ಪ್ರತೀದಿನ 10,000 ಊಟ ತಯಾರಿಸುವ ನೋಯ್ಡಾದ ರೈಲ್ವೇಯ ಅತ್ಯಾಧುನಿಕ ಅಡುಗೆ ಮನೆ ನೋಡಿ

Update: 2016-06-16 16:41 GMT

ಭಾರತೀಯ ರೈಲ್ವೇ ಆಹಾರಕ್ಕೆ ಬಹಳ ಕೆಟ್ಟ ಹೆಸರಿದೆ. ಆದರೆ ಭಾರತೀಯ ರೈಲ್ವೇ ಕ್ಯಾಟರಿಂಗ್ ಮತ್ತು ಟೂರಿಸಂ ಮಂಡಳಿಯಲ್ಲಿ ಅಂತಾರಾಷ್ಟ್ರೀಯವಾಗಿ ತರಬೇತು ಪಡೆದ ಮೂರು ಪಂಚತಾರಾ ಅಡುಗೆಯಾಳುಗಳು ಮತ್ತು ಹೋಟೆಲ್ ತಜ್ಞರು ಈ ಗ್ರಹಿಕೆಯನ್ನು ಬದಲಿಸಲು ಕಠಿಣ ಶ್ರಮ ಹಾಕುತ್ತಿದ್ದಾರೆ.

ಅತೀ ದೊಡ್ಡ ಸುಳ್ಳು ನಂಬಿಕೆ ಎಂದರೆ  ಐಆರ್‌ಸಿಟಿಸಿಯೇ ಇಡೀ ರೈಲ್ವೇ ಆಹಾರ ಉದ್ಯಮವನ್ನು ನೋಡಿಕೊಳ್ಳುತ್ತದೆ ಎನ್ನುವುದು. 2010ರ ನೀತಿಯ ನಂತರ ನಾವು ಕೇವಲ ಐದು ರೈಲುಗಳಿಗೆ ಮಾತ್ರ ಆಹಾರ ತಯಾರಿಸುತ್ತೇವೆ ಎನ್ನುವುದು ಜನರಿಗೆ ಗೊತ್ತಿಲ್ಲ. ಹಾಗಿದ್ದರೂ ಆರೋಪಗಳೆಲ್ಲವೂ ನಮ್ಮ ಮೇಲೆಯೇ ಬರುತ್ತವೆ ಎನ್ನುತ್ತಾರೆ ಐಆರ್‌ಸಿಟಿಸಿಯ ಅಪರೇಶನ್ ಮತ್ತು ಲಾಜಿಸ್ಟಿಕ್ಸ್ ಮ್ಯಾನೇಜರ್ ಸುಮೇಶ್ ಸುರೇಂದ್ರನ್.

ನೋಯ್ಡಾದಲ್ಲಿರುವ ತಮ್ಮ ಬಹುಮಹಡಿಯ ಕೇಂದ್ರೀಯ ಅಡುಗೆ ಮನೆಗೆ ಅವರು ನಮ್ಮನ್ನು ಕರೆದೊಯ್ದರು. ಈ ಅಡುಗೆಮನೆಯಲ್ಲಿ ಎಲ್ಲಾ ಅತ್ಯಾಧುನಿಕ ಸಲಕರಣೆಗಳಿವೆ. ಫ್ರಾನ್ಸ್, ಇಟಲಿ, ಜರ್ಮನಿ ಮತ್ತು ಫಿನ್‌ಲ್ಯಾಂಡ್‌ನಿಂದ ತಂದಿರುವ ಸಲಕರಣೆಗಳಿವು. ವಿಭಿನ್ನ ಆಹಾರಗಳಿಗೆ ವಿಶೇಷ ವಿಭಾಗಗಳಿವೆ. ಆರೋಗ್ಯದ ಮಟ್ಟವನ್ನು ಮತ್ತು ಪ್ರಯೋಗಾಲಯದ ಪರೀಕ್ಷೆಯನ್ನು ಇಲ್ಲಿ ಮಾಡಿದ ಮೇಲೆಯೇ ಅಂತಿಮ ಆಹಾರ ಸಿದ್ಧವಾಗುತ್ತದೆ. ನಮ್ಮ ಉದ್ದೇಶ ಆರೋಗ್ಯಕರ ಆಹಾರವನ್ನು ಪ್ರಯಾಣಿಕರಿಗೆ ನೀಡಿ ಅವರನ್ನು ತೃಪ್ತಿಪಡಿಸುವುದು ಎನ್ನುತ್ತಾರೆ ಅಡುಗೆ ನೇತೃತ್ವ ವಹಿಸಿರುವ ಮ್ಯಾನೇಜರ್ ರಾಜೇಶ್ ಕುಮಾರ್.

