೂರಾರು ಫೆಲೆಸ್ತೀನಿಯನ್ನರ ಮನೆ ನಾಶ ಮಾಡಿ ಸಾಮೂಹಿಕ ಶಿಕ್ಷೆ ವಿಧಿಸಿದೆ.
39. ಬಹುತೇಕ ಫೆಲೆಸ್ತೀನಿ ನಿರ್ಮಾಣಗಳನ್ನು ಇಸ್ರೇಲಿ ಪಡೆಗಳು ಪರವಾನಿಗೆ ಇಲ್ಲವೆಂದು ನಿರ್ಮೂಲನೆ ಮಾಡಿದೆ. ಅಲ್ಲದೆ, ಶೇ. 95ರಷ್ಟು ಫೆಲೆಸ್ತೀನಿಯನ್ನರ ಪರವಾನಿಗೆ ಅರ್ಜಿಗಳು ನಿರಾಕರಿಸಲ್ಪಟ್ಟಿವೆ.
40. 2016ರಲ್ಲಿ ಜೂನ್‌ವರೆಗೆ ಇಸ್ರೇಲಿ ಸೇನಾಧಿಕಾರಿಗಳು 625 ಫೆಲೆಸ್ತೀನಿ ಕಟ್ಟಡಗಳನ್ನು ನಾಶ ಮಾಡಿದ್ದಾರೆ.
41. ಫಸ್ಟ್ ಇಂಟಿಫಡಾ (1987-93)ರಲ್ಲಿ ಇಸ್ರೇಲಿ ಪಡೆಗಳು 1000ಕ್ಕೂ ಅಧಿಕ ಫೆಲೆಸ್ತೀನಿಯನ್ನರನ್ನು ಕೊಂದುಹಾಕಿದೆ. ಅವರಲ್ಲಿ ಐದು ಮಂದಿಯಲ್ಲಿ ಒಬ್ಬರು ಮಕ್ಕಳಾಗಿದ್ದಾರೆ.
42. ಸೆಕೆಂಡ್ ಇಂಟಿಫಡಾದ ಮೊದಲ ಕೆಲವು ದಿನಗಳಲ್ಲಿ ಇಸ್ರೇಲಿ ಸೇನೆ 1.3 ದಶಲಕ್ಷ ಗುಂಡುಗಳನ್ನು ಸಿಡಿಸಿದೆ.
43. 2006-2014ರ ನಡುವಿನ ಆರು ಸೇನಾ ದಾಳಿಯಲ್ಲಿ ಇಸ್ರೇಲ್ 1,097 ಫೆಲೆಸ್ತೀನಿ ಮಕ್ಕಳನ್ನು ಗಾಝಾ ಪಟ್ಟಿಯಲ್ಲಿ ಕೊಲೆ ಮಾಡಿದೆ.
44. ಇಸ್ರೇಲಿ ಆಕ್ರಮಿತ ಪಡೆಗಳು ವೆಸ್ಟ್ ಬ್ಯಾಂಕಲ್ಲಿ 2015ರಲ್ಲಿ 137 ಫೆಲೆಸ್ತೀನಿಯರು ಮತ್ತು 2014ರಲ್ಲಿ 56 ಫೆಲೆಸ್ತೀನಿಯರನ್ನು ಕೊಲೆ ಮಾಡಿದೆ. ಅದೇ ಎರಡು ವರ್ಷಗಳ ಅವಧಿಯಲ್ಲಿ ಇಸ್ರೇಲಿ ಪಡೆಗಳು 19,950 ಫೆಲೆಸ್ತೀನಿಯನ್ನರನ್ನು ವೆಸ್ಟ್ ಬ್ಯಾಂಕಲ್ಲಿ ಗಾಯಗೊಳಿಸಿದ್ದಾರೆ.
45. 1990ರ ಮಧ್ಯಭಾಗದಲ್ಲಿ ಸಹಿ ಮಾಡಿದ ಓಸ್ಲೋ ಒಪ್ಪಂದದ ಪ್ರಕಾರ ಒಪಿಟಿಯ ಕೆಲ ಭಾಗದಲ್ಲಿ ಫೆಲೆಸ್ತೀನಿ ಅಧಿಕಾರವನ್ನು ಒಪ್ಪಿಕೊಂಡಿದೆ.
46. ಈ ಒಪ್ಪಂದವು ಒಪಿಟಿಯನ್ನು ಎ, ಬಿ ಮತ್ತು ಸಿ ಎಂದು ವಿಭಜಿಸಿದೆ. ಪ್ರಾಂತದ ಭಾಗಗಳಾದ ಎ ಮತ್ತು ಬಿ ಭಾಗವು ವಿಷಮಯವಾಗಿಲ್ಲ ಮತ್ತು 227 ಪ್ರತ್ಯೇಕ ಭಾಗಗಳು ವಿಭಿನ್ನ ಫೆಲೆಸ್ತೀನಿ ನಿಯಂತ್ರಣದಲ್ಲಿದೆ.
47. ವೆಸ್ಟ್ ಬ್ಯಾಂಕ್‌ನ ಶೇ. 60 ಭಾಗವು ಪೂರ್ಣ ಇಸ್ರೇಲಿ ಸೇನೆ ಮತ್ತು ನಾಗರಿಕ ನಿಯಂತ್ರಣದಲ್ಲಿದೆ. ಆದರೆ ವೆಸ್ಟ್ ಬ್ಯಾಂಕ್‌ನ ಉಳಿದ ಭಾಗದಲ್ಲಿ ಇಸ್ರೇಲಿ ಸೇನೆ ಮನಬಂದಂತೆ ದಾಳಿ ಮಾಡುತ್ತದೆ.
48. ಮಾನವ ಹಕ್ಕು ಕಾವಲುಪಡೆಯ ಪ್ರಕಾರ ಫೆಲೆಸ್ತೀನಿಯನ್ನರು ವ್ಯವಸ್ಥಿತ ತಾರತಮ್ಯವನ್ನು ತಮ್ಮ ವರ್ಗ, ಜನಾಂಗ ಮತ್ತು ರಾಷ್ಟ್ರೀಯ ಮೂಲದಲ್ಲಿ ಅನುಭವಿಸುತ್ತಾರೆ ಎಂದು ಅಮ್ನೆಸ್ಟಿ ಇಂಟರ್ ನ್ಯಾಶನಲ್ ಹೇಳಿದೆ.
49. 2012ರಲ್ಲಿ ವರ್ಗೀಯ ತಾರತಮ್ಯ ನಿವಾರಿಸುವ ನಿಟ್ಟಿನಲ್ಲಿ ವಿಶ್ವಸಂಸ್ಥೆ ಆಯೋಗವು ಹೇಳಿರುವ ಪ್ರಕಾರ,ಒಪಿಟಿಯಲ್ಲಿ ಇಸ್ರೇಲಿ ನೀತಿಗಳು ಜನಾಂಗೀಯ ಏಕತೆ ಮತ್ತು ವರ್ಣಭೇದ ನಿಷೇಧ ನಿಯಮವನ್ನು ಉಲ್ಲಂಘಿಸಿದೆ.