×
Ad

ತಿಳಿಯಿರಿ ಭಾರತದ ಚೋರ್ ಬಜಾರುಗಳ ಬಗ್ಗೆ.

Update: 2016-06-20 12:10 IST

ಜಲಂಧರ್, ಜೂನ್ 20: ನಮ್ಮ ದೇಶದಲ್ಲಿ ಹಲವು ರೀತಿಯ ಬಜಾರ್‌ಗಳಿವೆ. ಈವರೆಗೆ ಭಾರತದ ಅಗ್ಗದ ಮಾರುಕಟ್ಟೆಯ ಬಗ್ಗೆ ತಿಳಿದಿರಬಹುದು. ನಾವಿಂದು ನಿಮಗೆ ದೇಶದ ದೊಡ್ಡದಾದ ಐದು ಚೋರ್‌ಬಜಾರ್‌ನ ಬಗ್ಗೆ ತಿಳಿಸಲಿದ್ದೇವೆ. ಅಲ್ಲಿ ಕಳ್ಳತನದ ಮಾಲು ಸಿಗುತ್ತವೆ. ಇಲ್ಲಿ ಕಳ್ಳತನದ ವಸ್ತು ಮಾತ್ರವಲ್ಲ ಕಂಪೆನಿಗಳಿಂದ ಹೊರತಂದ ಡಿಫೆಕ್ಟೆಡ್ ವಸ್ತುಗಳು ಕೂಡ ಕಡಿಮೆ ಬೆಲೆಗೆ ಸಿಗುತ್ತದೆ.

ಭಾರತದ ಪ್ರಸಿದ್ಧ ಐದು ಚೋರ್‌ ಬಜಾರ್‌ಗಳು-

ಮಟನ್‌ವಾಲಿ ಗಲ್ಲಿ, ಮುಂಬೈ:

ಮುಂಬೈ ಮಟನ್‌ಸ್ಟ್ರೀಟ್ ಮುಹಮ್ಮದ್ ಅಲಿ ರಸ್ತೆಯ ಸುಪ್ರಸಿದ್ಧ ಚೋರ್ ಬಜಾರ್ ಆಗಿದೆ. ಇದು ದೇಶದ ಇತರೆಲ್ಲ ಬಜಾರುಗಳಿಗಿಂತ ದೊಡ್ಡದು. ಇದಕ್ಕೆ 150 ವರ್ಷಗಳ ಇತಿಹಾಸ ಇದೆ. ಇದನ್ನು ಮೊದಲು ಶೋರ್ ಬಜಾರ್ ಎಂದು ಕರೆಯುತ್ತಿದ್ದರು. ಆದರೆ ಇಂಗ್ಲಿಷರು ತಪ್ಪು ಉಚ್ಚರಣೆಯಿಂದ ಇದು ಚೋರ್ ಬಜಾರ್ ಆಯಿತು. ಇದರ ಹೊಸ ಹೆಸರಿನ ಸಂಪೂರ್ಣ ಪ್ರಭಾವ ಕಂಡು ಬಂದಿತು. ಇದೀಗ ಕಳ್ಳರು ಮಾರಿದ ವಸ್ತುಗಳ ಬಹುದೊಡ್ಡ ಅಡ್ಡೆಯೆನಿಸಿದೆ. ಇಲ್ಲಿ ನೀವು ಎಲ್ಲ ರೀತಿಯ ವಸ್ತುಗಳನ್ನು ಖರೀದಿಸಬಹುದು. ಅದು ಕೂಡಾ ಕಡಿಮೆ ಬೆಲೆಯಲ್ಲಿ.

ಚಾಂದ್‌ನಿ ಚೌಕ್, ಹಳೆ ದಿಲ್ಲಿ:

ಹಳೆದಿಲ್ಲಿಯ ಚಾಂದ್‌ನಿ ಚೌಕ್ ತನ್ನಂತಾನೆ ಅದೊಂದು ಜಗತ್ತೇ ಆಗಿದೆ. ಇಲ್ಲಿನ ಗಲ್ಲಿಗಳಲ್ಲಿ ನೀವು ಖರೀದಿಸಲು ಬಯಸುವ ಪ್ರತಿಯೊಂದು ರೀತಿಯ ವಸ್ತು ದೊರಯಬಹುದು. ಮೊದಲು ಇದು ಸಂಡೆ ಮಾರ್ಕೆಟ್‌ರೀತಿ ಕೆಂಪು ಕೋಟೆಯ ಹಿಂಬದಿಯಲ್ಲಿ ಇದ್ದಿತ್ತು. ಈಗ ಅದು ದರಿಯಾಗಂಜ್‌ನಲ್ಲಿ ನಾವೆಲ್ಟಿ ಹಾಗೂ ಜಾಮಾ ಮಸೀದಿಯ ಸಮೀಪ ಇದೆ. ಇದು ಮುಂಬೈಗಿಂತ ಭಿನ್ನ. ಇದನ್ನು “ಕಾಬಾಡಿ ಬಜಾರ್” ಎಂದು ಹೇಳಲಾಗುತ್ತದೆ. ಈ ಸ್ಥಳ ಬಟ್ಟೆ ಮತ್ತು ಹಾರ್ಡ್‌ವೇರ್ ವಸ್ತುಗಳಿಗೆ ಸುಪ್ರಸಿದ್ಧವಾಗಿದೆ. ಜೊತೆಗೆ ತಾವು ಖರೀದಿಸ ಬಯಸುವ ಎಲ್ಲ ರೀತಿಯ ಸಾಮಾನು ಇಲ್ಲಿ ಲಭ್ಯವಿದೆ.