ಇದಕ್ಕೆ ಸಾಕ್ಷಿ 10,000 ಸ್ನಾಕ್ಸ್ ಮತ್ತು ಊಟವನ್ನು ಪ್ರತೀ ನಿತ್ಯ ತಯಾರಿಸುವ ಪ್ರಕ್ರಿಯೆಯಲ್ಲಿದೆ. ಅದರಲ್ಲಿ ಪಾಟ್ನಾ, ಹೌರಾ, ಮುಂಬೈ, ಗೋವಾ, ಭುವನೇಶ್ವರ ಮತ್ತು ಸಿಕಂದರಾಬಾದ್ ಮೊದಲಾದ ಹತ್ತು ರಾಜಧಾನಿ ರೈಲುಗಳಿಗೆ ನೀಡುವ ಸ್ನಾಕ್ಸ್ ಕೂಡ ಸೇರಿದೆ. ತಯಾರಿಯು ತಾಜಾವಾಗಿ ಸಂಗ್ರಹಿಸಿಡಲಾದ ತರಕಾರಿಗಳಿಂದ ಆರಂಭವಾಗುತ್ತದೆ. ಅದನ್ನು ನಂತರ ತೊಳೆಯಲಾಗುತ್ತದೆ. ಟೊಮ್ಯಾಟೋಗಳನ್ನು ಸ್ವಚ್ಛ ಮಾಡಿ ಸಂಗ್ರಹಿಸಿಡಲು ಅರ್ಧಗಂಟೆ ಬೇಕು. ಎಲೆ ತರಕಾರಿಗಳಾದ ಪಾಲಕ್ ಮೊದಲಾದವುಗಳನ್ನು ತೊಳೆಯಲು ಇನ್ನಷ್ಟು ಸಮಯ ಹಿಡಿಯುತ್ತದೆ.

ನೆಲದ ಮೇಲೆ ಕತ್ತರಿಸುವುದು, ತುಂಡು ಮಾಡುವುದು, ಪೇಸ್ಟ್ ಮಾಡುವುದು ಮತ್ತು ಬೇಯಿಸುವುದು ಎಲ್ಲವೂ ಅದಕ್ಕಾಗೇ ಇರಿಸಲಾಗಿರುವ ಪ್ರತ್ಯೇಕ ಕೋಣೆಗಳಲ್ಲಿ ನಡೆಯುತ್ತದೆ. ಆಮದು ಮಾಡಿಕೊಂಡಿರುವ ಯಂತ್ರಗಳು 10 ಕಿಲೋ ಈರುಳ್ಳಿಗಳನ್ನು ನಿಮಿಷದೊಳಗೆ ಕತ್ತರಿಸುತ್ತವೆ. ವಿಶಾಲವಾದ ಬ್ರಾಟ್ ಪ್ಯಾನ್ ಗಳು ಸಾಂಬಾರು ತಯಾರಿಸುತ್ತವೆ. ಅವುಗಳಿಗೆ ಏಕರೂಪದ, ಸಮಾನವಾಗಿ ಬೆಂಕಿ ಬರುವಂತೆ ಮಾಡುವುದು ಮತ್ತು ಕಲಡುವುದು ಮಾಡಲಾಗುತ್ತದೆ. ಸಸ್ಯಾಹಾರಿ ಮತ್ತು ಮಾಂಸಾಹಾರಿ ವಿಭಾಗಗಳು ಆವರಣದ ಎರಡೂ ಬದಿಯಲ್ಲಿ ಬೇರೆ ಬೇರೆ ಇರುವ ಕಾರಣ ಮಿಶ್ರಣವಾಗುವುದಿಲ್ಲ.

