ಡೈನೋಸಾರ್‌ಗಳು ಅಳಿಯುವಾಗ 90% ಸಸ್ತನಿ ಪ್ರಭೇದಗಳೂ ನಾಶವಾಗಿದ್ದವು
Update: 2016-06-20 23:55 IST
ಲಂಡನ್, ಜೂ. 20: 6.6 ಕೋಟಿ ವರ್ಷಗಳ ಹಿಂದೆ ಕ್ರೆಟಾಶಿಯಸ್ ಯುಗದಲ್ಲಿ ಡೈನೋಸಾರ್‌ಗಳನ್ನು ಕೊಂದಿದ್ದ ಅದೇ ಕ್ಷುದ್ರ ಗ್ರಹವು ಭೂಮಿಯ ಮೇಲಿದ್ದ ಶೇ. 90 ಸಸ್ತನಿ ಪ್ರಭೇದಗಳನ್ನು ನಾಶಪಡಿಸಿತ್ತು ಎಂದು ನೂತನ ಸಂಶೋಧನೆಯೊಂದು ಹೇಳಿದೆ.
ಇದು ಈ ಹಿಂದೆ ಭಾವಿಸಿದ್ದಕ್ಕಿಂತ ತುಂಬಾ ಹೆಚ್ಚಾಗಿದೆ.
ಕ್ಷುದ್ರ ಗ್ರಹ ಭೂಮಿಗೆ ಅಪ್ಪಳಿಸಿದ ಬಳಿಕ ಹೆಚ್ಚಿನ ಸಸ್ಯಗಳು ಮತ್ತು ಪ್ರಾಣಿಗಳು ಸತ್ತಿರಬೇಕು, ಹಾಗಾಗಿ, ಬದುಕುಳಿದ ಪ್ರಾಣಿಗಳು ಸತ್ತ ಸಸ್ಯಗಳು ಮತ್ತು ಪ್ರಾಣಿಗಳನ್ನು ತಿನ್ನುವ ಕೀಟಗಳನ್ನು ತಿಂದು ಬದುಕಿದವು. ಅಷ್ಟೊಂದು ಕಡಿಮೆ ಆಹಾರ ಲಭ್ಯವಿದ್ದ ಹಿನ್ನೆಲೆಯಲ್ಲಿ, ಸಣ್ಣ ಜೀವ ಪ್ರಭೇದಗಳು ಮಾತ್ರ ಬದುಕಿದವು. ಭೂಮಿಯ ಮೇಲೆ ಬದುಕುಳಿದ ಅತ್ಯಂತ ದೊಡ್ಡ ಪ್ರಾಣಿಗಳು ಬೆಕ್ಕಿಗಿಂತ ದೊಡ್ಡದಿರಲಿಕ್ಕಿಲ್ಲ ಎಂದು ಅಧ್ಯಯನ ತಿಳಿಸಿದೆ.