ಜಗತ್ತಿನ ಅತ್ಯಂತ ದುಬಾರಿ ಟೈರ್ ನ ಬೆಲೆ ಎಷ್ಟು ಕೋಟಿ ಗೊತ್ತೇ?
24 ಕ್ಯಾರೆಟ್ ಚಿನ್ನದಿಂದ ಲೇಪಿತವಾದ ಮತ್ತು ವಿಶೇಷವಾಗಿ ಆರಿಸಿದ ವಜ್ರಖಚಿತ ನಾಲ್ಕು ಟೈರ್ ಗಳನ್ನು ಅನಿವಾಸಿ ಭಾರತೀಯರೊಬ್ಬರ ಕಂಪೆನಿ 4 ಕೋಟಿ ರೂ.ಗೆ ಮಾರಿದೆ. ಕಾರು ಟೈರ್‌ಗಳಲ್ಲೇ ದುಬಾರಿ ಎಂದು ಇದು ಗಿನ್ನಿಸ್ ದಾಖಲೆಗೆ ಸೇರಿದೆ.
ಮೊದಲ ಮತ್ತು ಇಂತಹ ಏಕೈಕ ಟೈರ್ ಆಗಿರುವ ಇದನ್ನು ದುಬೈಯ ಝೆಡ್ ಟೈರ್ಸ್ ಅಭಿವೃದ್ಧಿಪಡಿಸಿದೆ. ಅದನ್ನು ವಿಶ್ವದ ಅತೀ ದುಬಾರಿ ಜ್ಯುವೆಲ್ಲರಿಯಾದ ಇಟಲಿಯ ಆರ್ಟಿಸನ್ ಜ್ಯುವೆಲ್ಲರಿ ದುಬೈನಲ್ಲಿ ವಿನ್ಯಾಸಗೊಳಿಸಿದೆ ಎಂದು ಕಂಪೆನಿಯ ವೆಬ್ ತಾಣ ಹೇಳಿದೆ. ಗೋಲ್ಡ್ ಲೀಫಿಂಗ್ ಅಪ್ಲಿಕೇಶನ್‌ನ್ನು ಯುಎಇಯಲ್ಲಿ ಮಾಡಲಾಗುತ್ತದೆ. ಇವರು ಹಿಂದೆ ಅಬುಧಾಬಿಯ ಹೊಸ ಅರಮನೆ ನಿರ್ಮಾಣದಲ್ಲೂ ಕೆಲಸ ಮಾಡಿದ್ದರು.
ವಿಶ್ವದ ಅತೀ ದುಬಾರಿ ಟೈರ್ ಎಂದೇ ದಾಖಲೆ ಬರೆದಿರುವ ಇದನ್ನು 2.2 ಮಿಲಿಯನ್ ದಿರ್ಹಾಮ್ ಗಳಿಗೆ ದುಬೈನ ರೈಫೆನ್ ಮಾರಾಟ ಉತ್ಸವದಲ್ಲಿ ಮಾರಲಾಗಿದೆ. ಕಂಪೆನಿ ಈ ಹಣವನ್ನು ಝೆನಿಸಸ್ ಫೌಂಡೇಶನಿಗೆ ಕೊಡಲಿದೆ. ನಮ್ಮ ಕೌಶಲ್ಯ ಮತ್ತು ಬದ್ಧತೆಯನ್ನು ಯಾವಾಗಲೂ ಪ್ರಯೋಗಿಸಲು ಪ್ರಯತ್ನಿಸಿದ್ದೇವೆ. ಝೆಡ್ ಟೈರ್ ಶ್ರೇಣಿಯನ್ನು ಅಭಿವೃದ್ಧಿಪಡಿಸುವ ಮೂಲಕ ವಿಶೇಷ ಟೈರ್ ನಿರ್ಮಾಣದಲ್ಲಿ ಹೊಸ ಸಾಧನೆ ಮಾಡುವುದು ನಮ್ಮ ಉದ್ದೇಶವಾಗಿತ್ತು. ಅದಕ್ಕಾಗಿ ವಿಶೇಷ ಖರೀದಿದಾರರೂ ಸಿಕ್ಕಿದ್ದಾರೆ ಎಂದು ಝೆನಿಸೆಸ್ ಸಿಇಒ ಮತ್ತು ಸಂಸ್ಥಾಪಕ ಹರ್ಜೀವ್ ಕಂಧಾರಿ ಹೇಳಿದ್ದಾರೆ.
ರಮಝಾನ್ ಹಬ್ಬದ ಸಂದರ್ಭದಲ್ಲಿ ಝೆಡ್ ಟೈರ್ಸ್ ಇದರಿಂದ ಬಂದ 6 ಲಕ್ಷ ಅಮೆರಿಕನ್ ಡಾಲರ್ ಲಾಭವನ್ನು ಜೆನಿಸಸ್ ಫೌಂಡೇಶನ್‌ಗೆ ಕೊಡಲು ನಿರ್ಧರಿಸಿದೆ. ಅದು ಜಾಗತಿಕವಾಗಿ ಶಿಕ್ಷಣ ಸುಧಾರಣೆಗೆ ಕೆಲಸ ಮಾಡುತ್ತದೆ ಎಂದೂ ಅವರು ಹೇಳಿದ್ದಾರೆ.