ಪಿಳ್ಳೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ವಿ.ಎಸ್ ಅಚ್ಯುತಾನಂದನ್
ತಿರುವನಂತಪುರಂ, ಜೂನ್ 15: ಕೊಟ್ಟಾರಕರ ವಾಳಗಂ ಆರ್‌ವಿವಿಎಚ್‌ಎಸ್ ಮ್ಯಾನೇಜರ್ ಆಗಿ ಮುಂದುವರಿಯಲು ಮಾಜಿ ಸಚಿವ ಆರ್. ಬಾಲಕೃಷ್ಣ ಪಿಳ್ಳೆಯವರ ಯೋಗ್ಯತೆಯನ್ನು ಪರಿಶೀಲಿಸಬೇಕೆಂದು ವಿಎಸ್ ಅಚ್ಯುತಾನಂದನ್ ಸರಕಾರವನ್ನು ಆಗ್ರಹಿಸಿದ್ದಾರೆ. ಪಿಳ್ಳೆ ಮ್ಯಾನೇಜರ್ ಆಗಿರುವ ಶಾಲೆಯಿಂದ ಸಸ್ಪೆಂಡ್ ಮಾಡಲಾದ ಅಧ್ಯಾಪಕ ದಂಪತಿಯಾದ ಕೃಷ್ಣಕುಮಾರ್ ಮತ್ತು ಗೀತಾರನ್ನು ಸೇವೆಗೆ ಮರಳಿ ಕರೆಯಿಸಿಕೊಳ್ಳಬೇಕೆಂದು ಆಗ್ರಹಿಸಿ ಅವರು ಶಿಕ್ಷಣ ಸಚಿವರಿಗೆ ಪತ್ರಬರೆದು ತಿಳಿಸಿದ್ದಾರೆ. ಆದರೆ ಮಾಧ್ಯಮಗಳಿಗೆ ನೀಡಿದ್ದ ಹೇಳಿಕೆಯಲ್ಲಿ ಆರ್.ಬಾಲಕೃಷ್ಣ ಪಿಳ್ಳೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದನ್ನು ತೆಗೆದು ಹಾಕಿದ್ದಾರೆ.
ಆರ್. ಬಾಲಕೃಷ್ಣಪಿಳ್ಳೆ ತನ್ನ ಪೂರ್ವದ್ವೇಷ ಮತ್ತು ಹಗೆತನವನ್ನು ತೀರಿಸಲಿಕ್ಕಾಗಿ ಮ್ಯಾನೇಜರ್ ಹುದ್ದೆಯನ್ನು ದುರುಪಯೋಗಿಸಿದ್ದಾರೆಂದು ವಿಎಸ್ ಪತ್ರದಲ್ಲಿ ಸರಕಾರಕ್ಕೆ ಬೆಟ್ಟು ಮಾಡಿ ತೋರಿಸಿದ್ದಾರೆ. ಆದರೆ ಬಾಲಕೃಷ್ಣ ಪಿಳ್ಳೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದೆ ಎಂಬ ಭಾಗವನ್ನು ತನ್ನ ಕಚೇರಿಯಿಂದ ಪತ್ರಕರ್ತರಿಗೆ ನೀಡಿದ ಹೇಳಿಕೆಯಲ್ಲಿ ಸೇರಿಸಿಲ್ಲ.