ಪುದುಪೇಟ್ ಮಾರ್ಕೆಟ್,ಚೆನ್ನೈ:

ದಕ್ಷಿಣದಲ್ಲಿ ಇದು ಆಟೊಮೊಬೈಲ್ ಪ್ರಿಯರಿಗೆ ಇದು ಅತ್ಯುತ್ತಮ ಸ್ಥಳವಾಗಿದೆ. ಇಲ್ಲಿ ನಿಮಗೆ ಸ್ಪೇರ್ ಪಾರ್ಟ್ಸ್‌ನಿಂದ ಹಿಡಿದು ಅಸೆಂಬ್ಲ್‌ಡ್ ಹಾಗೂ ಕಾಸ್ಟಮೈಸ್ಡ್ ವಾಹನಗಳೂ ಸಿಗುತ್ತವೆ.ಇಲ್ಲಿನ ವ್ಯಾಪಾರಿಗಳು ವಿದೇಶಗಳಿಂದಲೂ ಸಾಮಾನು ತರಿಸಿಕೊಳ್ಳುವಷ್ಟು ಸಮರ್ಥರಿದ್ದಾರೆ. ಈ ಜಾಗ ನೋಡಲು ಬಾಲಿವುಡ್ ಸಿನೆಮಾಗಳಲ್ಲಿ ಕಂಡುಬರುವ ಕದ್ದು ಮಾರುವ ವಾಹನಗಳ ಬಜಾರಿನಂತೆ ಕಂಡು ಬರುತ್ತದೆ.

ಚಿಕ್ಕಪೇಟೆ ಮಾರ್ಕೆಟ್, ಬೆಂಗಳೂರು

ಇದು ಬೆಂಗಳೂರಿನ ತುಂಬ ಕಡಿಮೆ ಪರಿಚಿತವಾಗಿರುವ ಜಾಗವಾಗಿದೆ. ಆದರೆ ಬೆಂಗಳೂರಿನ ಬಹಳ ಹಳೆಯ ಕಮರ್ಶಿಯಲ್ ಹಬ್ ಆಗಿದೆ. ರವಿವಾರ ಇಲ್ಲಿ ವಿದೇಶಿ ಕಂಪೆನಿಗಳಿಂದ ತಯಾರಾದ ವಸ್ತುಗಳು ಕೂಡಾ ಬಹಳ ಸುಲಭದಲ್ಲಿ ಸಿಕ್ಕಿಬಿಡುತ್ತವೆ. ಆರಂಭದಲ್ಲಿ ಈ ಜಾರು ರೇಷ್ಮೆ ಸೀರೆಗಳಿಗೆ ಪ್ರಸಿದ್ಧವಾಗಿತ್ತು. ಇದು ರಾಜಕುಟುಂಬದಿಂದ ಪ್ರಸಿದ್ಧವಾಗಿರುತ್ತಿತ್ತು. ಚಿಕ್ಕಪೇಟೆ ಹಳೆಯ ಸಾಮಾಗ್ರಿಗಳು ಬಹಳ ಕಡಿಮೆದರದಲ್ಲಿ ದೊರಕುವ ಸ್ಥಳವಾಗಿದೆ.

ಸೋಗಿ ಗಂಜ್, ಮೀರತ್

ಮೀರತ್‌ನ ಸೋತಿಗಂಜ್ “ಬಜಾರ್ ಚೋರ್ ಬಜಾರ್” ಎಂದು ಪ್ರಸಿದ್ಧವಾಗಿದೆ. ಇಲ್ಲಿ ಗೇರ್, ಪ್ಯೂಯಲ್ ಟ್ಯಾಂಕ್ ಮತ್ತು ಆಟೊಮೊಬೈಲ್‌ಗೆ ಸಂಬಂಧಿಸಿದ ಬಿಡಿಭಾಗಗಳು ಸುಲಭದಲ್ಲಿ ಸಿಕ್ಕಿಬಿಡುತ್ತವೆ. ದಿಲ್ಲಿ ನೋಯ್ಡಾದಿಂದ ಕದ್ದ ಕಾರುಗಳ ಪಾರ್ಟ್ಸ್ ಇಲ್ಲಿಗೆ ತಂದು ಮಾರಲಾಗುತ್ತದೆ. ಮಾರುತಿ 800ನಿಂದ ರೋಲ್ಸ್‌ರಾಯ್ಸ್ ನ ಸ್ಪೇರ್ ಪಾರ್ಟ್ಸ್‌ಗಳೂ ಇಲ್ಲಿ ದೊರಕುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News