×
Ad

ವಿಶ್ವಸಂಸ್ಥೆಯಲ್ಲಿ 2 ದಿನಗಳ ಯೋಗ ದಿನಾಚರಣೆ

Update: 2016-06-18 23:49 IST

ವಿಶ್ವಸಂಸ್ಥೆ, ಜೂ. 18: ಅಂತಾರಾಷ್ಟ್ರೀಯ ಯೋಗ ದಿನವನ್ನು ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಎರಡು ದಿನಗಳ ಕಾಲ ಆಚರಿಸಲಾಗುವುದು.

ಯೋಗ ದಿನವಾದ ಜೂನ್ 21ರಂದು ‘ಸದ್ಗುರು’ ಜಗ್ಗಿ ವಾಸುದೇವ ವಿಶ್ವಸಂಸ್ಥೆಯ ಕಟ್ಟಡದ ಮುಂಭಾಗದ ವೃತ್ತದಲ್ಲಿ ನಡೆಯಲಿರುವ ಸಮಾರಂಭದ ನೇತೃತ್ವವನ್ನು ವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ ಸರಳ ಯೋಗ ಕಸರತ್ತು ಮತ್ತು ಯೋಗ ಘೋಷಣೆಗಳನ್ನು ನಡೆಸಿಕೊಡಲಿದ್ದಾರೆ.

ಜನರಲ್ ಅಸೆಂಬ್ಲಿ ಅಧ್ಯಕ್ಷ ಮೋರ್ಗನ್ಸ್ ಲೈಕೆಟೋಫ್ಟ್ ಮುಖ್ಯ ಅತಿಥಿಯಾಗಲಿದ್ದಾರೆ ಹಾಗೂ ಸಂಪರ್ಕ ಮತ್ತು ಸಾರ್ವಜನಿಕ ಮಾಹಿತಿಯ ಅಧೀನ ಕಾರ್ಯದರ್ಶಿ ಕ್ರಿಸ್ಟೀನಾ ಗ್ಯಾಲಕ್ ಪ್ರಧಾನ ಭಾಷಣ ಮಾಡಲಿದ್ದಾರೆ.

ಮುನ್ನಾ ದಿನವಾದ ಜೂನ್ 20ರಂದು, ಯೋಗವು ಸಹ್ಯ ಅಭಿವೃದ್ಧಿ ಗುರಿಯನ್ನು ಹೇಗೆ ಸಾಧಿಸಬಹುದು ಎಂಬ ಬಗ್ಗೆ ವಿಶ್ವಸಂಸ್ಥೆಯಲ್ಲಿ ವಿಚಾರಸಂಕಿರಣವೊಂದು ನಡೆಯಲಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News