ಬ್ರೆಝಿಲ್‌ನಲ್ಲಿ ಆರ್ಥಿಕ ತುರ್ತು ಪರಿಸ್ಥಿತಿ ಘೋಷಣೆ: ಒಲಿಂಪಿಕ್ಸ್ ಮೇಲೆ ಕರಿನೆರಳಾಗಲಿದೆಯೇ?

Update: 2016-06-19 05:42 GMT

ರಿಯೊಡಿ ಜನೈರೊ, ಜೂನ್ 19: ಆಗಸ್ಟ್ ಐದಕ್ಕೆ ಒಲಿಂಪಿಕ್ಸ್ ಆರಂಭವಾಗಲಿರುವಂತೆ ಗವರ್ನರ್ ಆರ್ಥಿಕ ತುರ್ತುಪರಿಸ್ಥಿತಿಯನ್ನು ಘೋಷಿಸಿದ್ದಾರೆ. ಒಲಿಂಪಿಕ್ಸ್ ಗೆ ಪೂರ್ವಭಾವಿಯಾಗಿ ನಡೆಸಬೇಕಾದ ಕೆಲಸಗಳಿಗೆ ಸರಕಾರ ಹಣವನ್ನು ಕೊಡಬೇಕೆಂದು ಗವರ್ನರ್ ಹೇಳಿದ್ದಾರೆ. ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಕುಸಿತ ಆರ್ಥಿಕ ಬಿಕ್ಕಟ್ಟು ಸೃಷ್ಟಿಸಿದೆ. ಇದರ ಆಧಾರದಲ್ಲಿ ಪೂರ್ವಸಿದ್ಧತೆಗಳನ್ನು ಏರ್ಪಡಿಸಲಾಗಿದೆ ಎಂದು ಬ್ರೆಝಿಲ್‌ನ ಪ್ರಭಾರ ಅಧ್ಯಕ್ಷ ಮೈಕಲ್ ಟೆಮರ್ ಹೇಳಿದ್ದಾರೆ.

   ರಿಯೊಜನೈರೊಕ್ಕೆ ಒಲಿಂಪಿಕ್ಸ್‌ಗೆ ಐದು ಲಕ್ಷ ವಿದೇಶಿ ಸಂದರ್ಶಕರು ಬರುವ ನಿರೀಕ್ಷೆಯಿದೆ. ಆರ್ಥಿಕ ತುರ್ತುಪರಿಸ್ಥಿತಿ ಘೋಷಿಸಿದ ಹಿನ್ನೆಲೆಯಲ್ಲಿ ಒಲಿಂಪಿಕ್ಸ್‌ನ್ನು ಬ್ರೆಝಿಲ್ ಹೇಗೆ ಸಂಘಟಿಸುತ್ತದೆ ಎಂದು ಜಾಗತಿಕ ರಾಷ್ಟ್ರಗಳಿಗೆ ಅನುಮಾನ ಕಾಡುತ್ತಿದೆ.ಅಧ್ಯಕ್ಷೆ ದಿಲ್ಮಾರೌಸೆಫ್‌ರನ್ನು ದೋಷಾರೋಪಣೆ ಮಾಡಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿದ ನಂತರ ಅಲ್ಲಿ ತಲೆದೋರಿರುವ ರಾಜಕೀಯ ಬಿಕ್ಕಟ್ಟಿನೊಂದಿಗೆ ಈಗಿನ ಆರ್ಥಿಕ ಬಿಕ್ಕಟ್ಟು ಕೂಡಾ ಬ್ರೆಝಿಲ್‌ನ್ನು ತಲೆನೋವಾಗಿ ಕಾಡತೊಡಗಿದೆ. ಕಳೆದ ವರ್ಷದ ಆರಂಭದಲ್ಲೇ ಬ್ರೆಝಿಲ್‌ನಲ್ಲಿ ಆರ್ಥಿಕ ಮಾಂದ್ಯ ಕಂಡುಬಂದಿತ್ತು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News