ಪಾಕಿಸ್ತಾನದ ಗ್ರಾಮದಲ್ಲಿ ಚರ್ಚ್ ನಿರ್ಮಿಸಿಕೊಡುತ್ತಿರುವ ಮುಸ್ಲಿಮರು
ಸದಾ ಕೆಟ್ಟ ಕಾರಣಗಳಿಗೆ ಸುದ್ದಿಯಲ್ಲಿರುವ ಪಾಕಿಸ್ತಾನದ ಪಂಜಾಬ್ ನಿಂದ ಒಂದು ಶುಭ ಸುದ್ದಿ ಬಂದಿದೆ. ಇಲ್ಲಿನ ಬಹುಪಾಲು ಬಡ ಮುಸ್ಲಿಮರು ತಮ್ಮ ಅಲ್ಪಸ್ವಲ್ಪ ಉಳಿತಾಯವನ್ನು ಸೇರಿಸಿ ತಮ್ಮ ಕ್ರೈಸ್ತ ಸೋದರರಿಗೆ ಚರ್ಚ್ ನಿರ್ಮಿಸಿಕೊಡಲು ಮುಂದಾಗಿದ್ದಾರೆ.
ಇಲ್ಲಿನ ಗೋಜ್ರಾ ಗ್ರಾಮದಲ್ಲಿರುವ ಬಡ ಮುಸ್ಲಿಮ್ ರೈತರು ಒಗ್ಗಟ್ಟಾಗಿ ತಮ್ಮ ಉಳಿತಾಯದಲ್ಲಿ ತಮ್ಮ ನೆರಹೊರೆಯ ಕ್ರಿಶ್ಚಿಯನ್ ಚರ್ಚ್ ಪುನರ್‌ನಿರ್ಮಾಣದಲ್ಲಿ ನೆರವಾಗುತ್ತಿದ್ದಾರೆ .ಇದು ಹಿಂಸಾಚಾರ ಪೀಡಿತ ಪಂಜಾಬಿ ಪ್ರಾಂತ್ಯದಲ್ಲಿ ಕೋಮು ಸಾಮರಸ್ಯದ ವಿಶಿಷ್ಟ ನಿದರ್ಶನವಾಗಿದೆ.
"ಗೋಜ್ರಾ ಹಿಂಸಾಚಾರ ಘಟನೆ ನಡೆದ ಬಳಿಕ ನಾವೆಲ್ಲರೂ ಒಗ್ಗಟ್ಟಾಗುವ ಪ್ರಯತ್ನವನ್ನು ಮಾಡುತ್ತಿದೇವೆ .ಚರ್ಚ್ ನಿರ್ಮಿಸುವುದರ ಮೂಲಕ ನಾವೊಂದು ಸಮುದಾಯವಾಗಿ ಐಕ್ಯತೆಯಿಂದ ಕೂಡಿದ್ದೇವೆ ಎಂದು ತೋರಿಸುತ್ತೀದ್ದೇವೆ " ಎಂದು ಇಲ್ಲಿನ ಇಜಾಝ್ ಫಾರೂಕ್ ಹೇಳಿದ್ದಾರೆ.
"ಬಾಲ್ಯದಿಂದಲೇ ನಾವು ಈ ಗ್ರಾಮದಲ್ಲಿ ನಾವು ಸೌಹಾರ್ದಯುತವಾಗಿ ಜೀವಿಸುತ್ತಿದ್ದು, ಪ್ರತಿಯೊರ್ವರು ಪ್ರೀತಿ ,ವಿಶ್ವಾಸದೊಂದಿಗೆ ,ಹಬ್ಬಹರಿದಿನಗಳು ಮತ್ತು ಮದುವೆ ಕಾರ್ಯಕ್ರಮಗಳಿಗೆ ಪಾಲ್ಗೊಳ್ಳುವುದರ ಮೂಲಕ ಸಾಮರಸ್ಯದ ಜೀವನ ನಡೆಸುತ್ತಿದ್ದೇವೆ " ಎಂದು ಫಾರಿಯಲ್ ಮಸ್ಯಯೀ ಹೇಳಿದ್ದಾರೆ.
ಈ ಪುಟ್ಟ ಗ್ರಾಮದಲ್ಲಿ ಮುಸ್ಲಿಮರು ಚರ್ಚ್ ನಿರ್ಮಾಣದಲ್ಲಿ ನೆರವಾಗುತ್ತಿರುವುದು ಅತ್ಯಂತ ಗಮನಾರ್ಹ ವಿಚಾರ .ಐಕ್ಯದಿಂದ ಬಾಳಬೇಕೆಂಬ ಜನರ ಹೃದಯವನ್ನು ಅವರು ಗೆದ್ದಿದ್ದಾರೆ ಎಂದು ಹೇಳುತ್ತಾರೆ ಸ್ಥಳೀಯ ಕ್ರೈಸ್ತ ಪಾದ್ರಿ ಫಾದರ್ ಅಫ್ತಾಬ್ ಜೇಮ್ಸ್ . 2009ರಲ್ಲಿ ನಡೆದ ಗೋಜ್ರಾ ಹಿಂಸಾಚಾರದಲ್ಲಿ ಅಲ್ಪಸಂಖ್ಯಾತ ಸಮುದಾಯದ ಕ್ರೈಸ್ತರ ಮನೆ, ಚರ್ಚ್‌ಗಳ ದ್ವಂಸಗೊಳಿಸಿ, 10 ಮಂದಿ ಕ್ರೈಸ್ತ ಜನರು ಈ ಗಲಭೆಯಲ್ಲಿ ಅಸುನೀಗಿದ್ದರು.ಈ ಘಟನೆಯನ್ನು ಇಂದಿಗೂ ಯಾರು ಕೂಡ ಮರೆಯಲ್ಲಿಲ ಇದೀಗ ಗೋಜ್ರಾ ಗ್ರಾಮದ ಮುಸ್ಲಿಮರು ಕ್ರೈಸ್ತರ ದೇವಾಲಯದ ನಿರ್ಮಾಣ ಕಾರ್ಯದಲ್ಲಿ ಕೈಜೋಡಿಸಿರುವುದು ಅಲ್ಲಿನ ಗ್ರಾಮಸ್ಥರಿಗೆ ಖುಷಿಯನ್ನುಂಟು ಮಾಡಿದೆ.