ಮೆನುವನ್ನು ಮೊದಲೇ ನಿರ್ಧರಿಸಲಾಗುತ್ತದೆ. ಆಹಾರದಲ್ಲಿ ಪನೀರ್ ಅಥವಾ ಕೋಳಿ ಆಹಾರ, ದಾಲ್, ಅನ್ನ, ಚಪಾತಿ, ಮೊಸರು, ಸಲಾಡ್ ಮತ್ತು ಐಸ್ ಕ್ರೀಮ್ ಇರುತ್ತದೆ. ಸುಮಾರು 7,000 ಸ್ನಾಕ್ ಐಟಂಗಳಾದ ಕಚೋರಿ, ಕೋಲ್ಸಾ ಸ್ಯಾಂಡ್ವಿಚ್, ಸಿಹಿ ಮಿಠಾಯಿಗಳಾದ ಗುಲಾಬ್ ಜಾಮೂನು, ಕೋಯಾ ಬರ್ಫಿ, ತೆಂಗಿನಕಾಯಿ ಬರ್ಫಿ ಅಥವಾ ಚಾಕಲೇಟು ಬರ್ಫಿ ಮತ್ತು ಉಪ್ಪು ಹಾಕಿದ ನೆಲಕಡಲೆಗಳನ್ನು ನಿತ್ಯವೂ ತಯಾರಿಸಲಾಗುತ್ತದೆ. ವಿಶೇಷವಾದ ಆಹಾರವನ್ನು ಪ್ರಯೋಗಾಲಯದ ಪರೀಕ್ಷೆಗಾಗಿ ನೀಡಲಾಗುತ್ತದೆ. ಇಲ್ಲಿ ಆಹಾರಗಳನ್ನು ನಿತ್ಯವೂ ಮಲಿನವಾಗದಂತೆ ಪರೀಕ್ಷಿಸಲಾಗುತ್ತದೆ.

ನಮಗೆಲ್ಲರಿಗೂ ಪಂಚತಾರಾ ಹೊಟೇಲುಗಳಲ್ಲಿ ಕೆಲಸ ಮಾಡಿದ ಅನುಭವವಿದೆ. ಹೀಗಾಗಿ ಖಾಸಗಿ ಕ್ಷೇತ್ರದಲ್ಲಿ ಪಡೆದ ಅನುಭವವನ್ನು ಇಲ್ಯಾಕೆ ನಾವು ಬಳಸಿಕೊಳ್ಳಬಾರದು ಎನ್ನುತ್ತಾರೆ ಉಪ ಜನರಲ್ ಮ್ಯಾನೇಜರ್ ರಾಜೇಶ್ ಕುಮಾರ್. ಮುಖ್ಯವಾಗಿ ಇವರ ಅಡುಗೆಗೆ ಶೇ. 1ರಷ್ಟೂ ದೂರು ಬರುವುದಿಲ್ಲ. ಈ ಅಡುಗೆಮನೆ ಸದ್ಯ ನಿತ್ಯವೂ 10,000 ಊಟ ತಯಾರಿಸುತ್ತದೆ. ಇದರ ಸಾಮರ್ಥ್ಯ 25,000 ಊಟದ್ದಾಗಿದೆ. ಅಷ್ಟು ಆಹಾರ ತಯಾರಾದರೆ 25 ರೈಲುಗಳಿಗೆ ಸಾಕಷ್ಟಾಗುತ್ತದೆ. ಇಂತಹ ವ್ಯಾಪಕ ಪ್ರಮಾಣದ ಆಹಾರ ತಯಾರಿಸುವ ಐಆರ್‌ಸಿಟಿಸಿ ರಾಜಧಾನಿಯಿಂದ ಬಿಡುವ ಎಲ್ಲಾ ರೈಲುಗಳಿಗೂ ಆಹಾರ ಒದಗಿಸುವ ಆತ್ಮವಿಶ್ವಾಸ ಹೊಂದಿದೆ. ಇದು ನಿಜಕ್ಕೂ ಬಾಯಲ್ಲಿ ನೀರೂರಿಸುವ ವಿಚಾರ. ಪ್ರಯಾಣಿಕರು ಇದರ ನಿರೀಕ್ಷೆ ಇಡಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News